Ad Widget .

ರಾಣಿಝರಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಹುಚ್ಚಾಟ| ಉಜಿರೆ ಮೂಲದ ಐವರು ಪೊಲೀಸ್ ವಶ

ಸಮಗ್ರ ನ್ಯೂಸ್: ರಾಣಿಝರಿ ರಸ್ತೆಯಲ್ಲಿ ಹುಚ್ಚಾಟ ನಡೆಸಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ಬೈಕ್ ಸವಾರರನ್ನು ಪೊಲೀಸರು ಬಂಧಿಸಿದ್ದಾರೆ. ಐವರು ಪುಂಡರನ್ನು ಬಾಳೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Ad Widget . Ad Widget .

ಗಿರೀಶ್, ಗಣೇಶ್, ಪ್ರವೀಣ, ರೋಹಿತ್, ಗಣೇಶ್ ಭಂಡಾರಿ ಬಂಧಿತರು. 4 ಬೈಕ್​ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ರಾಣಿಝರಿ ಫಾಲ್ಸ್ ರಸ್ತೆಯಲ್ಲಿ ಹುಚ್ಚಾಟ ಮೆರೆದು ಪ್ರವಾಸಿಗರಿಗೆ ಕಿರಿಕಿರಿ ಮಾಡಿದ್ದರು.

Ad Widget . Ad Widget .

ಯುವಕರ ಬೈಕ್ ವೀಲ್ಹಿಂಗ್ ವಿಡಿಯೋ ವೈರಲ್ ಬೆನ್ನಲ್ಲೇ ಬಾಳೂರು ಪೊಲೀಸ್ ‌ಠಾಣೆಯಲ್ಲಿ ಐವರ ವಿರುದ್ಧ ಕಲಂ 281,292 ಬಿಎನ್​ಎಸ್ ಅಡಿ ಎಫ್​ಐಆರ್​ ದಾಖಲಿಸಲಾಗಿತ್ತು.

ಕಾಫಿನಾಡಿನಲ್ಲಿ ಪ್ರವಾಸಿಗರ ಮೋಜುಮಸ್ತಿ ಮುಂದುವರೆದಿದೆ. ಮೂಡಿಗೆರೆ ತಾಲೂಕಿನ ಮೈದಾಡಿ ರಸ್ತೆಯಲ್ಲಿರುವ ಕಿರು ಜಲಪಾತದಲ್ಲಿ ಮೋಜುಮಸ್ತಿ ಮಾಡಿತ್ತಿದ್ದ ಮಂಗಳೂರು ಮೂಲದ 6 ಜನರ ವಿರುದ್ಧ ಕೂಡ ಎಫ್​ಐಆರ್​ ಹಾಕಲಾಗಿದೆ.

Leave a Comment

Your email address will not be published. Required fields are marked *