Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಈ ವಾರದ ದ್ವಾದಶ ರಾಶಿಗಳ ವಾರಭವಿಷ್ಯ ಏನಿದೆ ತಿಳಿಯೋಣ…

Ad Widget . Ad Widget .

ಮೇಷ:
ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ದಿನ ಕಳೆದಂತೆ ಪ್ರಯತ್ನಕ್ಕೆ ತಕ್ಕ ಶುಭ ಫಲಗಳನ್ನು ಪಡೆಯುವಿರಿ. ಕಷ್ಟದ ಸಂದರ್ಭದಲ್ಲಿ ಸ್ನೇಹಿತರಿಗೆ ಸಹಾಯ ಮಾಡುವಿರಿ. ಅತಿಯಾದ ಜವಾಬ್ದಾರಿಯಿಂದ ಬೇಸರಗೊಳ್ಳುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ವೇಳೆ ಸಾಲದಾಗುತ್ತದೆ. ಹಣಕಾಸಿನ ಕೊರತೆ ಕಡಿಮೆಯಾಗಿ ಮಾನಸಿಕವಾಗಿ ಸದೃಢವಾಗುವಿರಿ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ದಾಂಪತ್ಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಇರುತ್ತವೆ. ಉದ್ಯೋಗ ಬದಲಾಯಿಸುವ ಯತ್ನದಲ್ಲಿ ಯಶಸ್ವಿಯಾಗುವಿರಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವಿರಿ.

Ad Widget . Ad Widget .

ವೃಷಭ:
ದೈನಂದಿನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಕುಟುಂಬದಲ್ಲಿನ ಸಹಕಾರದ ಗುಣದಿಂದಾಗಿ ನೆಮ್ಮದಿ ಇರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮವನ್ನು ಅನುಸರಿಸುವಿರಿ. ಉದ್ಯೋಗದಲ್ಲಿ ಅನುಕೂಲಕಾರಿ ಬದಲಾವಣೆಗಳು ಉಂಟಾಗಲಿವೆ. ಅನಿರೀಕ್ಷಿತ ಕೆಲಸ ಕಾರ್ಯಗಳ ಕಾರಣ ದೈನಂದಿನ ಕಾರ್ಯಕ್ರಮಗಳ ಬದಲಾವಣೆ ಮಾಡಬೇಕಾಗುತ್ತದೆ. ದಂಪತಿ ನಡುವೆ ಉತ್ತಮ ಅನುಬಂಧ ಕಂಡುಬರುತ್ತದೆ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮದಾಗಲಿದೆ. ಸ್ವಂತ ಬಳಕೆಗಾಗಿ ವಾಹನವೊಂದನ್ನು ಕೊಳ್ಳುವಿರಿ. ಹೊಸ ಹಣಕಾಸಿನ ಯೋಜನೆಯನ್ನು ರೂಪಿಸುವಿರಿ. ಹಟದ ಗುಣವನ್ನು ಕಡಿಮೆ ಮಾಡುವುದು ಒಳ್ಳೆಯದು.

ಮಿಥುನ:
ಮುಗಿಯದ ಕೆಲಸ ಕಾರ್ಯವಿದ್ದರೂ ನೆಮ್ಮದಿಯಿಂದ ಬಾಳುವಿರಿ. ನಿಮ್ಮಿಂದಾಗಿ ಕುಟುಂಬದಲ್ಲಿ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಸಮಯಾಧಾರಿತ ತೀರ್ಮಾನಗಳ ಕಾರಣ ಜೀವನದ ತೊಂದರೆಗಳು ಮರೆಯಾಗಲಿವೆ. ಜೀವನದಲ್ಲಿ ನಿರಂತರ ಬದಲಾವಣೆಗಳು ಆತಂಕವನ್ನು ಉಂಟುಮಾಡಲಿವೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಉದ್ಯೋಗದ ಕಾರ್ಯ ನಿರ್ವಹಣೆಗೆ ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಆತಂಕದ ಸಮಯದಲ್ಲಿ ತಂದೆಯಿಂದ ಹಣದ ಸಹಾಯ ದೊರೆಯಲಿದೆ. ನಿಮ್ಮ ಮನಸ್ಸು ಒಳ್ಳೆಯದಾದರೂ ದುಡುಕಿ ಮಾತನಾಡಿ ವಿವಾದವನ್ನು ಎದುರಿಸುವಿರಿ. ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ.

ಕಟಕ:
ಖರ್ಚು ವೆಚ್ಚಗಳನ್ನು ಸರಿದೂಗಿಸುವಷ್ಟು ಆದಾಯ ದೊರೆಯಲಿದೆ. ಸಂಗಾತಿಯ ಉದ್ಯೋಗದಲ್ಲಿ ವಿವಾದ ಎದುರಾಗಲಿದೆ. ಮಕ್ಕಳ ಜೊತೆ ಕಿರುಪ್ರವಾಸಕ್ಕೆ ತೆರಳುವಿರಿ. ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳಿಗೆ ಹಣ ವೆಚ್ಚ ಮಾಡುವಿರಿ. ದುಬಾರಿ ವೆಚ್ಚದ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಯಾವುದೇ ತಪ್ಪಾಗದಂತೆ ಹಣಕಾಸಿನ ವ್ಯವಹಾರದಲ್ಲಿ ತಲ್ಲೀನರಾಗುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಬರಲಿರುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವಿರಿ. ಭವಿಷ್ಯದ ದಿನಗಳಿಗಾಗಿ ಹಣ ಉಳಿಸುವ ಯೋಜನೆ ಮಾಡುವಿರಿ. ಸರ್ಕಾರದ ಅನುದಾನದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಸ್ವಗೃಹ ಭೂಲಾಭವಿದೆ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ.

ಸಿಂಹ:
ಸಿಡುಕುತನದ ಕಾರಣ ಆತ್ಮೀಯರೂ ನಿಮ್ಮ ಮಾತನ್ನು ಆಲಿಸುವುದಿಲ್ಲ. ಕುಟುಂಬದಲ್ಲಿ ಶಾಂತಿ ನೆಮ್ಮದಿ ದೂರವಾಗುತ್ತದೆ. ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ಸುಖ ಜೀವನ ನಿಮ್ಮದಾಗಲಿದೆ. ತಪ್ಪು ಗ್ರಹಿಕೆಯಿಂದಾಗಿ ಉದ್ಯೋಗವನ್ನು ಬದಲಾಯಿಸುವಿರಿ. ನಿಮ್ಮ ತಪ್ಪು ನಿರ್ಧಾರವನ್ನು ಎಲ್ಲರೂ ವಿರೋಧಿಸುತ್ತಾರೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವ ಮನಸ್ಸು ನಿಮಗೆ ಇರುವುದಿಲ್ಲ. ವಿದ್ಯಾರ್ಥಿಗಳು, ದೊರೆವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ. ಅನಿರೀಕ್ಷಿತವಾಗಿ ಹಣದ ಸಹಾಯ ದೊರೆಯುತ್ತದೆ. ತಂದೆಗೆ ಸಂಭಂದಿಸಿದ ಭೂವಿವಾದ ಅಂತ್ಯಗೊಳ್ಳುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ಕೆಲವರ ವಿರೋಧದ ನಡುವೆಯೂ ಯಶಸ್ಸು ಗಳಿಸುವಿರಿ.

ಕನ್ಯಾ:
ಆದಾಯದಲ್ಲಿನ ಹೆಚ್ಚಳದ ಜೊತೆಗೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಉದ್ಯೋಗದಲ್ಲಿ ಆತಂಕದ ಕ್ಷಣ ಎದುರಾದರೂ ಯಾವುದೇ ತೊಂದರೆ ಕಾಣುವುದಿಲ್ಲ. ಬೇರೆಯವರ ಬುದ್ಧಿಮಾತನ್ನು ಕೇಳದೆ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಎದುರಾಗದು. ಸ್ವಂತ ಬಳಕೆಗಾಗಿ ನೂತನ ವಾಹನವನ್ನು ಕೊಳ್ಳುವಿರಿ. ಕುಟುಂಬದಲ್ಲಿ ಶಾಂತಿ ಸಾಮರಸ್ಯ ಕಂಡು ಬರುತ್ತದೆ. ಭೂವ್ಯಹಾರದ ಮದ್ಯಸ್ಥಿಕೆಯಲ್ಲಿ ಉತ್ತಮ ಲಾಭ ಗಳಿಸುವಿರಿ. ಹಣದ ತೊಂದರೆ ಇರುವುದಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನ ಮಾನ ಸಂಪಾದಿಸುವಿರಿ. ಸ್ನೇಹಿತರ ಸಹಯೋಗದಲ್ಲಿ ವ್ಯಾಪಾರ ಆರಂಭಿಸುವ ಆಸೆ ಕೈಗೂಡುತ್ತದೆ.

ತುಲಾ:
ಜನ ಸಾಮಾನ್ಯರ ಜೊತೆ ಪ್ರೀತಿ ವಿಶ್ವಾಸದಿಂದ ಬೆರೆಯುವಿರಿ. ಚಂಚಲ ಮನಸ್ಸನ್ನು ತೊರೆದರೆ ಸಮಾಜದ ಕೇಂದ್ರಬಿಂದುವಾಗುವಿರಿ. ಫಲಿತಾಂಶದ ಬಗ್ಗೆ ಯೋಚಿಸದೆ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಪ್ರತಿಷ್ಠಿತ ಕಂಪನಿಯೊಂದರಲ್ಲಿ ನೌಕರಿ ದೊರೆಯುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಆತಂಕದ ಪರಿಸ್ಥಿತಿ ಎದುರಾಗಲಿದೆ. ಕುಟುಂಬದಲ್ಲಿ ಸುಖ ಮತ್ತು ಸಂತೃಪ್ತಿಯ ಜೀವನ ನಡೆಸುವಿರಿ. ಒಳ್ಳೆಯ ಆಹಾರದ ಅಭ್ಯಾಸದಿಂದಾಗಿ ಆರೋಗ್ಯ ಕಾಪಾಡಿಕೊಳ್ಳುವಿರಿ. ವಂಶದ ಹಿರಿಯರ ಸಹಾಯ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಸಂಗೀತ ನಾಟ್ಯ ಬಲ್ಲವರಿಗೆ ವಿಶೇಷ ಅವಕಾಶ ದೊರೆಯಲಿದೆ. ಆದಾಯದಲ್ಲಿ ಪ್ರಗತಿ ಕಂಡು ಬರುತ್ತದೆ.

ವೃಶ್ಚಿಕ:
ಕೌಟುಂಬಿಕ ವಿವಾದದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ನಿಂತುಹೋಗಿದ್ದ ವ್ಯಾಪಾರ ಆರಂಭಿಸಿ ಉತ್ತಮ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ನಿಮಗೆ ಉನ್ನತ ಸ್ಥಾನ ದೊರೆತು ಹಣದ ತೊಂದರೆ ಮರೆಯಾಗಲಿದೆ. ನಿಮ್ಮ ಮಕ್ಕಳಿಗೆ ಪರಸ್ಥಳದಲ್ಲಿ ಉದ್ಯೋಗ ದೊರೆಯುತ್ತದೆ. ತಂದೆಗೆ ಸೇರಿದ ಭೂಮಿ ನಿಮ್ಮ ಪಾಲಾಗುತ್ತದೆ. ಹಳೆಯ ವಾಹನವನ್ನು ಮಾರಾಟ ಮಾಡಿ ಹೊಸ ವಾಹನ ಕೊಳ್ಳುವಿರಿ. ಉದ್ಯೋಗ ಬದಲಿಸುವಿರಿ. ದಾಂಪತ್ಯ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ನೆರೆಹೊರೆಯ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯಿರಿ. ಮುಂಗೋಪ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

ಧನಸ್ಸು:
ಉದ್ಯೋಗದಲ್ಲಿ ಸಮಸ್ಯೆ ಎದುರಾಗುತ್ತದೆ. ಜೀವನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲವೆಂದು ಸಾಧಿಸಿ ತೋರಿಸುವಿರಿ. ಸಮಾಜದ ಮುಖ್ಯಸ್ಥರನ್ನು ಭೇಟಿ ಮಾಡುವ ಅವಕಾಶ ದೊರೆಯುತ್ತದೆ. ಎಲ್ಲರೊಂದಿಗೆ ಸುಖ ಸಂತೋಷದಿಂದ ಜೀವನ ನಡೆಸುವಿರಿ. ವ್ಯಾಪಾರೋದ್ದೇಶಕ್ಕಾಗಿ ದೊಡ್ಡ ವಾಹನವನ್ನು ಖರೀದಿಸುವಿರಿ. ನವ ವಿವಾಹಿತರಿಗೆ ಸಂತಾನ ಲಾಭವಿದೆ. ವಂಶದ ಹಿರಿಯರಿಗೆ ಸೇರಿದ ಆಸ್ತಿ ವಿವಾದವನ್ನು ಪರಿಹರಿಸುವಿರಿ. ದೃಢ ಸಂಕಲ್ಪದಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗುವಿರಿ. ಬಿಡುವಿಲ್ಲದ ಕಾರ್ಯಕ್ರಮದ ನಡುವೆ ವಿಶ್ರಾಂತಿ ದೊರೆಯುವುದಿಲ್ಲ. ನೆರೆಹೊರೆಯ ಜನರ ಜೊತೆ ವಾದ ವಿವಾದ ಉಂಟಾಗಲಿದೆ.

ಮಕರ:
ಕೆಲಸದಲ್ಲಿನ ನಿಮ್ಮ ಸಮರ್ಪಣಾ ಮನೋಭಾವನೆ ಎಲ್ಲರಿಗೂ ಇಷ್ಟವೆನಿಸುತ್ತದೆ. ನಿಮ್ಮ ಕುಟುಂಬದಲ್ಲಿನ ಕಾರ್ಯ ನಿರ್ವಹಿಸುವ ರೀತಿ ಎಲ್ಲರಿಗೂ ಮಾದರಿಯಾಗುತ್ತದೆ. ಕಷ್ಟಗಳು ಎದುರಾದರೂ ಭಯ ಪಡುವುದಿಲ್ಲ. ಸ್ನೇಹ ಸಂಬಂಧವನ್ನೂ ಲೆಕ್ಕಿಸದೆ ನ್ಯಾಯದ ಪಕ್ಷಪಾತಿಯಾಗಿ ಬಾಳುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಗೌರವದಿಂದ ನೋಡುವಿರಿ. ಉದ್ಯೋಗದಲ್ಲಿ ಉನ್ನತ ದರ್ಜೆಗೆ ಬಡ್ತಿ ದೊರೆಯುತ್ತದೆ. ನಿಮ್ಮ ಮಕ್ಕಳು ಆತ್ಮೀಯರ ಸಹಕಾರದಿಂದ ವಿದೇಶಕ್ಕೆ ತೆರಳಲಿದ್ದಾರೆ. ಕುಟುಂಬದ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಂಗಾತಿಯ ಮಾತುಕತೆ ಭಾವನೆಗಳನ್ನು ಗೌರವಿಸುವಲ್ಲಿ ವಿಫಲರಾಗುವಿರಿ.

ಕುಂಭ:
ಮೌನ ತೊರೆದು ಮನಬಿಚ್ಚಿ ಮಾತನಾಡಿದಲ್ಲಿ ಮನದ ಆಸೆಗಳು ನೆರವೇರುತ್ತವೆ. ಕುಟುಂಬದ ಅತಿ ಮುಖ್ಯ ಕೆಲಸವೊಂದು ಸುಲಭವಾಗಿ ನೆರವೇರಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆತು ದೂರದ ಊರಿಗೆ ತೆರಳುವಿರಿ. ಮಕ್ಕಳಿಗೆ ಖ್ಯಾತ ಸಂಸ್ಥೆಯಲ್ಲಿ ಉನ್ನತಾಧಿಕಾರ ದೊರೆಯಲಿದೆ. ಸಮಯ ಸಂದರ್ಭವನ್ನು ನಿಮ್ಮ ಒಳಿತಿಗೆ ಬಳಸಿಕೊಳ್ಳುವಿರಿ. ಕುಟುಂಬದಲ್ಲಿ ಬೇಸರದ ಸನ್ನಿವೇಶವೊಂದು ಎದುರಾಲಿದೆ. ತಾಯಿಗೆ ಸೇರಬೇಕಾಗಿದ್ದ ಆಸ್ತಿ ವಿವಾದ ಪರಿಹಾರಗೊಳ್ಳಲಿದೆ. ಉದ್ಯೋಗದಲ್ಲಿ ನಿಮ್ಮ ಕೆಲಸದ ಪ್ರತಿಫಲ ಪರರ ಪಾಲಾಗಲಿದೆ. ಕುಟುಂಬದ ಹಿರಿಯರು ಒಪ್ಪುವಂಥ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿನ ಆಂತರ್ಯವನ್ನು ತಿಳಿಯುವುದು ಬಹಳ ಕಷ್ಟ.

ಮೀನ:
ದೊರೆಯುವ ಅವಕಾಶಗಳ ಪ್ರಯೋಜನ ಪಡೆದುಕೊಳ್ಳಿ. ಬೇರೆಯವರ ಸಹಾಯವನ್ನು ತಿರಸ್ಕರಿಸುವಿರಿ. ಆತ್ಮೀಯರ ಸ್ನೇಹವನ್ನು ಸದುಪಯೋಗಮಾಡಿಕೊಳ್ಳುವಲ್ಲಿ ಯಶಸ್ಸು ಕಾಣುವಿರಿ. ಅಸಾಧಾರಣ ಕೆಲಸ ಕಾರ್ಯಗಳನ್ನು ಪೂರೈಸಲು ಪ್ರಯತ್ನ ಮಾಡುವಿರಿ. ಬೇರೆಯವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲರಾಗುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಅದೃಷ್ಟವಿರುತ್ತದೆ. ವಿದ್ಯಾರ್ಥಿಗಳು ಹೊಸ ಮತ್ತು ನವೀನ ವಿಚಾರಗಳ ಬಗ್ಗೆ ಗಮನ ಹರಿಸುತ್ತಾರೆ. ಮಕ್ಕಳು ಹಿರಿಯರ ಹಾದಿಯಲ್ಲಿ ನಡೆಯುತ್ತಾರೆ. ಧಾರ್ಮಿಕ ಕಾರ್ಯವೊಂದಕ್ಕೆ ಹೆಚ್ಚಿನ ಹಣ ವೆಚ್ಚವಾಗುತದೆ. ಸಂತಾನಲಾಭವಿದೆ. ವಿದೇಶದ ಪ್ರಯಾಣ ಯೋಗವಿದೆ. ಪ್ರಾಣಿ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಮಾಡುವಿರಿ.

Leave a Comment

Your email address will not be published. Required fields are marked *