ಉಪ್ಪಿನಂಗಡಿ: ಕೇರಳ‌ ಲಾಟರಿಯಲ್ಲಿ ಕೋಟಿ ಬಹುಮಾನ ವದಂತಿ| ಫೋನ್ ಕರೆಗಳಿಂದ ಟೈಲರ್ ಸುಸ್ತೋಸುಸ್ತು

ಸಮಗ್ರ ನ್ಯೂಸ್: ಕೇರಳ ರಾಜ್ಯ ಲಾಟರಿಯ ಒಂದು ಕೋಟಿ ರೂಪಾಯಿ ಬಹುಮಾನವು ಇಲ್ಲಿನ ಟೈಲರ್‌ ಒಬ್ಬರಿಗೆ ಒಲಿದಿದೆ ಎಂಬ ಸುದ್ದಿ ಹರಡಿ ಅಭಿನಂದನೆಯ ಕರೆ, ಸಹಾಯ ಯಾಚನೆಯ ಕರೆಗೆ ಟೈಲರ್‌ ಹೈರಾಣಾಗುವಂತಾಗಿದೆ.

Ad Widget ... ..

ಪುತ್ತೂರು ತಾಲೂಕು ಉಪ್ಪಿನಂಗಡಿಯ ರಥಬೀದಿಯಲ್ಲಿರುವ ಗಣಪತಿ ಮಠದ ಬಳಿಯಲ್ಲಿ ಟೈಲರ್‌ ವೃತ್ತಿ ಮಾಡಿಕೊಂಡಿರುವ ಕೂಸಪ್ಪ ಅವರಿಗೆ ಒಂದು ಕೋಟಿ ರೂಪಾಯಿ ಒಲಿದಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು.

Ad Widget

ಮಾತ್ರವಲ್ಲದೆ ಅದರಲ್ಲಿ 30 ಲಕ್ಷ ರೂಪಾಯಿ ತೆರಿಗೆ ನೆಲೆಯಲ್ಲಿ ಕಡಿತಗೊಂಡು 70 ಲಕ್ಷ ರೂಪಾಯಿ ಅವರ ಖಾತೆಗೆ ಜಮೆಯಾಗಿದೆ ಎಂಬ ವಿವರ ಸೇರಿಸಿ ಬಾಯಿಯಿಂದ ಬಾಯಿಗೆ ಸಾಗಿತು. ಈ ಬಗ್ಗೆ ಅವರನ್ನು ಮಾಧ್ಯಮದವರು ಭೇಟಿಯಾದಾಗ ಅವರಿಗೆ ಲಾಟರಿ ಬಹುಮಾನ ಬಂದಿಲ್ಲ ಎಂಬುದು ತಿಳಿಯಿತು.

ತನಗೆ ಯಾವ ಲಾಟರಿಯೂ ಲಭಿಸಿಲ್ಲ. ಇಂಥ ಸುದ್ದಿ ಹೇಗೆ ಸೃಷ್ಟಿಯಾಯಿತು ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ನನಗೆ ದೂರವಾಣಿ ಕರೆಗಳಿಗೆ ಉತ್ತರಿಸಿ ಸಾಕುಸಾಕಾಗಿದೆ ಎಂದರು.

Leave a Comment

Your email address will not be published. Required fields are marked *