Ad Widget .

ಅನಂತ್‌ ಅಂಬಾನಿ ಮದುವೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯ ತಿನಿಸುಗಳು..!

ಸಮಗ್ರ ನ್ಯೂಸ್: ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹವು ಅದ್ಧೂರಿಯಾಗಿ ನೆರವೇರಿಸಿದೆ. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ದೇಶ-ವಿದೇಶಗಳ ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳ ಸಮ್ಮುಖದಲ್ಲಿ ನವ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇನ್ನು ಮದುವೆ ಆಗಮಿಸಿದ ಸಾವಿರಾರು ಗಣ್ಯರಿಗೆ ಅಂಬಾನಿ ಕುಟುಂಬಸ್ಥರು ಭರ್ಜರಿ ಭೋಜನ ಹಾಕಿಸಿದ್ದಾರೆ. ಅದರಲ್ಲೂ, ಬೆಂಗಳೂರಿನಲ್ಲಿರುವ, ಖ್ಯಾತ ರಾಮೇಶ್ವರಂ ಕೆಫೆಯ ಹಲವು ತಿನಿಸುಗಳು ಕೂಡ ಮದುವೆ ಮನೆಯ ಊಟದ ಸಾಲಿಗೆ ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ.

Ad Widget . Ad Widget .

ಈ ವಿವಾಹಕ್ಕೆ ಭೋಜನದ ಮೆನು ಈಗ ಲಭ್ಯವಾಗಿದ್ದು, ರಾಮೇಶ್ವರಂ ಕೆಫೆಯ ಹಲವು ತಿನಿಸುಗಳು ಕೂಡ ಇದೆ. ರಾಮೇಶ್ವರಂ ಕೆಫೆಯ ದೋಸೆ, ಬಟರ್‌ ದೋಸೆ, ತುಪ್ಪದ ದೋಸೆ, ಗಾರ್ಲಿಕ್‌ ದೋಸೆ, ಪೆಸರಟ್ಟು ದೋಸೆ, ಇಡ್ಲಿ, ತಟ್ಟೆ ಇಡ್ಲಿ (ಪ್ಲೇನ್‌ & ಪೋಡಿ), ತುಪ್ಪದ ಪಡ್ಡು, ಬೋಂಡಾ ಸೂಪ್‌ ಹಾಗೂ ಫಿಲ್ಟರ್‌ ಕಾಫಿಯನ್ನು ಮದುವೆಯ ಭೋಜನದಲ್ಲಿ ಬಡಿಸಲಾಗಿದೆ ಎಂದು ತಿಳಿದುಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *