ನೆಲ್ಯಾಡಿ: ರಾ.ಹೆದ್ದಾರಿ 75ರಲ್ಲಿ ಭೀಕರ ಅಪಘಾತ| ಮಂಗಳೂರು ಮೂಲದ ಮೆಡಿಕಲ್ ರೆಪ್ರೆಸೆಂಟೇಟಿವ್ ದುರ್ಮರಣ

ಸಮಗ್ರ ನ್ಯೂಸ್: ಬೈಕ್ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜು.12 ರಂದು ಮಧ್ಯಾಹ್ನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೊಲ್ಪೆಯಲ್ಲಿ ನಡೆದಿದೆ. ಮಂಗಳೂರು ಕೋಡಿಕ್ಕಲ್ ನಿವಾಸಿ, ಬೈಕ್ ಸವಾರ ಪ್ರಣಮ್ ಕೋಟ್ಯಾನ್ ಮೃತಪಟ್ಟ ದುರ್ದೈವಿ .

Ad Widget ... ..

ಮೆಡಿಕಲ್ ರೆಪ್ರಸೆಂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಹೋಗುತ್ತಿದ್ದ ವೇಳೆ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಪಿಕಪ್ ನಡುವೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೊಲ್ಪೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

Ad Widget

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟರು ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *