Ad Widget .

ಹೆಚ್ಚುತ್ತಿರುವ ಡೆಂಗ್ಯೂ ಜ್ವರ/ ನಿಯಂತ್ರಣಕ್ಕೆ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸಮಗ್ರ ನ್ಯೂಸ್‌: ಕರ್ನಾಟಕದಲ್ಲಿ ಡೆಂಗ್ಯೂ ಜ್ವರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡೆಂಗ್ಯೂ ಜ್ವರವನ್ನು ಎದುರಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೀಗಾಗಿ ಡೆಂಗ್ಯೂ ಜ್ವರದ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಬಿಬಿಎಂಪಿ ಮತ್ತು ಡಿಎಚ್‌ಒ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಕೆಳಗಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಾರ್ಗಸೂಚಿಗಳು ಹೀಗಿವೆ:

Ad Widget . Ad Widget .
  • ಕಂಟ್ರೋಲ್ ರೂಮ್ ಅಥವಾ ವಾರ್ ರೂಂ ಸ್ಥಾಪನೆ. ಪಾಲಿಕೆ, ಜಿಲ್ಲಾಮಟ್ಟದಲ್ಲಿ ಟಿಎಸಿ ಸಭೆ ಮಾಡುವಂತೆ ಸೂಚನೆ.
  • ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಗೊಮ್ಮೆ ಮನೆ ಸರ್ವೆ ಮಾಡಬೇಕು. ಪ್ರತಿ ಶುಕ್ರವಾರ ಫೀಲ್ಡ್ ವರ್ಕ್ ಮಾಡಿ ಲಾರ್ವ ನಾಶ ಪಡಿಸಬೇಕು.
  • ಡೆಂಗ್ಯೂ ಹಾಟ್ ಸ್ಪಾಟ್ ಗುರುತಿಸಬೇಕು ಅದರ ಮಾಹಿತಿಯನ್ನ ಕಂಟ್ರೋಲ್ ರೂಂಗೆ ನೀಡಬೇಕು. ಹಾಟ್ ಸ್ಪಾಟ್‌ಗಳಲ್ಲಿ ಲಾರ್ವ ನಾಶವನ್ನ ತೀವ್ರಗತಿಗೊಳಿಸಬೇಕು.
  • ಫೀವ‌ರ್ ಕ್ಲಿನಿಕ್‌ಗಳನ್ನು ತೆರೆಯಬೇಕು.
  • ಹಾಟ್ ಸ್ಪಾಟ್‌ಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆನಿರೋಧಕ ಬೇವಿನ ಎಣ್ಣೆಯನ್ನ ಕೈಕಾಲುಗಳಿಗೆ ಹಚ್ಚಲು ನೀಡಬೇಕು.
  • ಡೆಂಗ್ಯೂ ಗುಣಲಕ್ಷಣಗಳು ಬಂದಾಗಿನ 14 ದಿನಗಳ ಕಾಲ ರೋಗಿಯ ಮಾಹಿತಿಯನ್ನ ವಾರ್ ರೂಂಗೆ ತಿಳಿಸಬೇಕು.
  • ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 5 ಬೆಡ್ ಮೀಸಲಿಡಬೇಕು.
  • ಟೆಸ್ಟಿಂಗ್ ಕಿಟ್, ಔಷಧ, ವೈಟ್ ಪ್ಲೇಟ್ ಲೇಸ್ಟ್‌ಗಳು ಇರುವುದರ ಕುರಿತು ಮಾಹಿತಿ ನೀಡಬೇಕು.
  • ಡೆಂಗ್ಯೂ ನಿರ್ವಹಣೆ ಸಂಬಂಧ ಶಿಷ್ಟಾಚಾರನ್ನು ಕಡ್ಡಾಯವಾಗಿ ಎಲ್ಲಾ ವೈದ್ಯರು ಪಾಲಿಸುವುದು.
  • ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ, ಡೆಂಗ್ಯೂ ಪ್ರಕರಣಗಳ ನಿಯಂತ್ರಣಕಾಗಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

Leave a Comment

Your email address will not be published. Required fields are marked *