ಸುಬ್ರಹ್ಮಣ್ಯ: ಅನುಮತಿ ಪಡೆಯದೇ ಜಾನುವಾರು ಸಾಗಾಟ| ಸಕಲೇಶಪುರದ ಮೂಲದ ಚಾಲಕ, ವಾಹನ ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್: ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆಯಾಗಿದ್ದು, ಪಿಕಪ್‌ ವಾಹನ, ಪಿಕಪ್‌ ಚಾಲಕ, ಜಾನುವಾರುಗಳನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಠಾಣಾ ವ್ಯಾಪ್ತಿಯ ಪಂಜದಲ್ಲಿ ನಡೆದಿದೆ.

Ad Widget ... ..

ಬೆಳ್ಳಾರೆ ಕಡೆಯಿಂದ ಪಂಜದ ಕಡೆ ಬರುತ್ತಿದ್ದ ಪಿಕಪ್‌ ವಾಹನದಲ್ಲಿ ಎರಡು ದನ ಹಾಗೂ ಎರಡು ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ವಾಹನ ಸಹಿತ ಚಾಲಕ, ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದರು.

Ad Widget

ವಾಹನ ಚಾಲಕ ಸಕಲೇಶಪುರ ಮೂಲದ ಲೋಹಿತ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಜಾನುವಾರುಗಳನ್ನು ಚೊಕ್ಕಾಡಿಯಿಂದ ಸಾಕುವ ಉದ್ದೇಶದಿಂದ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದ್ದು, ಆದರೆ ಅನುಮತಿ ಪಡೆಯದೆ ನಿಯಮಬಾಹಿರವಾಗಿ ಸಾಗಾಟ ನಡೆಸಿದ ಆರೋಪ ಕೇಳಿಬಂದಿದೆ.

Leave a Comment

Your email address will not be published. Required fields are marked *