Ad Widget .

ಉಡುಪಿ: ಇಲ್ಲಿ‌ ಎಣ್ಣೆ ಹೊಡೆಯೋರಿಗೂ ನೀಡಲಾಗುತ್ತೆ ಉಚಿತ ವಾಹನ ವ್ಯವಸ್ಥೆ!?| ಆಟೋದ ಮೇಲೊಂದು ವಿಭಿನ್ನ ಬರಹ ವೈರಲ್

ಸಮಗ್ರ ನ್ಯೂಸ್: ಮದ್ಯಪಾನ ಪ್ರಿಯರಿಗೆ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಕುಡಿದಾದ ಬಳಿಕ ವಾಹನ ಓಡಿಸುವುದು. ಹಾಗೊಮ್ಮೆ ಹೇಗೋ ಕಷ್ಟ ಪಟ್ಟು ವಾಹನ ಓಡಿಸಿಕೊಂಡು ಹೋದರು ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಅದಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದಿಲ್ಲ.

Ad Widget . Ad Widget .

ಯಾಕೆಂದರೆ ಒಂದೊಮ್ಮೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡರೂ ಸಹ ಮದ್ಯದ ಅಮಲಿನಲ್ಲಿ ಅಪಘಾತವಾದರೆ ಹೇಗೋ ಎಂಬ ಭೀತಿಯೂ ಕಾಡುತ್ತಿರುತ್ತದೆ.

Ad Widget . Ad Widget .

ಇದಕ್ಕೆ ಪರಿಹಾರವೆಂಬಂತೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಅಜೆಕಾರುವಿನಲ್ಲಿರುವ ರಚನಾ ಬಾರ್ ಅಂಡ್ ರೆಸ್ಟೋರೆಂಟ್ ಮಾರ್ಗ ಒಂದನ್ನು ಹುಡುಕಿಕೊಂಡಿದೆ ಎನ್ನಲಾಗಿದ್ದು, ತಮ್ಮಲ್ಲಿಗೆ ಬರುವವರಿಗೆ ಉಚಿತ ವಾಹನದ ವ್ಯವಸ್ಥೆ ಎಂದು ಆಟೋ ಒಂದರ ಮೇಲೆ ಬೋರ್ಡ್ ಹಾಕಲಾಗಿದೆ. ಈ ಬೋರ್ಡ್ ಹೊಂದಿರುವ ಆಟೋದ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂಬುದು ತಿಳಿದು ಬಂದಿಲ್ಲ.

ಈ ಬಾರ್ ಬಹಳ ಹಿಂದೆಯೇ ಬಂದ್ ಆಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಆದರೆ ಹಳೆಯ ಫೋಟೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಖಂಡಿತ.

Leave a Comment

Your email address will not be published. Required fields are marked *