Ad Widget .

ಕೊಡಗಿನ‌ ಪೊನ್ನಂಪೇಟೆಯಲ್ಲೊಂದು ಅಮಾನವೀಯ ಘಟನೆ| ಡ್ರಾಪ್ ಕೇಳಿದ ಬಾಲಕಿ‌‌ಯರ ಮೇಲೆ ಐವರಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಡ್ರಾಪ್ ಕೇಳಿದ ಬಾಲಕಿ‌ ಮೇಲೆ ತಮ್ಮ‌ ಜೊತೆಯಲ್ಲಿ‌ ಬಂದಿದ್ದ ಯುವಕರಿಂದಲೇ ಅತ್ಯಾಚಾರ ಮಾಡಿರುವ ಘಟನೆ ಜೂನ್ 9 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Ad Widget . Ad Widget .

ರಸ್ತೆಯಲ್ಲಿ ನಡೆದು ಸಾಗುತ್ತಿದ್ದ ಮೂವರು ಬಾಲಕಿಯರು ಜೂನ್ 9ರಂದು ಬರುತ್ತಿದ್ದ ಕಾರನ್ನು ತಡೆದು ನಾಗರಹೊಳೆಗೆ ಡ್ರಾಪ್‌ ನೀಡುವಂತೆ ವಿನಂತಿ ಮಾಡಿದ್ದರು. ಆದರೆ ಆ ಕಾರಿನಲ್ಲಿ ಕಾಮುಕರಿರುವುದು ಇವರಿಗೆ ತಿಳಿದಿರಲಿಲ್ಲ. ಮಾರುತಿ 800 ಕಾರಿನಲ್ಲಿ ನಾಗರಹೊಳೆ‌ ಕಡೆ ಬಾಲಕಿಯರು ತೆರಳಿದ್ದು, ದಾರಿ‌ ಮಧ್ಯೆ ಕಾಫಿ ತೋಟದಲ್ಲಿ ಓರ್ವ ಬಾಲಕಿ ಮೇಲೆ ನವೀಂದ್ರ, ಅಕ್ಷಯ್​ ಎಂಬುವವರಿಂದಲೇ ಅತ್ಯಾಚಾರ ಮಾಡಲಾಗಿದೆ. ಮತ್ತೋರ್ವ ಬಾಲಕಿ‌ ಮೇಲೆ ರಾಹುಲ್, ಮನು, ಸಂದೀಪ್​​ ಎಂಬುವವರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆದರೆ ಕಾರಿನಲ್ಲಿ ಇದ್ದ ಐವರೂ ಕೂಡ ಕಾಮುಕರಾಗಿರುವುದೇ ವಿಪರ್ಯಾಸ.

Ad Widget . Ad Widget .

ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ‌ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Comment

Your email address will not be published. Required fields are marked *