Ad Widget .

ಉಡುಪಿ: ನೆರೆನೀರಲ್ಲಿ ಕೊಚ್ಚಿ ಹೋದ ಕಾರು| ಪ್ರಯಾಣಿಕರು ಜಸ್ಟ್ ಮಿಸ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಾದ್ಯಾಂತ ಮಳೆ ಆರ್ಭಟ ಜೋರಾಗಿದ್ದು, ಕನ್ನರ್ಪಾಡಿಯಲ್ಲಿ ಕಾರೊಂದು ರಸ್ತೆಯಿಂದ ಕೊಚ್ಚಿಹೋಗಿ, ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

Ad Widget . Ad Widget .

ಕಾರೊಂದು ಕನ್ನರ್ಪಾಡಿಯಲ್ಲಿ ಮಳೆ ನೀರು ಸಾಗುವ ತೋಡಿನ ಸಮೀಪ ಸಾಗುತ್ತಿದ್ದ ವೇಳೆ, ಏಕಾಏಕಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದು ಮೂವರು ಪ್ರಯಾಣಿಕರು‌ ಕಾರಿನ ಬಾಗಿಲು ಹೊಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳ‌ ಸಿಬಂದಿ ಕೊಚ್ಚಿಹೋದ ಕಾರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಉಡುಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಾದ ಗುಂಡಿಬೈಲು, ಕಲ್ಸಂಕ, ಮಠದಬೆಟ್ಟು ಜಲಾವೃತವಾಗಿವೆ. ಅಗ್ನಿಶಾಮಕ ದಳ ನಿರಂತರ ಕಾರ್ಯಚರಣೆ ನಡೆಸುತ್ತಿದ್ದು ನೆರೆಗೆ ಸಿಲುಕಿದ್ದ ಹಲವರ ರಕ್ಷಣೆ ಮಾಡಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರವಹಿಸುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ.

Leave a Comment

Your email address will not be published. Required fields are marked *