Ad Widget .

ಕಲಬುರಗಿ: ರಾತ್ರಿ ಪ್ರವಚನ ನೀಡಿದ ವಿರಕ್ತ ಮಠದ ಸ್ವಾಮೀಜಿ ಮುಂಜಾನೆ ಸಾವು!

ಸಮಗ್ರ ನ್ಯೂಸ್: ರಾತ್ರಿ ಪ್ರವಚನ ನೀಡಿದ್ದ ಸ್ವಾಮೀಜಿ ಬೆಳಗಾಗುವುದರೊಳಗೆ ಹೃದಯಾಘಾತಕ್ಕೆ ಬಲಿಯಾಗಿರುವ ದುಖಃಕರ ಘಟನೆ ಕಲಬುರಗಿಯ ವಿರಕ್ತ ಮಠದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಠಕಲ್ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ವಿಧಿವಶರಾಗಿದ್ದಾರೆ.

Ad Widget . Ad Widget .

ನಸುಕಿನ ಜಾವ ತೀವ್ರ ಹೃದಯಾಘಾತಕ್ಕೊಳಗಾಗಿ ಮಠದಲ್ಲೇ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಪ್ರಾಣ ಬಿಟ್ಟಿದ್ದಾರೆ. ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆದಿದೆ.

Ad Widget . Ad Widget .

ಜು.7ರಂದು ರಟಕಲ್ ಗ್ರಾಮದಲ್ಲಿ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿ ಪ್ರವಚನ ನೀಡಿದ್ದರು. ರಟಕಲ್ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಅದ್ಧೂರಿ ವಚನ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್, ಶಾಸಕ ಬಿಆರ್ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಗಣ್ಯರೊಂದಿಗೆ ರಾತ್ರಿ ವೇದಿಕೆ ಹಂಚಿಕೊಂಡು ಆಶೀರ್ವಚನ ನೀಡಿದ್ದ ಸ್ವಾಮಿಜಿ ಬೆಳಗಾಗುವುದರೊಳಗೆ ಹೃದಯಾಘಾತಕ್ಕೆ ಬಲಿಯಾಗಿರುವುದು ಮಠದ ಭಕ್ತರಿಗೆ ಬೇಸರ ತರಿಸಿದೆ.

Leave a Comment

Your email address will not be published. Required fields are marked *