Ad Widget .

ಬಂಟ್ವಾಳ: ನಾಪತ್ತೆಯಾಗಿದ್ದ ದೈವಪಾತ್ರಿ‌ ನದಿಯಲ್ಲಿ ಶವವಾಗಿ‌ ಪತ್ತೆ

ಸಮಗ್ರ ನ್ಯೂಸ್: ಗುರುವಾರ(ಜು.5) ಬೆಳಗಿನ ಜಾವ ಮನೆಯಿಂದ ಬಾಡಿಗೆಯ ನೆಪದಲ್ಲಿ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ರಿಕ್ಷಾ ಚಾಲಕ, ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರು ನಿವಾಸಿ ಬಾಬು ಪೂಜಾರಿಯವರ ಪುತ್ರ, ಎಣ್ಮೂರು ಶ್ರೀ ನಾಗಬ್ರಹ್ಮ ದೈವಸ್ಥಾನ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನ ಪಾತ್ರಿಯಾಗಿರುವ ಗಿರೀಶ್‌ (37) ಅವರ ಮೃತದೇಹ ಫಲ್ಗುಣಿ ನದಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ.

Ad Widget . Ad Widget .

ಅಡ್ಡೂರು ಪರಿಸರದ ಕೆಳಗಿನಕೆರೆಯಲ್ಲಿ ಗಿರೀಶ್‌ ಅವರ ಮೃತದೇಹ ಪತ್ತೆಯಾಗಿದೆ. ನದಿಗೆ ಹಾರಿ ಆತ್ಮಹತ್ಯೆ ಗಿರೀಶ್‌ ಅಡ್ಡೂರು-ಪೊಳಲಿ ಸೇತುವೆಯ ಮೇಲೆ ಅಟೋರಿಕ್ಷಾ ನಿಲ್ಲಿಸಿ ಬಳಿಕ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಬಗ್ಗೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

Ad Widget . Ad Widget .

ಗಿರೀಶ್‌ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

Leave a Comment

Your email address will not be published. Required fields are marked *