Ad Widget .

ಪುತ್ತೂರು: ಮನೆ ನಾಯಿಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ

ಸಮಗ್ರ ನ್ಯೂಸ್: ನಾಯಿಗಳ ಸಂಖ್ಯೆ ಹೆಚ್ಚಾಗಿ ರಸ್ತೆಗೆ ಬಂದು ವಾಹನಗಳಿಗೆ ಹಾಗೂ ಪಾದಾಚಾರಿ ಮಕ್ಕಳಿಗೆ ಸಮಸ್ಯೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಹಾಗೂ ಮಲ್ಪೆ ಅದ್ವರಾಜ್ ಅನುಮಲ್ ಕೇರ್ ಟ್ರಸ್ಟ್ ವತಿಯಿಂದ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ಸೌಲಭ್ಯವನ್ನು ಪೋಳ್ಯದಲ್ಲಿ ಜು.4ರಿಂದ ಜು.9ರವರೆಗೆ ನಡೆಸಲಾಗುವುದು.

Ad Widget . Ad Widget .

ಸಂತಾನ ಹರಣ ಮಾಡಿಸುವುದರಿಂದ ಮರಿಗಳನ್ನು ದಾರಿಯಲ್ಲಿ ತ್ಯಜಿಸುವುದು ಕಡಿಮೆಯಾಗುತ್ತದೆ. ರೇಬೀಸ್ ರೋಗ ಹರಡುವಿಕೆಯನ್ನು ಕುಂಠಿತಗೊಳಿಸಬಹುದಾಗಿದೆ. ದಾರಿ ನಾಯಿಗಳ ಸಂಖ್ಯೆ ಕಡಿಮೆಯಾಗಿ ಸುರಕ್ಷಿತವಾದ ಬಾಳ್ವೆ ಮಾಡಬಹುದೆಂಬ ಕಲ್ಪನೆಯಲ್ಲಿ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಸಂತಾನ ಹರಣ ಚಿಕಿತ್ಸೆ ಮಾಡಲಿಚ್ಚಿಸುವವರು ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಮಲ್ಪೆ ಅದ್ವರಾಜ್ ಅನುಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಮಮತಾ ರಾವ್ 9902253064 ಕರೆ ಮಾಡಿ ನೊಂದಾಯಿಸಿಕೊಳ್ಳಬಹುದಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *