Ad Widget .

ಹೆರಿಗೆ ಸಂದರ್ಭದಲ್ಲಿ ಮರ್ಮಾಂಗ ಕೊಯ್ದ ಡಾಕ್ಟರ್| ಬೆಳಕು‌ ಕಾಣಬೇಕಿದ್ದ ಮಗುವಿಗೆ ಯಮನಾದ ವೈದ್ಯ

ಸಮಗ್ರ ನ್ಯೂಸ್: ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವ ವೇಳೆ ವೈದ್ಯನೊಬ್ಬ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗ ಕೊಯ್ದ ವಿಕೃತ ಘಟನೆ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

Ad Widget . Ad Widget .

ಧಾರವಾಡದ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಎಂಬುವವರ ಪತ್ನಿ ಅಮೃತಾ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಜೂನ್ 27ರಂದು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

Ad Widget . Ad Widget .

ಈ ವೇಳೆ ಅಮೃತಾಳಿಗೆ ಸಿಸರಿನ್ ಮೂಲಕ ಮಗುವನ್ನು ಹೊರ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಹೀಗೆ ಸಿಸರಿನ್ ಮಾಡಿ ಮಗು ತೆಗೆಯುವ ವೇಳೆ ನಿಜಾಮುದ್ದೀನ್ ಎಂಬುವವನು ಪುಟ್ಟ ಮಗುವಿನ ಮರ್ಮಾಂಗವನ್ನು ಕೊಯ್ಯುವ ಮೂಲಕ ವಿಕೃತಿ ಮೆರೆದಿದ್ದಾನೆ.

ಈ ವೇಳೆ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕೂಡಲೇ ಬಾಪುಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸತತ ಚಿಕಿತ್ಸೆ ನಂತರ ಮಗು ಇಂದು ಸಾವನ್ನಪ್ಪಿದೆ.

ಇದರಿಂದ ಆಕ್ರೋಶಗೊಂಡ ಪೋಷಕರು, ಮಗುವಿನ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದು,ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನು ಅಮಾನತು ಮಾಡುವಂತೆ ಪೋಷಕರ ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *