ಸಮಗ್ರ ನ್ಯೂಸ್: ಕೊಡಗಿನ ಜನತೆಯ ಬಹುಕಾಲದ ಬೇಡಿಕೆ ನನಸಾಗುವ ಸಮಯ. ಆಧುನಿಕ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ) ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ.
ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕೊಡಗು ಜಿಲ್ಲೆಯ ಜನತೆಯ ದಶಕಗಳ ಬೇಡಿಕೆಯಾಗಿದ್ದ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ) ಯಂತ್ರವು ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಡಾ. ಮಂತರ್ ಗೌಡ ರವರ ವಿಶೇಷ ಪ್ರಯತ್ನದ ಮೂಲಕ ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಮಂಜೂರಾಗಿ, ನೂತನ ಎಂ. ಆರ್. ಐ. ಯಂತ್ರ ಅಳವಡಿಕೆ ಕಾರ್ಯವು ಭರದಿಂದ ಸಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಮಾನ್ಯ ಶಾಸಕರು ಭೇಟಿ ನೀಡಿ ಯಂತ್ರ ಅಳವಡಿಕೆ ಕಾರ್ಯ ಪರಿಶೀಲನೆ ನಡೆಸಿದರು. ಈ ಸೇವೆಯು ಕೊಡಗಿನ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದ್ದು ಈ ಸೇವೆಯಿಂದ ಕೀಲು ಮತ್ತು ಮೂಳೆ ಸಮಸ್ಯೆ, ಹೃದಯ ರಕ್ತನಾಳಗಳ ಕಾಯಿಲೆಗಳನ್ನು ಗುರುತಿಸಲು, ಸ್ತನ ಕ್ಯಾನ್ಸರ್ ಅಪಾಯವನ್ನು ಗುರುತಿಸಲು, ಎಂಡೊಮೆಟ್ರಿಯಾಸೀಸ್ ಮತ್ತು ಫೈಬ್ರಾಯ್ಡ್ಗಳು, ವಿವಿಧ ಟ್ಯೂಮೊರಾಯ್ಯಡ್ಗಳು ಹಾಗೂ ಇನ್ನಿತರ ರೋಗಗಳನ್ನು ಪತ್ತೆಹಚ್ಚಲು ನೂತನ ಎಂ. ಆರ್. ಐ ಸಹಕಾರಿಯಾಗಲಿದೆ.