Ad Widget .

ಬೆಳ್ತಂಗಡಿ:‌ಮುಂಗಾರು ಮಳೆಯಬ್ಬರ ಹಿನ್ನೆಲೆ| ಗಡಾಯಿಕಲ್ಲು ಸೇರಿ ಹಲವು ಪ್ರವಾಸಿತಾಣ, ಜಲಪಾತ ವೀಕ್ಷಣೆಗೆ ನಿರ್ಬಂಧ

ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದ್ದು ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಜಲಪಾತಗಳಿಗೆ ಹಾಗೂ ನರಸಿಂಹಗಡ (ಗಡಾಯಿಕಲ್ಲು) ಗೆ ಪ್ರವೇಶ ನಿರ್ಬಂಧಿಸಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

Ad Widget . Ad Widget .

ಬೆಳ್ತಂಗಡಿ, ಕುದುರೆಮುಖ, ಸೋಮೇಶ್ವರ, ಆಗುಂಬೆ, ಸಿದ್ದಾಪುರ, ಕೊಲ್ಲೂರು ಕೆರೆಕಟ್ಟೆ ಮತ್ತು ಕಾರ್ಕಳ ಈ ವನ್ಯಜೀವಿ ವಲಯಗಳ ಅರಣ್ಯ ಪ್ರದೇಶಗಳಲ್ಲಿ ಬರುವ ಅರಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಡು ಮನೆ, ವನಕಬ್ಬಿ, ಬಂಡಾಜೆ ಜಲಪಾತಗಳಿಗೆ ಹಾಗೂ ನರಸಿಂಹಗಡ-ಗಡಾಯಿಕಲ್ಲು, ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲು ಅವರು ಸೂಚಿಸಿದ್ದಾರೆ.

Ad Widget . Ad Widget .

ಈ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಮಾಡುವುದಲ್ಲದೇ ಸೂಚನಾ ಫಲಕ ಅಳವಡಿಸುವುದು, ಅಗತ್ಯ ಕಾವಲುಗಾರರನ್ನು ನಿಯೋಜಿಸಿ ಪ್ರವೇಶ ನಿರ್ಬಂಧಿ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *