Ad Widget .

ಹಾಸನ ಪೆನ್ ಡ್ರೈವ್ ಪ್ರಕರಣ| ನಾಲ್ಕು ತಿಂಗಳಿಗೊಮ್ಮೆ HIV ಪರೀಕ್ಷೆ ಮಾಡ್ತಿದ್ರಂತೆ ಪ್ರಜ್ವಲ್

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣವು ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ, ಪ್ರತೀ 4 ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆಗೆ ಒಳಪಡುತ್ತಿದ್ದರು ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ ಎನ್ನಲಾಗಿದೆ.

Ad Widget . Ad Widget .

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರ ಹಿಂದಿನ ಚಟುವಟಿಕೆ ಬಗ್ಗೆ ಕೆದಕಿದಾಗ ಈ ವಿಚಾರ ಮುನ್ನೆಲೆಗೆ ಬಂದಿದೆ.

Ad Widget . Ad Widget .

ಪ್ರಜ್ವಲ್‌ ವಿರುದ್ಧ ಸಾಲು-ಸಾಲು ದೂರುಗಳು ದಾಖಲಾಗುತ್ತಿದ್ದಂತೆ ಅವರದ್ದು ಎನ್ನಲಾದ ಸದ್ಯ ವೈರಲ್‌ ಆಗಿರುವ ವೀಡಿಯೋಗಳ ಕುರಿತ ಮಾಹಿತಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಕಲೆ ಹಾಕುತ್ತಿದೆ.

ಈ ಸಂಬಂಧ ಕೆಲವೊಂದು ತಾಂತ್ರಿಕ ಸಾಕ್ಷ್ಯದ ಜಾಡು ಹಿಡಿದು ಹೋದಾಗ ಪ್ರಜ್ವಲ್‌ 4 ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆ ನಡೆಸುತ್ತಿದ್ದ ಸಂಗತಿ ಕಂಡು ಬಂದಿದೆ.

Leave a Comment

Your email address will not be published. Required fields are marked *