ಸಮಗ್ರ ನ್ಯೂಸ್: ಅತೀ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಊರಿನ, ಸರಕಾರಿ ಶಾಲೆಯ ಕೀರ್ತಿ ಹೆಚ್ಚಿಸಿರುವ ಈಕೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ 262ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ಹಾಗೂ 172ಕ್ಕಿಂತಲೂ ಹೆಚ್ಚು ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿರುವ ಶೌರ್ಯ ಎಸ್.ವಿ. ಇಡೀ ಜಗತ್ತಿಗೆ ಪ್ರತಿಭೆ ಪ್ರದರ್ಶನ ಪರಿಚಯಿಸುವ ಕಾತರದಲ್ಲಿ ಇದ್ದಾಳೆ.
ಅಂತರಾಷ್ಟ್ರೀಯ ಬಾಲಪ್ರತಿಭೆ ಡಾ.ಶೌರ್ಯ.ಎಸ್.ವಿ. ಸಮಾಜದಲ್ಲಿ ಇಂದು ಅನೇಕ ಬಾಲ ಪ್ರತಿಭೆಗಳು ತಮ್ಮಲ್ಲಿನ ವಿವಿಧ ಕಲೆಯನ್ನು ಅನಾವರಣೆಗೊಳಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ನಿರ್ಮಿಸಿ ಸಾಧನೆಯ ದಾರಿಯಲ್ಲಿ ಸಾಗುತಿದ್ದಾರೆ. ಇಂತಹ ಸಾಧಕರ ಸಾಲಿಗೆ ಸೇರಿದ ಮತ್ತೊಂದು ಪುಟ್ಟ ಬಾಲೆ ಧರ್ಮಸ್ಥಳದ ಡಾ. ಶೌರ್ಯ ಎಸ್.ವಿ. 12 ವರ್ಷದ ಈ ಪುಟ್ಟ ಬಾಲಕಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾಳೆ.
ಮೂಲತಃ ಚಿಕ್ಕಮಗಳೂರಿನ ವಲೇಕರೇಟಿಯಲ್ಲಿ ಜನಿಸಿದ ಡಾ.ಶೌರ್ಯ ಎಸ್.ವಿ ಸದ್ಯ ಧರ್ಮಸ್ಥಳ ಗ್ರಾಮದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಸುರೇಶ್ ವಳೇಕರೆಟಿ ಮತ್ತು ಕುಸುಮ ಸುರೇಶ್ ದಂಪತಿಗಳ ಪುತ್ರಿ.
ಓದಿನಲ್ಲಿಯೂ ಬಹಳ ಜಾಣೆಯಾಗಿರುವ ಈ ಬಾಲ ಪ್ರತಿಭೆ ಹಲವು ರಂಗದಲ್ಲಿ ಬೆಳೆಯುತ್ತಿದ್ದಾಳೆ. ಯಾವುದೇ ಗುರುಗಳ ಮಾರ್ಗದರ್ಶನ ಇಲ್ಲದೇ ಮನೆಯಲ್ಲಿಯೇ ಮೊಬೈಲ್ ಟಿವಿ ಗಳಲ್ಲಿ ನೋಡಿ ಕಲಿತ ಪ್ರತಿಭೆ. ಸಣ್ಣ ವಯಸ್ಸು ಅಂದರೆ ಐದನೇ ವಯಸ್ಸಿನಲ್ಲಿಯೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಬಾಲೆ ಶೌರ್ಯ 1 ನೇ ತರಗತಿಯಲ್ಲಿರುವಾಗ ಭಗವದ್ಗೀತೆ ಅಭ್ಯಾಸ ಮಾಡಿ ಜಿಲ್ಲಾ ಮಟ್ಟದ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದ ಕೀರ್ತಿ ಇವಳದ್ದು. ನಂತರ ಲಾಕ್ಡೌನ್ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಗಾಂಧೀಜಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಲಾಕಡೌನ್ ಸಂದರ್ಭದಲ್ಲಿ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ 262 ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ಹಾಗೂ 172 ಕ್ಕಿಂತಲೂ ಹೆಚ್ಚು ಪ್ರಶಸ್ತಿ ಪತ್ರ ಗಳಿಸಿದ ಕೀರ್ತಿ ಇವಳದ್ದು. ಹಾಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಮ್ ವರ್ಲ್ಡ್ ರೆಕಾರ್ಡ್, ಸೈಮ, ರಾಷ್ಟ್ರೀಯ ಯುವ ರತ್ನ ಸಾಧಕ ಪ್ರಶಸ್ತಿ, ಈ ದೊಡ್ಡ ರಂಗದಲ್ಲಿ ಹೆಸರು ದಾಖಲಿಸಿದ್ದಾಳೆ. ಹೀಗೆ ಇಪ್ಪತ್ತು ವಿಶ್ವ ದಾಖಲೆ ಮಾಡಿದ ಕೀರ್ತಿ ಇವಳದ್ದು. ವಿವಿಧ ಕ್ಷೇತ್ರಗಳಲ್ಲಿ ಸನ್ಮಾನ ಸ್ವೀಕರಿಸಿದ್ದಾಳೆ.
ಈ ಬಾಲ ಪ್ರತಿಭೆಯನ್ನು ಗುರುತಿಸಿ ತಮಿಳುನಾಡು ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಏಷ್ಯಾ ವೇದಿಕ್ ಕಲ್ಚರ್ ವಿಶ್ವವಿದ್ಯಾಲಯದಿಂದ ಈ ಬಾಲ ಪ್ರತಿಭೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿದ್ದಾರೆ. ಒಂದು ಗ್ರಾಮೀಣ ಪರಿಸರದ ಸರಕಾರಿ ಶಾಲೆಯ 12 ವರ್ಷದ ಪುಟ್ಟ ಬಾಲಕಿ ಗೌರವ ಡಾಕ್ಟರೇಟ್ ಪದವಿ ಪಡೆಯುವುದು ಇಡೀ ಜಗತ್ತಿನ ದೇಶಗಳಲ್ಲಿ ಪ್ರಪ್ರಥಮವಾಗಿದೆ. ಇದುವರೆಗೂ 30 ವರ್ಷದ ಕೆಳಗಿನವರಿಗೆ ಯಾರಿಗೂ ಸಿಗದ ಗೌರವ ಡಾಕ್ಟರೇಟ್ ಪದವಿ 12ನೇ ವಯಸ್ಸಿನಲ್ಲಿ ಪಡೆದುಕೊಂಡಿದ್ದು ಇಡೀ ಜಗತ್ತಿಗೆ ಕೀರ್ತಿ ತಂದಿದ್ದಾಳೆ. ಚಿಕ್ಕ ವಯಸ್ಸಿನಲ್ಲೆ ಕರ್ನಾಟಕ, ದೆಹಲಿ, ತಮಿುನಾಡಿನಾದ್ಯಂತ ಹೆಸರು ಗಳಿಸಿದ್ದಾಳೆ.
ಚಿಕ್ಕ ವಯಸ್ಸಿನಲ್ಲೆ ಸಕಲಕಲಾವಲ್ಲಭೆ ಎನಿಸಿಕೊಂಡಿರುವ ಡಾ.ಶೌರ್ಯ ಎಸ್.ವಿ. ಈಗ ಹದಿನಾಲ್ಕನೇ ವಯಸ್ಸಿನಲ್ಲಿಯೂ ಮಾಡಿದ ಸಾಧನೆಗಳು ಇನ್ನೂ ಇವೆ.
ಹಾಗೆ ಇತ್ತೀಚೆಗೆ ಫೋಕ್ ಡೆಪ್ತ್ ಅಹಮದಾಬಾದ್ ಇಲ್ಲಿ ನಡೆಸುತ್ತಿರುವ ಭಗವದ್ಗೀತೆ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿ ಭಾರತವನ್ನು ಪ್ರತಿನಿಧಿಸಿ ಭಾರತಕ್ಕೆ ಆರನೇ ಸ್ಥಾನ ಗಳಿಸಿಕೊಟ್ಟಿದ್ದಾಳೆ. ಇವಳು ರಾಜ್ಯ ಮಟ್ಟದ ಸ್ವ ರಚಿತ ಕವನ ಸ್ಪರ್ಧೆಯಲ್ಲಿ ಹಾಗೂ ರಾಜ್ಯ ಮಟ್ಟದ ಕಥೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ಕೊಂಡ ಕೀರ್ತಿ ಇವಳದ್ದು.ಹಾಗೆಯೇ ಓದಿನಲ್ಲೂ ಮೊದಲ ಶ್ರೇಣಿಯಲ್ಲಿದ್ದು, ಕ್ರೀಡೆ, ಯೋಗ, ಕವನ ಕಥೆ ಬರೆವಣಿಗೆಎಲ್ಲ ರೀತಿಯ ನೃತ್ಯ, ಸಂಗೀತ, ನಾಟಕ, ಚಿತ್ರಕಲೆ, ಹೂಪ್ ನೃತ್ಯ, ಹಾಡು ಬರೆಯುವಿಕೆ, ರಸಪ್ರಶ್ನೆ (ತುಳು, ಕನ್ನಡ, ಆಂಗ್ಲ,), ಭಗವದ್ಗೀತೆ ಪಠಣ, ಶ್ಲೋಕ ಪಠಣ, ಪ್ರಭಂದ ಬರೆಯುವಿಕೇ, ಮಾಡೆಲಿಂಗ್, ಫ್ಯಾಷನ್ ಶೋ, ವಿಜ್ಞಾನ ಮಾದರಿಗಳು ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಕೀರ್ತಿ ಇವಳದ್ದು. ಶೌರ್ಯ ಸ್ವತಃ ತನ್ನಜ್ಜಿಯ ಬಗ್ಗೆ ಆತ್ಮ ಕಥೆ ಬರೆದು ಜೀವನದ ಸಾಧಕಿ ನನ್ನಜ್ಜಿ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾಳೆ. ಹಾಗೆಯೇ ಇತ್ತೀಚೆಗೆ ಭಾರತ ಸರ್ಕಾರದಿಂದ ನೋಬೆಲ್ ವಿಶ್ವ ದಾಖಲೆಗೆ ಘೋಷಿಸಲಾಗಿದ್ದು ದಾಖಲೆ ನಿರ್ಮಿಸಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿ ಹಾಗೂ ವಾಗ್ಮಿ, ಲೇಖಕಿ ಹಾಗೂ ಒಂದೊಳ್ಳೆ ಸಮಾಜ ಸೇವಕಿ ಆಗಬೇಕು ಎನ್ನುವ ಕನಸನ್ನು ಇಟ್ಟುಕೊಂಡಿದ್ದಾರೆ.
ಈ ಬಾಲೆ ಶೌರ್ಯ ತನ್ನ ತಂದೆ ಹಾಗೂ ಅಜ್ಜಿಯನ್ನು ಇತ್ತೀಚೆಗೆ ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆಯುತ್ತಿದ್ದಾಳೆ. ತನ್ನ ತಾಯಿ SDME ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವಳ ಮಾತು ಒಂದೇ ಆಗಿದೆ ನಾನು ತನ್ನ ತಾಯಿ ಹಾಕಿದ ಗೆರೆ ಹಾಗೂ ತಾಯಿ ಹೇಳಿದ ಮಾತನ್ನು ಮೀರ್ಬಾರ್ದು.. ನಾನು ಒಂದು ಹೊತ್ತು ಊಟ ಬಿಟ್ಟದರು ಐಎಎಸ್ ಅಧಿಕಾರಿ ಆಗುವ ಕನಸನ್ನು ನನಸು ಮಾಡಿಯೇ ತೀರುತ್ತೇನೆ ಎನ್ನುವ ಶೌರ್ಯಳ ಮಾತು ಎಲ್ಲರನ್ನೂ ಉಬ್ಬೇರಿಸುವಂತಿದೆ.