ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದು ಹೋಗಿದ್ದ ವಾಹನವನ್ನು ಪತ್ತೆ ಹಚ್ಚಿ ಕೆಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿದ ಪ್ರಕರಣ ಜು.2 ರಂದು ನಡೆದಿದೆ.
ಚಾರ್ಮಾಡಿ ಘಾಟಿಯಲ್ಲಿ ಹಾಸನ ಮೂಲದ ಎಳೆನೀರು ವಾಹನದ ಚಾಲಕ ವಾಹನದಲ್ಲಿದ್ದ ಕಸವನ್ನು ಘಾಟಿಯಲ್ಲಿ ಬಿಸಾಕಿ ಮಂಗಳೂರು ಭಾಗದಿಂದ ಕೊಟ್ಟಿಗೆಹಾರ ಕಡೆಗೆ ತೆರಳುತಿದ್ದ ವೇಳೆ ಚಾರ್ಮಾಡಿ ಘಾಟಿಯಲ್ಲಿ ಗಸ್ತು ತಿರುಗುತ್ತಿದ್ದ ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಚರ್ ಡಿ.ವಿ ರೇಣುಕಾ
ಅದರ ಜಾಡು ಹಿಡಿದು ಚಾರ್ಮಾಡಿ ಘಾಟಿಗೆ ಗಸ್ತಿನಲ್ಲಿದ್ದ ಪಿಎಸ್ ಐ ವಾಹನವನ್ನು ಗೇಟ್ ನಲ್ಲಿ ಹಿಡಿಡಿದ್ದಾರೆ.
ಚಾಲಕನನ್ನು ವಾಪಾಸ್ ಕರೆ ತಂದು ಅದೇ ಕಸವನ್ನು ತುಂಬಿಸಿ ಬಣಕಲ್ ಠಾಣೆಯಲ್ಲಿ ಕೆಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ದಂಡ ವಿಧಿಸಿ ಕಸವನ್ನು ಅಲ್ಲಿಂದ ಅವರಿಂದಲೇ ತೆರವು ಗೊಳಿಸಿ ಚಾಲಕನಿಗೆ ತಾನು ಮಾಡಿದ ತಪ್ಪಿನ ಅರಿವು ಮೂಡಿಸಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ, ಇದರಿಂದ ಇತರ ವಾಹನಸವಾರರಿಗೂ ಈ ರೀತಿ ಮಾಡದಂತೆ ಜಾಗೃತಿ ಮೂಡಿಸಿದ್ದಾರೆ