ಸಮಗ್ರ ನ್ಯೂಸ್: ಮದುವೆ ಮನೆಗೆ ಕೋತಿಯೊಂದು ನುಗ್ಗಿ ರಂಪಾಟ ನಡೆಸಿದೆ. ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ್ದಲ್ಲದೇ, ಊಟ ಮಾಡಲು ಹೋದವರಿಗೂ ತೊಂದರೆ ಕೊಟ್ಟಿದೆ. ಅಷ್ಟೇ ಅಲ್ಲದೆ ಮದುವೆಗೆ ಬಂದವರಿಗೆ ಮಂಗ ಕಚ್ಚಿದೆ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ.

ಮದುವೆ ಮನೆಯಲ್ಲಿ ಕೋತಿ ಕಾಟಕ್ಕೆ ಜನರು ಹೈರಾಣಾಗಿ ಹೋಗಿದ್ದಾರೆ. ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುತ್ತಿದ್ದವರಿಗೂ ಕಿರಿಕಿರಿ ಮಾಡಿ, ಊಟ ಕಸಿದುಕೊಂಡಿದೆ. 8-10 ಮಂದಿ ಮೇಲೆ ದಾಳಿ ಮಾಡಿ ಕಚ್ಚಿದೆ. ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ , ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದ್ದು, ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುತ್ತಮುತ್ತಲಿನ ಹಳ್ಳಿಯಲ್ಲಿ ಓಡಾಡುತ್ತಿರುವ ಕೋತಿ ಹಿಡಿದು ಸ್ಥಳಾಂತರ ಮಾಡಲು ಆಗ್ರಹಿಸಿದ್ದಾರೆ.