Ad Widget .

ಸುಳ್ಯ: ಎರಡು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ ‌ಭೇದಿಸಿದ ಬೆಳ್ಳಾರೆ ಪೊಲೀಸರು| ಬೆಳ್ತಂಗಡಿ ಮೂಲದ ಯುವಕ ಅರೆಸ್ಟ್

ಸಮಗ್ರ ನ್ಯೂಸ್: ಎರಡು ವರ್ಷಗಳ ಹಿಂದೆ ಬೆಳ್ಳಾರೆ ಠಾಣೆ ವ್ಯಾಪ್ತಿಯ ಎಡಮಂಗಲದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ, ಬೆಳ್ತಂಗಡಿ ಮೂಲದ ಶರತ್‌ (26) ಅವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

2022ರ ಮಾರ್ಚ್‌ನಲ್ಲಿ ರಾತ್ರಿ ಸಮಯ ಕಡಬ ತಾಲೂಕಿನ ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿನ ಮನೆಯೊಂದರ ಬಾಗಿಲು ಮುರಿದು ನುಗ್ಗಿದ ಆರೋಪಿ ಮನೆಯೊಳಗಿದ್ದ ಕಬ್ಬಿಣದ ಕಪಾಟಿನ ಬೀಗದ ಕೀ ಬಳಸಿ ಕಪಾಟು ತೆರೆದು 30 ಸಾವಿರ ನಗದು ಹಾಗೂ 1.48 ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಅಂದಾಜು 1.78 ಲಕ್ಷ ಮೌಲ್ಯ ಕಳವು ನಡೆಸಲಾಗಿತ್ತು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget . Ad Widget .

ಎಡಮಂಗಲದಲ್ಲಿ ಕಳ್ಳತನ ನಡೆಸಿದ್ದ ಆರೋಪಿ ಚಿಕ್ಕಮಗಳೂರಿನಲ್ಲಿ ಲ್ಯಾಪ್‌ಟಾಪ್‌ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಎಡಮಂಗಲದಲ್ಲಿ ನಡೆದಿದ್ದ ಕಳ್ಳತನದ ವೇಳೆ ಬೆಳ್ಳಾರೆ ಪೊಲೀಸರಿಗೆ ಲಭಿಸಿದ್ದ ತಾಂತ್ರಿಕ ಸುಳಿವಿನ ಮೇರೆಗೆ ಚಿಕ್ಕಮಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಶರತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ಕಳ್ಳತನ ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದು, ಕಳ್ಳತನ ನಡೆಸಿದ ಬಳಿಕ ಮಾರಾಟ ಮಾಡಿದ್ದ ಸೊತ್ತುಗಳನ್ನು ಅಲ್ಲಿಂದ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Comment

Your email address will not be published. Required fields are marked *