ಸುಳ್ಯ: ಪತಿಯಿಂದಲೇ ಪತ್ನಿಗೆ ಚೂರಿ‌ ಇರಿತ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

6 ವರ್ಷಗಳ ಹಿಂದೆ ನವೀನ್‌ ಕುಮಾರ್‌ ಎಂಬವರಿಗೆ ಜಾಲ್ಸೂರು ಗ್ರಾಮದ 25 ವರ್ಷದ ಮಹಿಳೆಯನ್ನು ವಿವಾಹ ಮಾಡಿಕೊಡಲಾಗಿತ್ತು. ಆದರೆ ಸಂಸಾರದಲ್ಲಿ ಪತಿ ನವೀನ್ ತನ್ನ ಪತ್ನಿಗೆ ಪತಿಯು ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

Ad Widget

ಇದರಿಂದಾಗಿ ಪತ್ನಿಯು ನಾಲ್ಕು ವರ್ಷಗಳಿಂದ ವಿನೋಬನಗರದಲ್ಲಿರುವ ತವರು ಮನೆಯಲ್ಲಿ ವಾಸವಿದ್ದಾರೆ. ನವೀನ್‌ ಕುಮಾರ್‌ ಜೂ.28ರಂದು ರಾತ್ರಿ ಅಲ್ಲಿಗೆ ಹೋಗಿ ಪತ್ನಿಗೆ ಚೂರಿಯಿಂದ ಹಲ್ಲೆ ನಡೆಸಿದ್ದು, ಮಹಿಳೆಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *