July 2024

ಶಿರಾಡಿ‌ ಘಾಟ್ ನಲ್ಲಿ ಮತ್ತೆ ಭೂಕುಸಿತ| ಮಣ್ಣಿನಡಿ ಹೂತುಹೋದ ವಾಹನಗಳು| ರಸ್ತೆ‌ ಸಂಚಾರ ಸ್ಥಗಿತ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲುನಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಕೆಲವು ವಾಹನಗಳು ಸಿಲುಕಿವೆ.‌ ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿಯಾಗಿದ್ದು, ಮತ್ತೊಂದು ಬೃಹತ್ ಕಂಟೇನರ್ ಮಣ್ಣಿನಡಿ ಸಿಲುಕಿದೆ. ಪಲ್ಟಿಯಾಗಿರುವ ಕಂಟೇನರ್‌ನಲ್ಲಿ ಚಾಲಕ ಸಿಲುಕಿದ್ದಾನೆ. ಸಂಜೆ ಮಳೆ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ಬಂದ್ ಆಗಿದೆ.

ಶಿರಾಡಿ‌ ಘಾಟ್ ನಲ್ಲಿ ಮತ್ತೆ ಭೂಕುಸಿತ| ಮಣ್ಣಿನಡಿ ಹೂತುಹೋದ ವಾಹನಗಳು| ರಸ್ತೆ‌ ಸಂಚಾರ ಸ್ಥಗಿತ Read More »

ಉಡುಪಿ: ಭಾರೀ ಮಳೆ ಹಿನ್ನೆಲೆ| ಆ.01ರಂದು ಪಿಯುಸಿವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯಿಂದ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಆಗಸ್ಟ್ 1ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.

ಉಡುಪಿ: ಭಾರೀ ಮಳೆ ಹಿನ್ನೆಲೆ| ಆ.01ರಂದು ಪಿಯುಸಿವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಮುಂದುವರಿದ ‌ವರುಣಾರ್ಭಟ| ದ.ಕ‌ ಜಿಲ್ಲೆಯಲ್ಲಿ‌ ಆ.1 ರಂದು ಶಾಲಾ ಕಾಲೇಜುಗಳಿಗೆ ರಜೆ – ಮುಲ್ಲೈ ಮುಗಿಲನ್

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಆ.1ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಂದುವರಿದ ‌ವರುಣಾರ್ಭಟ| ದ.ಕ‌ ಜಿಲ್ಲೆಯಲ್ಲಿ‌ ಆ.1 ರಂದು ಶಾಲಾ ಕಾಲೇಜುಗಳಿಗೆ ರಜೆ – ಮುಲ್ಲೈ ಮುಗಿಲನ್ Read More »

ಎಸಿಪಿ ಚಂದನ್ ಗೆ ಸವಾಲೆಸೆದಿದ್ದ ಪ್ರತಾಪ್ ಸಿಂಹಗೆ ಮುಖಭಂಗ| ಮಾಜಿ ಸಂಸದರ ಎದುರೇ ಪುನೀತ್ ಕೆರೆಹಳ್ಳಿಗೆ ಡ್ರಿಲ್

ಸಮಗ್ರ ನ್ಯೂಸ್: ಪುನೀತ್‌ ಕೆರೆಹಳ್ಳಿ ಬಂಧನವನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿ ಎಸಿಪಿ ಚಂದನ್‌ ಗೆ ಸವಾಲು ಹಾಕಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಭಾರೀ ಮುಖಭಂಗವಾಗಿದೆ. ಸವಾಲನ್ನು ಸ್ವೀಕರಿಸಿ ರಜೆಯ ಮೇಲೆ ಊರಿಗೆ ತೆರಳಿದ್ದರೂ ವಾಪಸ್‌ ಬಂದಿದ್ದ ಎಸಿಪಿ ಚಂದನ್‌, ಪ್ರತಾಪ್‌ ಸಿಂಹ ಎದುರಿನಲ್ಲಿಯೇ ಮತ್ತೆ ಪುನೀತ್‌ ಕೆರೆಹಳ್ಳಿಯನ್ನು ವಶಕ್ಕೆ ಪಡೆದು ವಾರ್ನ್‌ ಮಾಡಿ ಬಿಡುಗಡೆ ಮಾಡಿದ್ದಾರೆ. ನಾಯಿ ಮಾಂಸ ವಿವಾದದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿತನಾಗಿ ಜಾಮೀನು ಪಡೆದು ಹೊರಬಂದಿದ್ದ

ಎಸಿಪಿ ಚಂದನ್ ಗೆ ಸವಾಲೆಸೆದಿದ್ದ ಪ್ರತಾಪ್ ಸಿಂಹಗೆ ಮುಖಭಂಗ| ಮಾಜಿ ಸಂಸದರ ಎದುರೇ ಪುನೀತ್ ಕೆರೆಹಳ್ಳಿಗೆ ಡ್ರಿಲ್ Read More »

ಮಂಗಳೂರು ವಿವಿ ಸಂಧ್ಯಾ ಕಾಲೇಜು ಸ್ಥಗಿತಗೊಳಿಸದಂತೆ NSUI ಮನವಿ

ಸಮಗ್ರ ನ್ಯೂಸ್: ಎನ್.ಎಸ್.ಯು.ಐ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಂದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಭೇಟಿ ಮಾಡಿ ಸಂಜೆ ಕಾಲೇಜು ಸ್ಥಗಿತಗೊಳಿಸಿರುವ ಕುರಿತು ಮಾತನಾಡಿ, ಅದನ್ನು ಸ್ಥಗಿತಗೊಳಿಸದಂತೆ ಮನವಿ ಮಾಡಿದರು. ಕಾಲೇಜು ನಿಲ್ಲಿಸಿದರೆ ಪ್ರದೇಶದ ವಿದ್ಯಾಭ್ಯಾಸ ಮಾಡಲಿಚ್ಛಿಸುವ ಅನೇಕ ಬಡ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗುವ ಸಾಧ್ಯತೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ NSUI ಮಂಗಳೂರು ವಿಧಾನಸಭಾ ಕ್ಷೇತ್ರರ ಅಧ್ಯಕ್ಷರಾದ ಶಾಹಿಲ್ ಮಂಚಿಲ ಅವರ ನೇತೃತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪಿ.ಎಲ್ ಧರ್ಮ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ NSUI ಮಂಗಳೂರು

ಮಂಗಳೂರು ವಿವಿ ಸಂಧ್ಯಾ ಕಾಲೇಜು ಸ್ಥಗಿತಗೊಳಿಸದಂತೆ NSUI ಮನವಿ Read More »

ಸೋಮವಾರಪೇಟೆ: ಮಳೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡಿದ ಕ.ರಾ.ವೇ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಗ್ರಾಮದಲ್ಲಿ ಹಾಗೂ ಶುಂಠಿ ಮಂಗಳೂರು ಗ್ರಾಮದಲ್ಲಿ ಮಳೆಗಾಳಿಗೆ ಮನೆಗಳು ಸಂಪೂರ್ಣ ಬಿದ್ದು ಹೋಗಿದ್ದವು. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರು ಮನೆಗಳ ವಿವರ ತೆಗೆದುಕೊಂಡು ಕೊಪರ್ ಎಸ್ಟೇಟ್ ಮಾಲೀಕರಾದ ನಿಶಾಂತ್ ಕೆ. ವಿ ಅವರಿಗೆ ತಿಳಿಸಿ ಸಂತ್ರಸ್ತರಿಗೆ ಸಹಾಯವನ್ನು ಮಾಡಲಾಯಿತು. ತೊಂದರೆಗೆ ಒಳಗಾದ ಎಂಟು ಕುಟುಂಬದವರಿಗೆ ಅಹಾರ ಸಾಮಗ್ರಿಗಳು ಹಾಗೂ ತರಕಾರಿ ಹಾಗೂ ಹಾಲನ್ನು ಕರ್ನಾಟಕ ರಕ್ಷಣಾ

ಸೋಮವಾರಪೇಟೆ: ಮಳೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡಿದ ಕ.ರಾ.ವೇ Read More »

2024-25ನೇ ಸಾಲಿನ ಜಮ್ಮು ಮತ್ತು ಕಾಶ್ಮೀರದ ಬಜೆಟ್‌/ ಲೋಕಸಭೆಯಲ್ಲಿ ಅನುಮೋದನೆ

ಸಮಗ್ರ ನ್ಯೂಸ್‌: 2024-25ನೇ ಸಾಲಿನ ಜಮ್ಮು ಮತ್ತು ಕಾಶ್ಮೀರದ ಬಜೆಟ್‌ಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ. ಜಮ್ಮ ಮತ್ತು ಕಾಶ್ಮೀರದ ಬಜೆಟ್‌ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಧ್ವನಿ ಮತದ ಮೂಲಕ ಅನುಮೋದನೆ ಪಡೆದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿದ ನಂತರ ಅಲ್ಲಿ ಚುನಾಯಿತ ಸರ್ಕಾರ ಇನ್ನಷ್ಟೇ ಸ್ಥಾಪನೆಯಾಗಬೇಕಿದೆ. ಹೀಗಾಗಿ ಹಿಂದಿನ ಸಾಲಿನಂತೆಯೇ ಜಮ್ಮು ಮತ್ತು ಕಾಶ್ಮೀರದ ಬಜೆಟ್ ಅನ್ನು ಲೋಕಸಭೆಯಲ್ಲಿ ಈ ಬಾರಿಯೂ ಮಂಡಿಸಲಾಯಿತು.

2024-25ನೇ ಸಾಲಿನ ಜಮ್ಮು ಮತ್ತು ಕಾಶ್ಮೀರದ ಬಜೆಟ್‌/ ಲೋಕಸಭೆಯಲ್ಲಿ ಅನುಮೋದನೆ Read More »

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತ|ನಿರ್ವಾಹಕನ ಸಮಯ ಪ್ರಜ್ಞೆಯಿಂದ ಬದುಕಿದ ಜೀವ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕ ಸಮಯ ಪ್ರಜ್ಞೆ ಮೆರೆದು ಜೀವ ರಕ್ಷಿಸಿದ ಘಟನೆ ನಡೆದಿದೆ. ಮಂಗಳೂರಿನ ಕೂಳೂರು ಮಾರ್ಗ 13ಎಫ್ನಲ್ಲಿ ಎಂದಿನಂತೆ ಕೃಷ್ಣ ಪ್ರಸಾದ್ ಬಸ್ ಪ್ರಯಾಣಿಕರೊಂದಿಗೆ ತೆರಳುತ್ತಿದ್ದಾಗ ಕಾಲೇಜು ವಿದ್ಯಾರ್ಥಿನಿಯೊಬ್ಬರಲ್ಲಿ ಹಠಾತ್ ಹೃದಯಾಘಾತದ ಲಕ್ಷಣಗಳು ಕಾಣಿಸಿವೆ. ತಕ್ಷಣವೇ ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್ ಅನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದರು. ಬಸ್ನಲ್ಲಿದ್ದ ಎಮರ್ಜೆನ್ಸಿ ಸೈರನ್ ಚಾಲೂ ಮಾಡಿದ ಅವರು ಕೇವಲ

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತ|ನಿರ್ವಾಹಕನ ಸಮಯ ಪ್ರಜ್ಞೆಯಿಂದ ಬದುಕಿದ ಜೀವ Read More »

ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ

ಸಮಗ್ರ ನ್ಯೂಸ್‌: ಸಚಿವ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್ ಲಾಡ್ ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ

ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ Read More »

ಬೆಂಗಳೂರಿನ ಪಿಜಿಗಳಲ್ಲಿ ಸುರಕ್ಷತೆಯ ನಿರ್ವಹಣೆ/ ಶೀಘ್ರದಲ್ಲೇ ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆ

ಸಮಗ್ರ ನ್ಯೂಸ್‌: ರಾಜಧಾನಿ ಬೆಂಗಳೂರಿನಲ್ಲಿ ಪಿಜಿ ಕೇಂದ್ರಗಳ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧವಾಗಿದೆ. ನಿಗದಿತ ಮಾನದಂಡಗಳನ್ನು ಅನುಸರಿಸಲು ವಿಫಲವಾದರೆ ಪಿಜಿಗಳ ವ್ಯಾಪಾರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಸಿದೆ. ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು. ಮಾರ್ಗಸೂಚಿಗಳಲ್ಲಿ ನಿವಾಸಿಗಳ ಸಂಖ್ಯೆ ಮತ್ತು ಅವರ ಸುರಕ್ಷತೆಯ ಮೇಲೆ ಮಿತಿ ಇರುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ವಾರ್ಡ್ ಅಧಿಕಾರಿಗಳು ಕಾನೂನು ಮತ್ತು ಮಾರ್ಗಸೂಚಿಗಳ ಬಗ್ಗೆ ಮಾತನಾಡುತ್ತಿದ್ದರೆ, ನಿವಾಸಿಗಳು

ಬೆಂಗಳೂರಿನ ಪಿಜಿಗಳಲ್ಲಿ ಸುರಕ್ಷತೆಯ ನಿರ್ವಹಣೆ/ ಶೀಘ್ರದಲ್ಲೇ ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆ Read More »