June 2024

ತಾಂತ್ರಿಕ ಸಮಸ್ಯೆ ಹಿನ್ನೆಲೆ| ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್ ಅನ್ನು ತಾಂತ್ರಿಕ ಸಮಸ್ಯೆ ಕಾರಣ ನಾಸಾ ಮತ್ತೆ ಮುಂದೂಡಿದ್ದರಿಂದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ಅವರು ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಉಳಿಯುವ ಸಾಧ್ಯತೆಯಿದೆ. ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹೊಂದಿರುವ ಬಾಹ್ಯಾಕಾಶ ನೌಕೆಯ ವಾಪಸಾತಿ ಪ್ರಯಾಣವನ್ನು ಯಾವಾಗ ಕೈಗೊಳ್ಳಲಾಗುತ್ತದೆ ಎಂಬುದಕ್ಕೆ ನಾಸಾ ನಿರ್ದಿಷ್ಟ ದಿನಾಂಕವನ್ನು ನೀಡಿಲ್ಲ. ಬೋಯಿಂಗ್ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರು ಗಗನಯಾತ್ರಿಗಳು […]

ತಾಂತ್ರಿಕ ಸಮಸ್ಯೆ ಹಿನ್ನೆಲೆ| ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್ Read More »

ಉಡುಪಿ ಗ್ಯಾಂಗ್ ವಾರ್ ಆರೋಪಿಗಳಿಂದ ಪೊಲೀಸರ ಮೇಲೆ‌ ಹಲ್ಲೆ

ಸಮಗ್ರ ನ್ಯೂಸ್: ಉಡುಪಿಯಲ್ಲಿ ಇತ್ತೀಚೆಗೆ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದ ಆರೋಪಿಗಳಿಬ್ಬರು ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ದಾಂಧಲೆ ನಡೆಸಿ, ಜಿಲ್ಲಾ ಅಧೀಕ್ಷಕರು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಯತ್ನಿಸಿರುವ ಘಟನೆ ಸಂಭವಿಸಿದೆ. ಕಾರಾಗೃಹದಲ್ಲಿರುವ ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೀನ್ ಪ್ರಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲ‌ರ್ ಎಸ್‌.ಎ.ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಜೋರಾಗಿ ಕೂಗಾಡಿದ್ದಾರೆ. ಅಲ್ಲದೆ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ

ಉಡುಪಿ ಗ್ಯಾಂಗ್ ವಾರ್ ಆರೋಪಿಗಳಿಂದ ಪೊಲೀಸರ ಮೇಲೆ‌ ಹಲ್ಲೆ Read More »

ಪಟ್ಲ ಬೆಟ್ಟದಲ್ಲಿ ಚಾರಣಿಗರ ಮೇಲೆ‌ ಹಲ್ಲೆ ನಡೆಸಿದರ ಜೀಪ್ ಚಾಲಕರು ಅರೆಸ್ಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಯ ಮಧ್ಯದಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸ್ಥಳೀಯ ಜೀಪು ಚಾಲಕರ ಬಂಧನವಾಗಿದೆ. ಎರಡು ವರ್ಷದ ಹಿಂದೆ ಪುತ್ತೂರಿನ ಪ್ರವಾಸಿಗರಿಗೆ ಹಲ್ಲೆಗೆ ಮುಂದಾಗಿದ್ದ ಈ ತಂಡ ಇದೀಗ ಮತ್ತೆ ಬೈಕ್ ಸವಾರರಿಗೆ ಹಲ್ಲೆ ನಡೆಸಿದೆ. ಈ ಜೀಪು ಚಾಲಕರ ರೌಡಿಸಂನ್ನು ಕೇಳುವವರೇ ಇಲ್ಲದಾಗಿದೆ. ಹಾಸನ ಜಿಲ್ಲಾಡಳಿತ ಮೌನ ವಹಿಸಿರುವುದು ಎಲ್ಲಾ ಅನುಮಾನಕ್ಕೂ ಎಡೆಮಾಡಿಕೊಟ್ಟಿತು. ಇತ್ತಿಚೆಗೆ ಪಟ್ಲಬೆಟ್ಟಕ್ಕೆ ತೆರಳಿದ

ಪಟ್ಲ ಬೆಟ್ಟದಲ್ಲಿ ಚಾರಣಿಗರ ಮೇಲೆ‌ ಹಲ್ಲೆ ನಡೆಸಿದರ ಜೀಪ್ ಚಾಲಕರು ಅರೆಸ್ಟ್ Read More »

ಬೆಳ್ಳಾರೆ ವಲಯದ ಅಮರ ಪಡ್ನೂರು ದೀಪಶ್ರೀ ಸಂಘದ ಸವಿತಾರವರಿಗೆ ಸುರಕ್ಷಾದ ಚೆಕ್ ಹಸ್ತಾಂತರ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು ಬೆಳ್ಳಾರೆ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದಲ್ಲಿ ದೀಪಶ್ರೀ ಸಂಘದ ಸವಿತಾರವರಿಗೆ ಸುರಕ್ಷಾದ ಚೆಕ್ ನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಉಪಾಧ್ಯಕ್ಷ ಭುವನೇಶ್ವರಿ ತಾಲೂಕಿನ ಯೋಜನಾಧಿಕಾರಿ ಮಾಧವ, ಬೆಳ್ಳಾರೆ ವಲಯದ ಮೇಲ್ವಿಚಾರಕ ವಿಶಾಲ ಅಮರ ಪಡ್ನೂರು ಒಕ್ಕೂಟದ ಅಧ್ಯಕ್ಷ ವೀಣಾರವರು ಜೊತೆ ಕಾರ್ಯದರ್ಶಿ ಶ್ರೀವಸಂತವರು ಹಾಗೂ ಸೇವಾ ಪ್ರತಿನಿಧಿ ದಿವ್ಯ ರವರು ಪದಾಧಿಕಾರಿ ಶಾಂತಲಾ, ಲಲಿತ, ಚಿತ್ರಕಲಾ, ಶೇಷಮ್ಮ,

ಬೆಳ್ಳಾರೆ ವಲಯದ ಅಮರ ಪಡ್ನೂರು ದೀಪಶ್ರೀ ಸಂಘದ ಸವಿತಾರವರಿಗೆ ಸುರಕ್ಷಾದ ಚೆಕ್ ಹಸ್ತಾಂತರ Read More »

ಮೊದಲ‌ ಮಳೆಯಲ್ಲೇ ತೋಯ್ದ ಬಾಲರಾಮ| ಸೋರುತ್ತಿದೆ ರಾಮಮಂದಿರ ಗರ್ಭಗುಡಿ!!

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ. ಆದ್ರೆ ಅದಾಗಲೇ ದೇವಸ್ಥಾನ ಮೇಲ್ಛಾವಣಿ ಸೋರುತ್ತಿದೆಯಂತೆ! ಹೀಗಂತ ದೇಗುಲದ ಅರ್ಚಕ ಸತ್ಯೇಂದ್ರ ದಾಸ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಸದ್ಯ ಅಯೋಧ್ಯೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ರಾಮಮಂದಿರದ ಛಾವಣಿ ಸೋರುತ್ತಿದೆ ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿಕೆ ನೀಡಿದ್ದಾರೆ. ಗರ್ಭಗುಡಿಯ ಛಾವಣಿ ಮೂಲಕ ನೀರು ಒಳಗೆ ಬಂದಿದೆ. ಸುಸಜ್ಜಿತವಾಗಿಯೇ ದೇಗುಲ ಕಟ್ಟಿದ್ದರೂ ನೀರು ಸೋರುತ್ತಿದೆ ಎಂದು ಅರ್ಚಕರು ಹೇಳಿದ್ದಾರೆ.. ಇನ್ನು ಈ ಬಗ್ಗೆ ಸ್ಪಷ್ಟನೆ

ಮೊದಲ‌ ಮಳೆಯಲ್ಲೇ ತೋಯ್ದ ಬಾಲರಾಮ| ಸೋರುತ್ತಿದೆ ರಾಮಮಂದಿರ ಗರ್ಭಗುಡಿ!! Read More »

ಲೋಕಸಭಾ ಸ್ಪೀಕರ್ ಹುದ್ದೆಗೆ ಮೊದಲ ಬಾರಿ‌ ನಡೆಯಲಿದೆ ಚುನಾವಣೆ| ನಾಮಪತ್ರ ಸಲ್ಲಿಸಿದ ಒಂ ಬಿರ್ಲಾ, ಕೆ.ಸುರೇಶ್

ಸಮಗ್ರ ನ್ಯೂಸ್: ಲೋಕಸಭೆ ಸ್ಪೀಕರ್ ಹುದ್ದೆಗೆ ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸಿವೆ. ಪ್ರತಿಪಕ್ಷಗಳ ಸ್ಪೀಕರ್ ಅಭ್ಯರ್ಥಿಯಾಗಿ ಕೆ.ಸುರೇಶ್ ಕಣಕ್ಕೆ ಇಳಿಯುತ್ತಿದ್ದಾರೆ. ಇದಕ್ಕಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಎನ್‌ಡಿಎ ಪರವಾಗಿ ಓಂ ಬಿರ್ಲಾ ಲೋಕಸಭೆ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ಲೋಕಸಭೆ ಸ್ಪೀಕರ್ ಚುನಾವಣೆ ಜೂನ್ 26, ಬುಧವಾರ ನಡೆಯಲಿದೆ. ಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಇಲ್ಲಿಯವರೆಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಒಮ್ಮತದ ಮೇರೆಗೆ ಸ್ಪೀಕರ್ ಆಯ್ಕೆಯಾಗುತ್ತಿತ್ತು.

ಲೋಕಸಭಾ ಸ್ಪೀಕರ್ ಹುದ್ದೆಗೆ ಮೊದಲ ಬಾರಿ‌ ನಡೆಯಲಿದೆ ಚುನಾವಣೆ| ನಾಮಪತ್ರ ಸಲ್ಲಿಸಿದ ಒಂ ಬಿರ್ಲಾ, ಕೆ.ಸುರೇಶ್ Read More »

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ಪೂಜೆ ನೆರವೇರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಕುಟುಂಬ ಸಮೇತ ಭೇಟಿ ನೀಡಿ ಮಹಾಪೂಜೆ, ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿಯಾದರು. ಕುಟುಂಬ ಸಮೇತರಾಗಿ ಆಗಮಿಸಿದ ಡಿಕೆ ಶಿವಕುಮಾರ್ ಅವರು ಆನೆ ಬಳಿ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವಾದ್ಯ ಮೇಳ ಕುಂಬ ಕಳಶದೊಂದಿಗೆ ಡಿಕೆಶಿಯನ್ನ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ‌ ಸಂಸ್ಕೃತಿಗಳನ್ನು‌

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ಪೂಜೆ ನೆರವೇರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ Read More »

ಸುಳ್ಯ: ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ನಾಪತ್ತೆಯಾದ ವ್ಯಕ್ತಿಯೊಬ್ಬರ ಶವ ಪಯಸ್ವಿನಿ ನದಿಯಲ್ಲಿ ಪತ್ತೆಯಾದ ಘಟನೆ ಸುಳ್ಯ ಸಮೀಪದ ಭಸ್ಮಡ್ಕ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ಕುರುಂಜಿಗುಡ್ಡೆ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ. ವಿಶೇಷ ಚೇತನರಾದ ಕುಮಾರ್ ಅವರು ಭಾನುವಾರ(ಜೂ.23) ಮಧ್ಯಾಹ್ನದ ನಂತರ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಅವರ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಭಸ್ಮಡ್ಕ ಎಂಬಲ್ಲಿ ಪಯಸ್ವಿನಿ ನದಿಯ ದಡದಲ್ಲಿ ಅವರ ಚಪ್ಪಲಿ ಪತ್ತೆಯಾಗಿತ್ತು. ಹೀಗಾಗಿ ಸೋಮವಾರ ಬೆಳಗ್ಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು.

ಸುಳ್ಯ: ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ Read More »

ಸುಳ್ಯ:ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ

ಸಮಗ್ರ ನ್ಯೂಸ್:ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ವಾರ್ತಾಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿ ಇದು ಹೊರಬರಲು ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು. ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ತಾಪತ್ರ ಹೊರಬರುವಲ್ಲಿ ಸಹಕರಿಸಿದ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಹೋದ್ಯೋಗಿ ಮಿತ್ರರು ಹಾಗೂ ಸಂಪಾದಕ

ಸುಳ್ಯ:ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ Read More »

ಮಸಾಲ-ಪಾನಿಪೂರಿಯ ಕೆಮಿಕಲ್‌ ಸಾಸ್‌ ನಿಷೇಧ?

ಸಮಗ್ರ ನ್ಯೂಸ್: ಮುಂದಿನ 3 ದಿನಗಳಲ್ಲಿ ಅಸುರಕ್ಷಿತ ಮಸಾಲಪೂರಿ ಹಾಗೂ ಪಾನಿಪೂರಿ ಮಾರಾಟವನ್ನು ರಾಜ್ಯಾದ್ಯಂತ ನಿಷೇಧ ಮಾಡಲಾಗುತ್ತದೆಯೇ? ಅಂಥದ್ದೊಂದು ತೂಗುಕತ್ತಿ ಈ ಮಸಾಲಾ ತಿಂಡಿಗಳ ಮೇಲಿದೆ. ಇದಕ್ಕೆ ಬಳಸುವ ಕೆಮಿಕಲ್‌ ಸಾಸ್‌ ಮಕ್ಕಳ ಜೀರ್ಣಾಂಗದ ಮೇಲೂ ಪರಿಣಾಮ ಬೀರಿ, ಹೈಪರ್‌ ಆಕ್ವಿವ್‌ನೆಸ್‌ ಗೆ ಕಾರಣವಾಗುತ್ತಿದೆ ಎಂಬ ಅಂಶ ಗೊತ್ತಾಗಿದೆ.ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಅಸುರಕ್ಷಿತ ಗೋಬಿ ಹಾಗೂ ಕಾಟನ್‌ ಕ್ಯಾಂಡಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಜೂ. 24ರಂದು ಕೃತಕ

ಮಸಾಲ-ಪಾನಿಪೂರಿಯ ಕೆಮಿಕಲ್‌ ಸಾಸ್‌ ನಿಷೇಧ? Read More »