June 2024

ಕುಕ್ಕೆ ಸುಬ್ರಹ್ಮಣ್ಯ: ಭಾರೀ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಟ್ಟ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದ ಸುರಿದ ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸ್ನಾನ ಘಟ್ಟ ಮುಳುಗಡೆಯಾಗಿದೆ. ನಿರಂತರ ಮಳೆಗೆ ನದಿಯಲ್ಲಿ ನೀರಿ ಮಟ್ಟ ಏರಿಕೆಯಾಗಿ ಇದೀಗ ಸ್ನಾನ ಘಟ್ಟ ಮುಳುಗಡೆಯಾಗಿದ್ದು, ನದಿಗಿಳಿಯದಂತೆ ಭಕ್ತರಿಗೆ ಸೂಚಿಸಲಾಗಿದೆ. ಭಕ್ತರು ನದಿ ದಡದಲ್ಲೇ ತೀರ್ಥ ಸ್ನಾನ ಮಾಡುತ್ತಿದ್ದಾರೆ. ಕುಮಾರಧಾರ ಉಪನದಿ ದರ್ಪಣತೀರ್ಥ ಕೂಡ ತುಂಬಿ ಹರಿಯುತ್ತಿದೆ. ಕುಮಾರಧಾರ ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿಗಳು, ಗೃಹ ರಕ್ಷಕ ದಳ […]

ಕುಕ್ಕೆ ಸುಬ್ರಹ್ಮಣ್ಯ: ಭಾರೀ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ Read More »

ಮಂಗಳೂರು: ವಿದ್ಯುತ್ ತಂತಿ‌ ಸ್ಪರ್ಶಿಸಿ ಇಬ್ಬರು‌ ಆಟೋ‌ ಚಾಲಕರು ಸಾವು

ಸಮಗ್ರ ನ್ಯೂಸ್: ವಿದ್ಯುತ್ ತಂತಿ ತಗುಲಿ ಇಬ್ಬರು ರಿಕ್ಷಾ ಚಾಲಕರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಮಂಗಳೂರು ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ. ಮೃತ ರಿಕ್ಷಾ ಚಾಲಕರನ್ನು ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ. ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಸಕಲೇಶಪುರದವರು. ಇಬ್ಬರೂ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ 4.30 ರ ಸುಮಾರಿಗೆ ಒಬ್ಬರು ರಿಕ್ಷಾ ಸ್ವಚ್ಚ ಗೊಳಿಸಲು ಹೊರಬಂದಿದ್ದು, ರಿಕ್ಷಾ ತೊಳೆಯುವ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ

ಮಂಗಳೂರು: ವಿದ್ಯುತ್ ತಂತಿ‌ ಸ್ಪರ್ಶಿಸಿ ಇಬ್ಬರು‌ ಆಟೋ‌ ಚಾಲಕರು ಸಾವು Read More »

ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ

ಸಮಗ್ರ ನ್ಯೂಸ್: ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಅಲಿಯಾಸ್‌ ಬೊಮ್ಮನಹಳ್ಳಿ ಬಾಬು ಅವರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ. ಕದ್ದ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ಫ್ರೇಜರ್‌ ಟೌನ್‌ ನಿವಾಸದ ಬಳಿ ಅಟ್ಟಿಕಾ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ ಕುರಿತು ತುರುವೇಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ, ತುರುವೇಕೆರೆ ಸಿಪಿಐ ಲೋಹಿತ್‌ ಬಿ.ಎನ್‌ ಹಾಗೂ ತಂಡದಿಂದ ಬಂಧಿಸಲಾಗಿದೆ. ಕಳ್ಳತನದ

ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ Read More »

ಸುರತ್ಕಲ್: ರಾ.ಹೆದ್ದಾರಿ ದುರವಸ್ಥೆಗೆ ಪಲ್ಟಿ ಹೊಡೆದ ಸ್ಕೂಟರ್| ಗುಂಡಿಯಲ್ಲೇ‌ ಸ್ಕೂಟರ್ ಬಿಟ್ಟು ಪ್ರತಿಭಟನೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಬಳಿ ಅರೆಬರೆ ಕಾಂಕ್ರೀಟ್ ಹಾಗೂ ಡಾಂಬರು ಹಾಕಿದ್ದು, ಭಾರಿ ಮಳೆಗೆ ಹೆದ್ದಾರಿ ಹೊಂಡಮಯವಾಗಿದೆ. ಸ್ಕೂಟರ್ ಸವಾರರೊಬ್ಬರು ಬುಧವಾರ ಬೆಳಿಗ್ಗೆ ಹೆದ್ದಾರಿಯ ಗುಂಡಿಗೆ ಬಿದ್ದು ಗಾಯಗೊಂಡರು. ಇದರಿಂದ ಬೇಸತ್ತ ಅವರು, ತಾವು ಬಿದ್ದ ಹೊಂಡದಲ್ಲೇ ತಮ್ಮ ಸ್ಕೂಟರ್ ನಿಲ್ಲಿಸಿ, ತಾವೂ ಅದರ ಪಕ್ಕದಲ್ಲೇ ನಿಂತು ಈ ದುರವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿದರು. ಅಲ್ಲದೇ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರಿಗೂ ಗುಂಡಿಗಳ ಕುರಿತು ಎಚ್ಚರಿಸುವ ಮೂಲಕ ಗಮನ ಸೆಳೆದರು. ಇಷ್ಟೆಲ್ಲ‌

ಸುರತ್ಕಲ್: ರಾ.ಹೆದ್ದಾರಿ ದುರವಸ್ಥೆಗೆ ಪಲ್ಟಿ ಹೊಡೆದ ಸ್ಕೂಟರ್| ಗುಂಡಿಯಲ್ಲೇ‌ ಸ್ಕೂಟರ್ ಬಿಟ್ಟು ಪ್ರತಿಭಟನೆ Read More »

ಪುತ್ತೂರು: ಭಾರೀ ಮಳೆಗೆ ಮನೆ ಮೇಲೆ ಧರೆ‌ ಕುಸಿದು‌ ಮಣ್ಣಿನಡಿ ಸಿಲುಕಿದ ಮಕ್ಕಳು| ಪವಾಡ ಸದೃಶ ತಪ್ಪಿದ ಭಾರೀ ದುರಂತ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮತ್ತೊಂದು ಅವಘಡ ಸಂಭವಿಸಿದೆ. ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಭಾರೀ ಮಳೆಗೆ ಮನೆ ಮೇಲೆ ಧರೆ ಕುಸಿದ ಪರಿಣಾಮ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ ಘಟನೆ ಇಂದು(ಗುರುವಾರ) ಬೆಳಗಿನ ಜಾವ ನಡೆದಿದೆ. ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಘಟನೆ ನಡೆದಿದೆ. ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆ ಮೇಲೆ ಧರೆ ಕುಸಿದಿದೆ. ಅದೃಷ್ಟವಶಾತ್ ಮಣ್ಣಿನಡಿ ಸಿಲುಕಿದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಡೆ ಕುಸಿದ

ಪುತ್ತೂರು: ಭಾರೀ ಮಳೆಗೆ ಮನೆ ಮೇಲೆ ಧರೆ‌ ಕುಸಿದು‌ ಮಣ್ಣಿನಡಿ ಸಿಲುಕಿದ ಮಕ್ಕಳು| ಪವಾಡ ಸದೃಶ ತಪ್ಪಿದ ಭಾರೀ ದುರಂತ Read More »

ಕರಾವಳಿ, ಮಲೆನಾಡಿನಲ್ಲಿ ಭಾರೀ ವರ್ಷಧಾರೆ| ನಾಲ್ಕು ಬಲಿ; ಇಂದು ರೆಡ್ ಅಲರ್ಟ್

ಸಮಗ್ರ ನ್ಯೂಸ್: ಹಲವು ದಿನಗಳ ಬಳಿಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ ಮತ್ತು ವಿದ್ಯುತ್ ಕಂಬ ಉರುಳಿಬಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಂಗಳೂರಲ್ಲಿ ಮನೆಯೊಂದರ ಮೇಲೆ ಕಾಂಪೌಂಡ್ ಕುಸಿದು ಒಂದೇ ಕುಟುಂಬದ ನಾಲ್ವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನು ಗುರುವಾರವೂ ಭಾರೀ ಮಳೆ ನಿರೀಕ್ಷೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ತಾಲೂಕುಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ

ಕರಾವಳಿ, ಮಲೆನಾಡಿನಲ್ಲಿ ಭಾರೀ ವರ್ಷಧಾರೆ| ನಾಲ್ಕು ಬಲಿ; ಇಂದು ರೆಡ್ ಅಲರ್ಟ್ Read More »

ಕರಾವಳಿಯಲ್ಲಿ ಭಾರೀ ಮಳೆ‌ ಮುನ್ಸೂಚನೆ| ಜೂ.27ರಂದು ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ನಾಳೆ ಭಾರೀ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ. ನಾಳೆ(ಜೂ. ೨೭) ಮಾತ್ರವಲ್ಲದೆ ಶುಕ್ರವಾರಕ್ಕೂ ಮಳೆ ಮುಂದುವರೆಯಲಿದೆ. ಸುಮಾರು 30 ತಾಸಿನ ಭಾರೀ ಮಳೆಗೆ ತಯಾರಾಗಲು ಈ ಜಿಲ್ಲೆಗಳ ಜನರಿಗೆ ಸೂಚಿಸಲಾಗಿದೆ. ನಡುವೆ ದಕ್ಷಿಣ ಒಳನಾಡಿನಲ್ಲೂ ಮುಂಗಾರು

ಕರಾವಳಿಯಲ್ಲಿ ಭಾರೀ ಮಳೆ‌ ಮುನ್ಸೂಚನೆ| ಜೂ.27ರಂದು ರೆಡ್ ಅಲರ್ಟ್ ಘೋಷಣೆ Read More »

ಭಾರೀ ಮಳೆ ಹಿನ್ನೆಲೆ| ಕೊಡಗು ಜಿಲ್ಲೆಯ ಈ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ನಾಳೆ(ಜೂ.27) ಭಾರೀ ಮಳೆ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಎರಡು ಜಿಲ್ಲೆಯ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಾಳೆ (ಜೂ.27) ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ಬಗ್ಗೆ ಬಿಇಓ ರಜೆ ಘೋಷಣೆಯ ಆದೇಶ ಹೊರಡಿಸಿದ್ದು, ನಾಳೆ ವಿರಾಜಪೇಟೆ,. ಪೊನ್ನಂಪೇಟೆ ತಾಲೂಕಿನಲ್ಲಿ ಭಾರೀ ಮಳೆಯ

ಭಾರೀ ಮಳೆ ಹಿನ್ನೆಲೆ| ಕೊಡಗು ಜಿಲ್ಲೆಯ ಈ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ Read More »

ಭಾರಿ ಮಳೆ ಹಿನ್ನೆಲೆ| ನಾಳೆ(ಜೂ.27)ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿ‌ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ (ಜೂ.27) ಗುರುವಾರ ಶಾಲೆಗಳಿಗೆ ರಜೆ ನೀಡಿ ದ.ಕ. ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದ್ದಾರೆ. ರಜೆ ಪ್ರೌಢಶಾಲೆವರೆಗಿನ ತರಗತಿಗಳಿಗೆ ಮಾತ್ರ ಅನ್ವಯವಾಗಲಿದೆ.

ಭಾರಿ ಮಳೆ ಹಿನ್ನೆಲೆ| ನಾಳೆ(ಜೂ.27)ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ Read More »

ಹವಾಮಾನ ಆಧಾರಿತ ಬೆಳೆವಿಮೆಗೆ ಕಂಪನಿ ಒಪ್ಪಂದ| ಶೀಘ್ರದಲ್ಲೇ ವಿಮಾಕಂತು ಪಾವತಿ ಆದೇಶ ಜಾರಿ‌ ಸಾಧ್ಯತೆ

ಸಮಗ್ರ ನ್ಯೂಸ್: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ವಿಮಾ ಕಂಪನಿ ಜೊತೆ ಒಪ್ಪಂದ ರೂಪುಗೊಂಡಿದ್ದು, ಶೀಘ್ರದಲ್ಲೇ ಪ್ರೀಮಿಯಂ ‌ಪಾವತಿಗೆ ಆದೇಶ ಜಾರಿಯಾಗುವ ನಿರೀಕ್ಷೆಯಿದೆ. ಬೆಳೆವಿಮೆಯಿಂದ ಅಡಿಕೆ, ಕಾಳುಮೆಣಸು ‌ಬೆಳೆಗಳನ್ನು ಹೊರಗಿಡಲಾಗಿದ್ದು, ಇದರಿಂದ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಕೃಷಿಕರಿಗೆ ತೊಂದರೆಯಾಗಿತ್ತು. ಕಂಪನಿ ಜೊತೆ ಒಪ್ಪಂದ ಕೈಗೂಡದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿತ್ತು. ಇದೀಗ ಒಪ್ಪಂದಕ್ಕೆ ಟಾಟಾ ಎಐಜಿ ಸಂಸ್ಥೆ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ವಿಮಾ ಕಂತು ಪಾವತಿಸಲು ಆದೇಶವಾಗುವ ನಿರೀಕ್ಷೆಯಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೇಟಿ

ಹವಾಮಾನ ಆಧಾರಿತ ಬೆಳೆವಿಮೆಗೆ ಕಂಪನಿ ಒಪ್ಪಂದ| ಶೀಘ್ರದಲ್ಲೇ ವಿಮಾಕಂತು ಪಾವತಿ ಆದೇಶ ಜಾರಿ‌ ಸಾಧ್ಯತೆ Read More »