June 2024

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ| ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವಿಶ್ವ ಮನ್ನಣೆ ಪಡೆದಿವೆ. ಗಗನಚುಂಬಿ ಬೆಟ್ಟಗುಡ್ಡಗಳು, ಹಸಿರ ರಾಶಿ. ಮುತ್ತಿಕ್ಕುವ ಮಂಜಿನ ಹನಿ ಎಲ್ಲವೂ ಪ್ರವಾಸಿಗರಿಗೆ ಬಹಳ ಇಷ್ಟ. ಹಾಗಾಗಿಯೇ ಪ್ರವಾಸ ಬರಲು ಬಹಳಷ್ಟು ಮಂದಿ ಕೊಡಗು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. 2023ರಲ್ಲಿ ಕೊಡಗು ಪ್ರವಾಸೋದ್ಯಮ ಇನ್ನಿಲ್ಲದಂತೆ ಚೇತರಿಸಿಕೊಂಡಿತ್ತು. ಸ್ವತಃ ಪ್ರವಾಸೋದ್ಯಮಗಳೇ ಅಚ್ಚರಿ ಪಡುವಷ್ಟು ಜಿಲ್ಲೆ ವೃದ್ಧಿಯಾಗಿತ್ತು. ಜಿಲ್ಲೆಯ ಆರ್ಥಿಕತೆ ಬಹಳಷ್ಟು ಪ್ರವಾಸೋದ್ಯಮವನ್ನೂ (tourism) ನೆಚ್ಚಿಕೊಂಡಿದೆ. ಆದರೆ ಈ ವರ್ಷ ಇಡೀ ದೇಶವನ್ನ ಕಾಡಿದ್ದ ಬರ ಹಾಗೂ ಬಿಸಿಲಿನ […]

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ| ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು Read More »

ಎಸ್ ಡಿಪಿಐ ಕಡಬ ಬ್ಲಾಕ್ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ

ಸಮಗ್ರ ನ್ಯೂಸ್: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಡಬ ಬ್ಲಾಕ್ ಸಮಿತಿಯ ವತಿಯಿಂದ ಕಾರ್ಯಕರ್ತರ ಸಮಾವೇಶವು ಮೇ 31ರಂದುನೆಲ್ಯಾಡಿಯಲ್ಲಿ ಕಡಬ ಬ್ಲಾಕ್ ಸಮಿತಿಯ ಅಧ್ಯಕ್ಷ ಹಾರಿಸ್ ಕಡಬ ರವರು ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರ ಪಕ್ಷ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸವಣೂರು ರವರು ಮಾತನಾಡಿ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಸಮಾವೇಶದ ಸಮಾರೋಪ ಭಾಷಣ ಗೈದ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಶರೀಫ್ ನಿಂತಿಕಲ್

ಎಸ್ ಡಿಪಿಐ ಕಡಬ ಬ್ಲಾಕ್ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ Read More »

ಬಿಸಿಲಿನ ತಾಪಕ್ಕೆ ಉತ್ತರ ಭಾರತ ತತ್ತರ… ಬಿಹಾರದಲ್ಲಿ 14 ಜನ ಸಾವು

ಸಮಗ್ರ ನ್ಯೂಸ್: ದೇಶದೆಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗಿದು, ಉತ್ತರ ಭಾರತದ ವಿವಿಧ ಭಾಗದಲ್ಲಿ ಬಿಸಿಗಾಳಿ ಬೀಸುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಬಿಹಾರದಲ್ಲಿ ಬಿಸಿಗಾಳಿಯ ಶಾಖಕ್ಕೆ 24 ಗಂಟೆಗಳಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿ ಸುಮಾರು 14 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಹೆಚ್ಚಿನ ಸಾವು ನೋವು ಭೋಜ್‌ಪುರದಲ್ಲಿ ನಡೆದಿದ್ದು, ಅಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ 5 ಮಂದಿ ಮೃತಪಟ್ಟಿದ್ದಾರೆ. ರೋಹ್ಟಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು, ಕೈಮೂರ್ ಮತ್ತು ಔರಂಗಾಬಾದ್

ಬಿಸಿಲಿನ ತಾಪಕ್ಕೆ ಉತ್ತರ ಭಾರತ ತತ್ತರ… ಬಿಹಾರದಲ್ಲಿ 14 ಜನ ಸಾವು Read More »

ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ/ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಸಮಗ್ರ ನ್ಯೂಸ್: “ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ಪ್ರಿಯಾಂಕಾ ವಾದ್ರಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು’ ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದೇಶದಲ್ಲಿ ಯಾರಾದರೂ ಪ್ರಧಾನಿಯಾಗಬೇಕು ಎಂದರೆ ನನ್ನ ಆಯ್ಕೆ ರಾಹುಲ್ ಗಾಂಧಿ, ದೇಶದ ಯುವಕ-ಯುವತಿಯರು, ದೇಶದ ಶಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ. ಹಾಗಾಗಿ, ರಾಹುಲ್ ಗಾಂಧಿ ಅವರೇ ಪ್ರಧಾನಿಯಾಗಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಎನ್‍ಡಿಟಿವಿಯೊಂದಿಗೆ ಸಂದರ್ಶನದಲ್ಲಿ ಅವರು ಹೇಳಿದ್ದಾರೆ ಲೋಕಸಭೆ ಚುನಾವಣೆ ಕೊನೆಯ ಹಂತದ ಮತದಾನ ಶನಿವಾರ (ಜೂನ್ 1) ನಡೆಯಲಿದ್ದು ಜೂನ್ 4ರ ಫಲಿತಾಂಶದತ್ತ

ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ/ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ Read More »

ದಾಖಲೆ ನಿರ್ಮಿಸಿದ ಮೋದಿ ಚುನಾವಣಾ ಪ್ರಚಾರ/ 206 ಪ್ರಚಾರ ಸಭೆ, 80 ಸಂದರ್ಶನಗಳಲ್ಲಿ ಪಾಲ್ಗೊಂಡ ಪ್ರಧಾನಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಗಾಗಿ 206 ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ, ಪತ್ರಕರ್ತರೊಂದಿಗೆ 80 ಸಂದರ್ಶನಗಳಲ್ಲಿ ಭಾಗಿಯಾಗುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಹೋಶಿಯಾರ್‍ಪುರದಲ್ಲಿ ತಮ್ಮ ಕೊನೆಯ ಪ್ರಚಾರ ಸಭೆಯನ್ನು ನಡೆಸಿದ ನಂತರ ಧ್ಯಾನ ಮಾಡಲು ಕನ್ಯಾಕುಮಾರಿಗೆ ತೆರಳಿದ್ದಾರೆ. ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದು, ಒಂದೇ ದಿನದಲ್ಲಿ ಹಲವು ಸಭೆಗಳನ್ನು ಉದ್ದೇಶಿಸಿ

ದಾಖಲೆ ನಿರ್ಮಿಸಿದ ಮೋದಿ ಚುನಾವಣಾ ಪ್ರಚಾರ/ 206 ಪ್ರಚಾರ ಸಭೆ, 80 ಸಂದರ್ಶನಗಳಲ್ಲಿ ಪಾಲ್ಗೊಂಡ ಪ್ರಧಾನಿ Read More »

ಹಾಜಬ್ಬರ ಶಾಲೆಯಲ್ಲಿ ಪಿಯು ಕಾಲೇಜು ಆರಂಭ/ ನನಸಾದ ಹಾಜಬ್ಬರ ಕಾಲೇಜಿನ ಕನಸು

ಸಮಗ್ರ ನ್ಯೂಸ್: ಪದ್ಮಶ್ರೀ ಹರೇಕಳ ಹಾಜಬ್ಬರ ಹಲವು ವರ್ಷಗಳ ಕನಸಿನ ಪಿಯು ಕಾಲೇಜು ಕೊನೆಗೂ ಜೂ.1ಕ್ಕೆ ಶುಭಾರಂಭವಾಗಲಿದ್ದು, ಈಗಿರುವ ಶಾಲೆ ಕೊಠಡಿಯಲ್ಲೇ ತಾತ್ಕಾಲಿಕವಾಗಿ ಕಾಲೇಜು ಆರಂಭವಾಗಲಿದೆ. ನೂತನ ಪಿಯು ಕಾಲೇಜಿಗೆ ಈವರೆಗೆ (ಮೇ 30ರವರೆಗೆ) 25 ಮಂದಿ ಅರ್ಜಿ ಪಡೆದುಕೊಂಡಿದ್ದು, ಅದರಲ್ಲಿ 14 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಮಕ್ಕಳ ದಾಖಲಾತಿಗೆ ಇನ್ನೂ 10-15 ದಿನ ಇರುವುದರಿಂದ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಹಾಜಬ್ಬ ಇಟ್ಟುಕೊಂಡಿದ್ದಾರೆ. ಪಿಯು ಕಾಲೇಜು ಆರಂಭಿಸಲು ಕೆಲ ವರ್ಷಗಳಿಂದ ಜಿಲ್ಲಾಡಳಿತ, ಸರ್ಕಾರ,

ಹಾಜಬ್ಬರ ಶಾಲೆಯಲ್ಲಿ ಪಿಯು ಕಾಲೇಜು ಆರಂಭ/ ನನಸಾದ ಹಾಜಬ್ಬರ ಕಾಲೇಜಿನ ಕನಸು Read More »

ಕೇರಳ ಸಾರಿಗೆ ಬಸ್ ನಲ್ಲೇ ಮಗುವಿಗೆ ಜನ್ಮನೀಡಿದ ತುಂಬು‌ ಗರ್ಭಿಣಿ|ಚಾಲಕನ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ

ಸಮಗ್ರ ನ್ಯೂಸ್: ತುಂಬು ಗರ್ಭಿಣಿಯೊಬ್ಬರು ತ್ರಿಶೂರ್​ನಿಂದ ಕೋಳಿಕ್ಕೋಡ್​ಗೆ ಬಸ್​ನಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಬಸ್‌ ಚಾಲಕ ಬಸ್ಸನ್ನೇ ಆಸ್ಪತ್ರೆಯತ್ತ ತಂದು ನಿಲ್ಲಿಸಿ ಮಾನವೀಯತೆ ಮೆರೆದಿದ್ದಾನೆ. ಆ ಮುನ್ನವೇ ಮಹಿಳೆ ಬಸ್​ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಬಸ್​ ಪೆರಮಂಗಲಂ ಪ್ರದೇಶವನ್ನು ದಾಟಿದಂತೆ 37 ವರ್ಷದ ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ತಿಳಿದಂತೆ ಬಸ್​ ಚಾಲಕ ಬಸ್​ ಅನ್ನು ತ್ರಿಶೂರು ಕಡೆಗೆ ತಿರುಗಿಸಿದ್ದಾರೆ. ಅಲ್ಲಿನ ಅಮಲಾ ಆಸ್ಪತ್ರೆಗೆ

ಕೇರಳ ಸಾರಿಗೆ ಬಸ್ ನಲ್ಲೇ ಮಗುವಿಗೆ ಜನ್ಮನೀಡಿದ ತುಂಬು‌ ಗರ್ಭಿಣಿ|ಚಾಲಕನ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ Read More »

ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ವಿವಾಹ/ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಸಿಂಧು ಎಂದು ಮಧ್ಯಪ್ರದೇಶ ಹೈಕೋರ್ಟ್

ಸಮಗ್ರ ನ್ಯೂಸ್: ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆಯ ನಡುವಣ ವಿವಾಹ ಅಸಿಂಧು ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಮಾಡಿಕೊಡಿದ್ದರೂ, ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅದನ್ನು ಕ್ರಮಬದ್ಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾ. ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಪೀಠ ಹೇಳಿದೆ. ಮಹಮದೀಯ ಕಾನೂನಿನ ಪ್ರಕಾರ, ಮೂರ್ತಿ ಪೂಜಕ ಅಥವಾ ಅಗ್ನಿ ಆರಾಧನೆ ಮಾಡುವ ಯುವತಿಯ ಜತೆ ಮುಸ್ಲಿಂ ಯುವಕನ ವಿವಾಹ ಅಸಿಂಧುವಾಗುತ್ತದೆ. ವಿಶೇಷ

ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ವಿವಾಹ/ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಸಿಂಧು ಎಂದು ಮಧ್ಯಪ್ರದೇಶ ಹೈಕೋರ್ಟ್ Read More »

ಕುಟುಂಬದ ಜೊತೆ ಎಚ್.ಡಿ ಕುಮಾರಸ್ವಾಮಿ ಜಾಲಿ ಟ್ರಿಪ್… ಟೀಕಿಸಿದ ಕಾಂಗ್ರೆಸ್

ಸಮಗ್ರ ನ್ಯೂಸ್: ಪ್ರಜ್ವಲ್ ಭಾರತಕ್ಕೆ ಬಂದಾಯ್ತು..ಈ ಪೆನ್ ಡ್ರೈವ್ ಪ್ರಕರಣ ಮತ್ತು ಲೋಕ ಚುನಾವಣೆಯಿಂದ ಬ್ರೇಕ್ ಪಡೆಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕುಟುಂಬದ ಜೊತೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ. ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಕುಟುಂಬದವರನ್ನು ಬಿಟ್ಟು ಯಾರನ್ನು ನಾನು ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಚುನಾವಣೆ ಫಲಿತಾಂಶ ಮೊದಲೇ ಬೆಂಗಳೂರಿಗೆ ಬರಲು ತೀರ್ಮಾನ ಮಾಡಿದ್ದಾರೆ. ಇನ್ನೂ ಪ್ರಜ್ವಲ್ ಬಂಧನದ ಹಿನ್ನೆಲೆ ಕುಮಾರಸ್ವಾಮಿ ಜಾಲಿ ಟ್ರಿಪ್ ಹೋಗಿರೋದ್ರಿಂದ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್

ಕುಟುಂಬದ ಜೊತೆ ಎಚ್.ಡಿ ಕುಮಾರಸ್ವಾಮಿ ಜಾಲಿ ಟ್ರಿಪ್… ಟೀಕಿಸಿದ ಕಾಂಗ್ರೆಸ್ Read More »

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಬೀದಿಯಲ್ಲಿ ಮಲಗಿದ ಪ್ರಕರಣ| ಭಕ್ತರಿಗೆ ತೊಂದರೆಯಾಗದಂತೆ ಕ್ರಮ – ಎಸಿ ಜುಬಿನ್ ಮೊಹಪಾತ್ರ

ಸಮಗ್ರ‌ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ದಿನಗಳ ಸಂದರ್ಭದಲ್ಲಿ ವಸತಿ ಸಮಸ್ಯೆಯಿಂದ ಯಾವುದೇ ಭಕ್ತರಿಗೆ ತೊಂದರೆ ಆಗದಂತೆ ಪೂರಕ ಕ್ರಮಕೈಗೊಳ್ಳಲು ದೇವಸ್ಥಾನದ ಅಧಿಕಾರಿಗಳಿಗೆ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಜುಬಿನ್‌ ಮೊಹಪಾತ್ರ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಬೇಸಗೆ ರಜೆಯ ಸಂದರ್ಭ ಕುಕ್ಕೆಯ ರಥಬೀದಿಯ ಒಂದು ಬದಿಯಲ್ಲಿ ಹಲವಾರು ಭಕ್ತರು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕ್ಷೇತ್ರದಲ್ಲಿ ವಸತಿ ಸಮಸ್ಯೆಯಿಂದ ಈ ರೀತಿ ಭಕ್ತರು ಬೀದಿಯಲ್ಲಿ ಮಲಗುತ್ತಿದ್ದಾರೆ ಎಂಬ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಬೀದಿಯಲ್ಲಿ ಮಲಗಿದ ಪ್ರಕರಣ| ಭಕ್ತರಿಗೆ ತೊಂದರೆಯಾಗದಂತೆ ಕ್ರಮ – ಎಸಿ ಜುಬಿನ್ ಮೊಹಪಾತ್ರ Read More »