June 2024

ಚುನಾವಣೋತ್ತರ ಸಮೀಕ್ಷೆ ತಿರಸ್ಕರಿಸಿದ ಇಂಡಿಯಾ ಮೈತ್ರಿ ಕೂಟ

ಸಮಗ್ರ ನ್ಯೂಸ್: ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳನ್ನು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳಾದ ಕಾಂಗ್ರೆಸ್, ಆಪ್ ಮತ್ತು ಸಮಾಜವಾದಿ ಪಕ್ಷಗಳು ಸ್ಪಷ್ಟವಾಗಿ ತಿರಸ್ಕರಿಸಿವೆ. ಸಮೀಕ್ಷೆಗಳ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್, ಈ ಸಮೀಕ್ಷೆಗಳೆಲ್ಲಾ ಬೋಗಸ್. ಇದು ಮೋದಿ ಮೀಡಿಯಾ ಪೆÇೀಲ್. ತಿರುಚಿದ ಚುನಾವಣೆ ಸಮರ್ಥನೆಗೆ ಮತ್ತು ಮಾನಸಿಕ ಯುದ್ಧ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಆಡುತ್ತಿರುವ ಆಟ. ನಿಮಗೆಲ್ಲಾ ಸಿಧು ಮೂಸೇವಾಲಾರ […]

ಚುನಾವಣೋತ್ತರ ಸಮೀಕ್ಷೆ ತಿರಸ್ಕರಿಸಿದ ಇಂಡಿಯಾ ಮೈತ್ರಿ ಕೂಟ Read More »

ಯುವತಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಮುಸ್ಲಿಂ ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಶಿವಮೊಗ್ಗ ನಗರದ ಆರ್‌ಎಂಎಲ್ ನಗರದ ಸಮೀಪ ನಡೆದಿದೆ. ಶಿವಮೊಗ್ಗದ ನಂದನ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು ಈತ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅನ್ಯ ಕೋಮಿನ ಸಹೋದ್ಯೋಗಿಯನ್ನು ಕೆಲಸದ ನಿಮಿತ್ತ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ 20ಕ್ಕೂ ಹೆಚ್ಚು ಅನ್ಯ ಕೋಮಿನ ಯುವಕರು ನಂದನ್‌ನನ್ನು ತಡೆದು ಥಳಿಸಿದ್ದರು. ನಮ್ಮ ಸಮುದಾಯದ ಹುಡುಗಿಯನ್ನು ಯಾಕೆ ಬೈಕ್‌ನಲ್ಲಿ ಕೂರಿಸಿಕೊಂಡು

ಯುವತಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ Read More »

ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ| ಮಹಿಳೆ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಸೇರಿ ಹಲವರನ್ನು ಪುಲಿಕೇಶಿ ನಗರ ಪೊಲೀಸ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ದಾಳಿ ಖಂಡಿಸಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಅದೇ ರೀತಿ ನಗರದ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರು ಸೇರಿ ಹಲವರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ ಠಾಣೆಗೆ ಕರೆದೊಯ್ದ ವೇಳೆ ಪ್ಯಾಲೆಸ್ತೀನ್‌

ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ| ಮಹಿಳೆ ಪೊಲೀಸ್ ವಶಕ್ಕೆ Read More »

ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ‘ಕೈ’ ಕಾರ್ಯಕರ್ತ| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಬಾಗಲಕೋಟೆಯ ಕಾಂಗ್ರೆಸ್‌ ಮುಖಂಡನೊಬ್ಬರು ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿರುವ ಘಟನೆ ಜಿಲ್ಲೆಯ ಹವೇಲಿ ಗ್ರಾಮದಲ್ಲಿ ನಡೆದಿದೆ. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಸಾಂಗ್ ಹಾಕಿ ಕಾಂಗ್ರೆಸ್‌ ಮುಖಂಡ ಕೇಕ್ ಕಟ್ ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಳೆ ಹವೇಲಿ ಗ್ರಾಮದ ಕೈ ಮುಖಂಡ ರಮೇಶ್ ರಾಠೋಡ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ತಲ್ವಾರ್‌ನಿಂದ ಕೇಕ್ ಕತ್ತರಿಸಿದ ಮುಖಂಡನಿಗೆ ಬೆಂಬಲಿಗರು ಸನ್ಮಾನ ಮಾಡಿದ್ದಾರೆ. ಈ ವಿಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಬೆಂಬಲಿಗರು ಹಂಚಿಕೊಂಡಿದ್ದಾರೆ.

ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ‘ಕೈ’ ಕಾರ್ಯಕರ್ತ| ವಿಡಿಯೋ ವೈರಲ್ Read More »

ಭಾರತ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ/ ಕೋಚ್ ಆಯ್ಕೆಯ ಕುರಿತ ವದಂತಿಗಳಿಗೆ ತೆರೆ ಎಳೆದ ಗಂಭೀರ್

ಸಮಗ್ರ ನ್ಯೂಸ್: ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಅಯ್ಕೆಯ ಕುರಿತು ಎದ್ದಿರುವ ಊಹಾಪೋಹಗಳ ನಡುವೆ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗುವುದುಗೌರವದ ವಿಚಾರ ಎಂದು ಹೇಳಿದ್ದಾರೆ ನಾನು ಭಾರತ ತಂಡಕ್ಕೆ ಕೋಚ್ ಆಗಲು ಇಷ್ಟಪಡುತ್ತೇನೆ. ನಮ್ಮ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ” ಎಂದು ಹೇಳಿದ್ದಾರೆ. ಭಾರತವು ತನ್ನ T20 ವಿಶ್ವಕಪ್ ಅಭಿಯಾನವನ್ನು ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಪ್ರಾರಂಭಿಸಲಿರುವುದರಿಂದ, ಮೆನ್ ಇನ್ ಬ್ಲೂ

ಭಾರತ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ/ ಕೋಚ್ ಆಯ್ಕೆಯ ಕುರಿತ ವದಂತಿಗಳಿಗೆ ತೆರೆ ಎಳೆದ ಗಂಭೀರ್ Read More »

ದ.‌ ಭಾರತದ‌ ಮೊದಲ ಪ್ರಾದೇಶಿಕ ಸೇನಾ ಅಧಿಕಾರಿಯಾಗಿ ಭವ್ಯ ನರಸಿಂಹಮೂರ್ತಿ ನಿಯೋಜನೆ

ಸಮಗ್ರ ನ್ಯೂಸ್: ಎಐಸಿಸಿ ರಾಷ್ಟ್ರೀಯ ಕೋ ಆರ್ಡಿನೇಟರ್ ಆಗಿರುವ, ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಈಗ ಸೇನಾ ಅಧಿಕಾರಿಯಾಗಿದ್ದಾರೆ. ಪ್ರಾದೇಶಿಕ ಸೇನೆಯಲ್ಲಿ ಕಮಿಷನ್‌ಡ್ ಆಫೀಸರ್ ಆಗಿ ಭವ್ಯ ನರಸಿಂಹಮೂರ್ತಿ ಅವರು ನಿಯೋಜನೆಗೊಂಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಭವ್ಯ ನರಸಿಂಹಮೂರ್ತಿ, ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ ಎಂದು ಹೇಳಿದ್ದಾರೆ. 2022ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ

ದ.‌ ಭಾರತದ‌ ಮೊದಲ ಪ್ರಾದೇಶಿಕ ಸೇನಾ ಅಧಿಕಾರಿಯಾಗಿ ಭವ್ಯ ನರಸಿಂಹಮೂರ್ತಿ ನಿಯೋಜನೆ Read More »

ಬೆಳ್ತಂಗಡಿ: ಅರಣ್ಯಾಧಿಕಾರಿಗಳ ಜೊತೆಗೆ ಗಲಾಟೆ ನಡೆಸಿದ ಪ್ರಕರಣ| ಶಾಸಕ ಹರೀಶ್ ಪೂಂಜಾ, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಮೇಲೆ‌ ಚಾರ್ಜ್ ಶೀಟ್

ಸಮಗ್ರ ನ್ಯೂಸ್: ಅರಣ್ಯ ಇಲಾಖೆಯ ಜಾಗದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ನಡೆದ ಗಲಾಟೆ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಜೂ.1ರಂದು (ದೋಷರೋಪ ಪಟ್ಟಿ)ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಲೋಲಾಕ್ಷ ಎಂಬಾತ ಮೀಸಲು ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದನ್ನು ಉಪ್ಪಿನಂಗಡಿ ಅರಣ್ಯ ಇಲಾಖೆ ಕಿತ್ತು ಹಾಕಿದ್ದರು. ಇದರ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್

ಬೆಳ್ತಂಗಡಿ: ಅರಣ್ಯಾಧಿಕಾರಿಗಳ ಜೊತೆಗೆ ಗಲಾಟೆ ನಡೆಸಿದ ಪ್ರಕರಣ| ಶಾಸಕ ಹರೀಶ್ ಪೂಂಜಾ, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಮೇಲೆ‌ ಚಾರ್ಜ್ ಶೀಟ್ Read More »

ಸೌದೆ ತರಲು ಹೋದ ವ್ಯಕ್ತಿ ಮೇಲೆ ರೈಲು‌ ಹರಿದು ಸಾವು

ಸಮಗ್ರ ನ್ಯೂಸ್: ರೈಲು‌ ಹರಿದು ಕಾರ್ಮಿಕ‌ನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ವಿದ್ಯಾನಗರದ ಬಳಿ ನಡೆದಿದೆ. ರುದ್ರಪ್ಪ (68) ಮೃತ ದುರ್ದೈವಿ. ಇವರು ರೈಲ್ವೆ ಹಳಿಯ ಬಳಿ ಸೌದೆ ಆರಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಮೈಸೂರು ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇನ್ನು ರುದ್ರಪ್ಪ, ಸ್ವಲ್ಪ ಕಿವುಡು ಹಾಗೂ ಕಣ್ಣು ಮಂಜಿನಿಂದ ಬಳಲುತ್ತಿದ್ದನಂತೆ. ಹೀಗಾಗಿ ರೈಲು ಬಂದ ಶಬ್ದ ಕೇಳಿಸದೇ ದುರ್ಘಟನೆ ಸಂಭವಿಸಿದ್ದು, ಈ ಕುರಿತು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೌದೆ ತರಲು ಹೋದ ವ್ಯಕ್ತಿ ಮೇಲೆ ರೈಲು‌ ಹರಿದು ಸಾವು Read More »

ಎಕ್ಸಿಟ್‌ ಪೋಲ್‌ ಗಳಲ್ಲಿ ಭರ್ಜರಿ ವಿಜಯದ ದಿಕ್ಸೂಚಿ ಬೆನ್ನಲ್ಲೇ ಪ್ರಧಾನಿ ಸಭೆ..!

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಏಳು ಹಂತದ ಮತದಾನ ಪೂರ್ಣಗೊಂಡಿದೆ, ನಿನ್ನೆ ಎಕ್ಸಿಟ್‌ ಪೋಲ್‌ ಫಲಿತಾಂಶವೂ ಹೊರಬಿದ್ದಿವೆ. ಇದರಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುತ್ತದೆ ಎಂಬ ಮಾಹಿತಿಯೂ ಲಭಿಸಿದೆ. ಈ ಮಾಹಿತಿ ಸಿಕ್ಕಾಗಿಂದ ಪ್ರಧಾನಿ ಮೋದಿ ಇಂದು 7 ಸಭೆಗಳನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಕೈಗೆತ್ತಿಕೊಳ್ಳಬಹುದಾದ ಯೋಜನೆ ಹಾಗೂ ದೇಶಾದ್ಯಂತ ತಲೆದೋರಿರುವ ಬಿಸಿಗಾಳಿ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಅಧಿಕೃತ ಮೂಲಗಳ

ಎಕ್ಸಿಟ್‌ ಪೋಲ್‌ ಗಳಲ್ಲಿ ಭರ್ಜರಿ ವಿಜಯದ ದಿಕ್ಸೂಚಿ ಬೆನ್ನಲ್ಲೇ ಪ್ರಧಾನಿ ಸಭೆ..! Read More »

ಪಲ್ಲಕ್ಕಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು..!

ಸಮಗ್ರ ನ್ಯೂಸ್: ಪಲ್ಲಕ್ಕಿ ಇದ್ದ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದುರ್ಮರಣ ಹೊಂದಿದ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿಯಲ್ಲಿ ನಡೆದಿದೆ. ವೀರಸಂದ್ರ ವಾಸಿ ರಂಗನಾಥ(33), ಯಾರಂಡಹಳ್ಳಿ ವಾಸಿ ಹರಿಬಾಬು(25) ಮೃತ ದುರ್ದೈವಿಗಳು. ಪಲ್ಲಕ್ಕಿ ಉತ್ಸವ ಮುಗಿಸಿ ವಾಪಸ್ ಬರುವಾಗ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಟ್ರ್ಯಾಕ್ಟರ್ ಚಲಾಯಿಸುವಾಗ ಚಾಲಕನಿಗೆ ಕರೆಂಟ್‌ ಶಾಕ್‌ ಹೊಡೆದಿದೆ. ಚಾಲಕನನ್ನು ರಕ್ಷಣೆ ಮಾಡಲು ಹೋಗಿ ಮತ್ತೊಬ್ಬನಿಗೂ ವಿದ್ಯುತ್‌ ಶಾಕ್‌ ಆಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ

ಪಲ್ಲಕ್ಕಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು..! Read More »