June 2024

ಕುಂಭದ್ರೋಣ ಮಳೆಗೆ ತತ್ತರಿಸಿದ ಕರಾವಳಿ| ಪುತ್ತೂರು ಜಲಾವೃತ; ಬಂಟ್ವಾಳದಲ್ಲಿ ಸಿಡಿಲ ಹೊಡೆತಕ್ಕೆ ಮಹಿಳೆಯರಿಬ್ಬರು ಗಂಭೀರ

ಸಮಗ್ರ ನ್ಯೂಸ್: ಸೋಮವಾರ ಸಂಜೆ(ಜೂ. ೩) ಗುಡುಗು ಸಹಿತ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಜಲಾವೃತಗೊಂಡಿದೆ. ಮಳೆಯ ಆರ್ಭಟಕ್ಕೆ ಪುತ್ತೂರಿನ ದರ್ಬೆಯಲ್ಲಿ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಅಲ್ಲದೇ ಕೋರ್ಟ್ ರೋಡ್ ಬಳಿಯ ಜ್ಯುವೆಲ್ಲರಿ ಅಂಗಡಿಯೊಂದು ಜಲಾವೃತಗೊಂಡಿದೆ. ಇನ್ನು ಭಾರೀ ಮಳೆಗೆ ರಸ್ತೆಗಳು ನದಿಯಂತಾದವು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ನೀರು ನಿಂತಿದೆ. ಹೀಗಾಗಿ ರಸ್ತೆಯಲ್ಲಿ ನೀರು ಹೆಚ್ಚಾಗಿ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬಂಟ್ವಾಳದ […]

ಕುಂಭದ್ರೋಣ ಮಳೆಗೆ ತತ್ತರಿಸಿದ ಕರಾವಳಿ| ಪುತ್ತೂರು ಜಲಾವೃತ; ಬಂಟ್ವಾಳದಲ್ಲಿ ಸಿಡಿಲ ಹೊಡೆತಕ್ಕೆ ಮಹಿಳೆಯರಿಬ್ಬರು ಗಂಭೀರ Read More »

ಮಂಗಳೂರು: ಕಮಾಲ್ ಮಾಡದ ನೋಟಾ| ಲೀಡ್ ಹೆಚ್ಚಿಸಿಕೊಂಡ ಬ್ರಿಜೇಶ್ ‌ಚೌಟಾ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಎರಡು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ತನ್ನ ಹತಿರದ ಸ್ಪರ್ಧಿ ಕಾಂಗ್ರೆಸ್‌ ನ ಪದ್ಮರಾಜ್‌ ಆರ್‌ ಪೂಜಾರಿ ಗಿಂತ 20 ಸಾವಿರ ಮತಗಳಿಂದ ಮುಂದಿದ್ದಾರೆ. ಕ್ಷೇತ್ರದಲ್ಲಿ ನೋಟಾ ಮತಗಳು ಹೆಚ್ಚಾಗುತ್ತವೆ ಎಂಬ ನಿರೀಕ್ಷೆಯಿದ್ದರೂ ಅದು ಸುಳ್ಳಾಗಿದೆ. ನೋಟಾ ಗೆ ಸದ್ಯ 4134 ಮತ ಬಿದ್ದಿದೆ. ಚೌಟಾ 20 ಸಾವಿರ ಮತಗಳ ಲೀಡ್ ನಲ್ಲಿದ್ದಾರೆ.

ಮಂಗಳೂರು: ಕಮಾಲ್ ಮಾಡದ ನೋಟಾ| ಲೀಡ್ ಹೆಚ್ಚಿಸಿಕೊಂಡ ಬ್ರಿಜೇಶ್ ‌ಚೌಟಾ Read More »

ವಾರಣಾಸಿಯಲ್ಲಿ ಮೋದಿಗೆ ಹಿನ್ನಡೆ| ಲೀಡ್ ಪಡೆದ ಕಾಂಗ್ರೆಸ್ ಅಭ್ಯರ್ಥಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ವಾರಣಾಸಿಯಲ್ಲಿ ನರೇಂದ್ರ ಮೋದಿಗೆ ಹಿನ್ನಡೆಯಾಗಿದೆ. 2014ರಿಂದ ಈ ಕ್ಷೇತ್ರದಲ್ಲಿ ನರೇಂದ್ರ ಮೋದಿ ಸ್ಪರ್ಧಿಸುತ್ತಿದ್ದಾರೆ. ನರೇಂದ್ರ ಮೋದಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಮತ್ತು ಬಿಎಸ್ಪಿ ಅಭ್ಯರ್ಥಿ ಅಥೆರ್ ಜಮಾಲ್ ಲಾರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಸುಮಾರು 5,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಿಂದೆ ಬಿದ್ದಿದ್ದಾರೆ. ರಾಯ್ 14,503 ಮತಗಳನ್ನು ಪಡೆದರೆ, ಮೋದಿ 9,505

ವಾರಣಾಸಿಯಲ್ಲಿ ಮೋದಿಗೆ ಹಿನ್ನಡೆ| ಲೀಡ್ ಪಡೆದ ಕಾಂಗ್ರೆಸ್ ಅಭ್ಯರ್ಥಿ Read More »

ಹವಾಮಾನ ವರದಿ| ರಾಜ್ಯಾದ್ಯಂತ ಮುಂಗಾರು ‌ಮಳೆ ಸಿಂಚನ| 17 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಮುಂಗಾರು ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆ ಆರಂಭವಾಗಿದೆ. ಮುಂದಿನ 24 ಗಂಟೆಗಳ ಕಾಲ ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅಲ್ಲದೆ ಬೆಂಗಳೂರಿನಲ್ಲಿ ಸೋಮವಾರ ಸುರಿದ ಮಳೆ 133 ವರ್ಷದ ದಾಖಲೆಯನ್ನೇ ನಿರ್ಮಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ,

ಹವಾಮಾನ ವರದಿ| ರಾಜ್ಯಾದ್ಯಂತ ಮುಂಗಾರು ‌ಮಳೆ ಸಿಂಚನ| 17 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ Read More »

ದ.ಕ ಲೋಕಸಭಾ ಕ್ಷೇತ್ರ| ಬ್ರಿಜೇಶ್ ಚೌಟ ಮುನ್ನಡೆ

ಸಮಗ್ರ ನ್ಯೂಸ್: ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು ದ.ಕ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 188 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಗೆ ಹಿನ್ನಡೆಯಾಗಿದೆ.

ದ.ಕ ಲೋಕಸಭಾ ಕ್ಷೇತ್ರ| ಬ್ರಿಜೇಶ್ ಚೌಟ ಮುನ್ನಡೆ Read More »

ಮನೆಗೆ ತಂದ ಈರುಳ್ಳಿ ಬೇಗ ಹಾಳಾಗ್ತಾ ಇದ್ಯಾ? ಹೀಗೆ ಮಾಡಿ

ನೀವು ಈರುಳ್ಳಿಯನ್ನು ಖರೀದಿಸುತ್ತಿದ್ದರೆ, ಯಾವಾಗಲೂ ಒಣ, ಬಿರುಕು ಬಿಟ್ಟ ಮೇಲಿನ ಪದರದೊಂದಿಗೆ ಈರುಳ್ಳಿಯನ್ನು ಖರೀದಿಸಿ. ಹೊರ ಪದರವು ತೇವಾಂಶದಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು. ಮೊಳಕೆಯೊಡೆದ ಈರುಳ್ಳಿಯನ್ನು ಎಂದಿಗೂ ಖರೀದಿಸಬೇಡಿ. ಇದು ಬೇಗನೆ ಹಾಳಾಗುತ್ತದೆ. ವಾಸನೆಯ ಈರುಳ್ಳಿಯನ್ನು ಎಂದಿಗೂ ಖರೀದಿಸಬೇಡಿ. ತೇವಾಂಶದಿಂದ ರಕ್ಷಿಸಿ: ನೀವು ಈರುಳ್ಳಿಯನ್ನು ಸಂಗ್ರಹಿಸುವಾಗ, ಸ್ಥಳವನ್ನು ಸ್ವಚ್ಛವಾಗಿಡಲು ವಿಶೇಷ ಕಾಳಜಿ ವಹಿಸಿ. ಯಾವುದೇ ರೀತಿಯ ತೇವಾಂಶ ಅಥವಾ ನೀರು ಇರಬಾರದು. ಈರುಳ್ಳಿ ಸ್ವಲ್ಪ ತೇವಾಂಶ ಅಥವಾ ನೀರಿನಿಂದ ಇದ್ದರೂ ಕೂಡ ಹಾಳಾಗುತ್ತದೆ. ತೇವಾಂಶದ ಕಾರಣದಿಂದಾಗಿ ಅವು ಕೆಟ್ಟ

ಮನೆಗೆ ತಂದ ಈರುಳ್ಳಿ ಬೇಗ ಹಾಳಾಗ್ತಾ ಇದ್ಯಾ? ಹೀಗೆ ಮಾಡಿ Read More »

ರೇವ್ ಪಾರ್ಟಿ ಹಾಜರಾಗಿದ್ದ ನಟಿ ಹೇಮಾ ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಈ ಪಾರ್ಟಿಯಲ್ಲಿ ಹಾಜರಾಗಿದ್ದರು ಎನ್ನಲಾದ ತೆಲುಗು ನಟಿ ಹೇಮಾರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಟಿ ಹೇಮಾ ಹೆಸರು ಕೇಳಿ ಬಂದಾಗ ಆಕೆ ಆ ಸಂದರ್ಭದಲ್ಲಿ ನಾನು ಹೈದರಾಬಾದ್ ಫಾರ್ಮ್ ಹೌಸ್ ನಲ್ಲಿ ಇದ್ದೆ ಎಂದು ಹೇಳಿದ್ದರು. ಆದರೆ ಸಿಸಿಬಿ ಪೊಲೀಸರು ತಮಗೆ ಸಿಕ್ಕ ಖಚಿತ ಸಾಕ್ಷ್ಯಾಧಾರಗಳ ಮೇಲೆ

ರೇವ್ ಪಾರ್ಟಿ ಹಾಜರಾಗಿದ್ದ ನಟಿ ಹೇಮಾ ಅರೆಸ್ಟ್ Read More »

ದೇಶವಾಸಿಗಳಿಗೆ ಟೋಲ್ ಶಾಕ್| ಟೋಲ್ ದರಗಳಲ್ಲಿ ಹೆಚ್ಚಳ

ಸಮಗ್ರ ನ್ಯೂಸ್: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೋಮವಾರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಅನ್ನು 3% ರಿಂದ 5% ಗೆ ಹೆಚ್ಚಿಸಿದ್ದು, ದೇಶದಾದ್ಯಂತ ರಾಷ್ಟ್ರೀಯ ರಸ್ತೆಗಳು ಮತ್ತು ಎಕ್ಸ್‍ಪ್ರೆಸ್‍ವೇಗಳಲ್ಲಿ ಇಂದಿನಿಂದ ಟೋಲ್ ದರಗಳು ಹೆಚ್ಚಾಗಲಿವೆ. 18ನೇ ಲೋಕಸಭೆ ಚುನಾವಣೆಯಲ್ಲಿ ಮತದಾನ ಮುಗಿದ ಒಂದು ದಿನದ ನಂತರ ಟೋಲ್ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ಈ ದರವು ಪ್ರತಿ ವರ್ಷ ಏಪ್ರಿಲ್ 1 ರಿಂದ ಅನ್ವಯಿಸುತ್ತದೆ. ಆದರೆ, ಚುನಾವಣೆಯ ಕಾರಣ ಬಳಕೆ ಶುಲ್ಕವನ್ನು ತಡೆಹಿಡಿಯಲಾಗಿತ್ತು. ಇಂದಿನಿಂದ ಸುಮಾರು 1,100 ಟೋಲ್

ದೇಶವಾಸಿಗಳಿಗೆ ಟೋಲ್ ಶಾಕ್| ಟೋಲ್ ದರಗಳಲ್ಲಿ ಹೆಚ್ಚಳ Read More »

ಅಬಕಾರಿ ಹಗರಣ/ ತಿಹಾರ್ ಜೈಲಿಗೆ ವಾಪಾಸಾದ ಕೇಜ್ರಿವಾಲ್

ಸಮಗ್ರ ನ್ಯೂಸ್: ಅಬಕಾರಿ ಹಗರಣದಲ್ಲಿ ಬಂಧಿತರಾದ ಬಳಿಕ ಲೋಕಸಭೆ ಚುನಾವಣೆ ಕಾರಣ ಜಾಮೀನು ಪಡೆದಿದ್ದ ಆಪ್ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ತಿಹಾರ್ ಜೈಲಿಗೆ ಮರಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿ, ಜೂ.2ರಂದು ಜೈಲಿಗೆ ಮರಳಬೇಕು ಎಂದು ಕೇಜ್ರಿವಾಲ್‍ಗೆ ತಾಕೀತು ಮಾಡಿತ್ತು. ಈ ನಡುವೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ವಿಸ್ತರಣೆ ಕೋರಿದ್ದ ಅರ್ಜಿಯ ತೀರ್ಪು ಜೂ.5ಕ್ಕೆ ಮುಂದೂಡಿಕೆ ಆದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಭಾನುವಾರ ಜೈಲಿಗೆ

ಅಬಕಾರಿ ಹಗರಣ/ ತಿಹಾರ್ ಜೈಲಿಗೆ ವಾಪಾಸಾದ ಕೇಜ್ರಿವಾಲ್ Read More »

ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸುನೀತಾ ವಿಲಿಯಮ್ಸ್

ಸಮಗ್ರ ನ್ಯೂಸ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬೋಯಿಂಗ್ ಸ್ಟಾರ್‍ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ. ಶನಿವಾರ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ. ಕಳೆದ ತಿಂಗಳ 7 ರಂದೇ ಸುನೀತಾ ಅಂತರಿಕ್ಷ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ತಾಂತ್ರಿಕ ದೋಷದ ಕಾರಣದಿಂದ ಮುಂದೂಡಲಾಗಿತ್ತು. ವಿಲಿಯಮ್ಸ್ ಹೊರತಾಗಿ ಬುಚ್ ವಿಲ್ಮೋರ್ ಕೂಡ ಅಂತರಿಕ್ಷಕ್ಕೆ ಪ್ರಯಾಣ ಕೈಗೊಳ್ಳಲಿದ್ದಾರೆ. ಸುನಿತಾ ಮತ್ತು ವಿಲ್ಮೋರ್

ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸುನೀತಾ ವಿಲಿಯಮ್ಸ್ Read More »