June 2024

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ| ಮತ್ತೊಬ್ಬ ಆರೋಪಿ ಮುಂಬೈನಲ್ಲಿ ಬಂಧನ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹಾರಲು ಯತ್ನಿಸುತ್ತಿದ್ದ ಮತ್ತೊಬ್ಬ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಲಾಗಿದೆ. ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಬಂಧಿತ ಆರೋಪಿ. ರಿಯಾಜ್ ಯೂಸಫ್ ಹಾರಳ್ಳಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಮಂಗಳವಾರ ಬಂಧಿಸಿದೆ. ರಿಯಾಜ್ ಬಂಧನದಿಂದ ಪ್ರಕರಣದಲ್ಲಿ ಈವರೆಗೆ ಬಂಧಿತರಾಗಿರುವ ಒಟ್ಟು ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.ಕಳೆದ ತಿಂಗಳು ಮನ್ಸೂರ್ ಪಾಷಾ ಜತೆಗೆ ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್ ನನ್ನು ಬಂಧಿಸಿದ ಒಂದು ತಿಂಗಳ ನಂತರ ಈ […]

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ| ಮತ್ತೊಬ್ಬ ಆರೋಪಿ ಮುಂಬೈನಲ್ಲಿ ಬಂಧನ Read More »

ಮೈತ್ರಿಕೂಟದ ಜೊತೆ ಚರ್ಚಿಸದೇ ಜೆಡಿಯು, ಟಿಡಿಪಿ ಜೊತೆ ಮೈತ್ರಿಯಿಲ್ಲ – ರಾಹುಲ್ ಗಾಂಧಿ

ಸಮಗ್ರ ನ್ಯೂಸ್: ‘ಇಂಡಿಯಾ ಮೈತ್ರಿಕೂಟದ ಪಾಲುದಾರರೊಂದಿಗೆ ಮಾತನಾಡದೆ ಟಿಡಿಪಿ ಮತ್ತು ಜೆಡಿಯು ಜೊತೆಗಿನ ಮೈತ್ರಿ ಬಗ್ಗೆ ಉತ್ತರಿಸುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ “ಸರ್ಕಾರ ರಚನೆಗೆ ಮುಂದಾಗುವಿರಾ?” ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ನಮ್ಮದು ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಪಕ್ಷ. ನಮ್ಮ ಪಾಲುದಾರರ ಜೊತೆ ಮಾತನಾಡದೇ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ನಾಳೆ ನಮ್ಮ ಒಕ್ಕೂಟದ ಸಭೆ ಇದೆ. ಅಲ್ಲಿ ಎಲ್ಲರ ಅಭಿಪ್ರಾಯಗಳನ್ನು ಕೇಳಿ

ಮೈತ್ರಿಕೂಟದ ಜೊತೆ ಚರ್ಚಿಸದೇ ಜೆಡಿಯು, ಟಿಡಿಪಿ ಜೊತೆ ಮೈತ್ರಿಯಿಲ್ಲ – ರಾಹುಲ್ ಗಾಂಧಿ Read More »

ಅಯೋಧ್ಯೆಯಲ್ಲಿ ಬಿಜೆಪಿ ಬಿಟ್ಟು ಕೈಹಿಡಿದ ರಾಮ!! ಎಸ್ಪಿ ವಿರುದ್ದ ಸೋಲುಕಂಡ ಬಿಜೆಪಿ

ಸಮಗ್ರ ನ್ಯೂಸ್: ರಾಮಮಂದಿರ ಇರುವ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಅಯೋಧ್ಯೆ ನಗರವು ಹಿಂದೆ ಫೈಜಾಬಾದ್ ಜಿಲ್ಲೆಯಲ್ಲಿದೆ. ಫೈಜಾಬಾದ್ ಜಿಲ್ಲೆಯನ್ನು 2018 ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದರೆ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ. ಒಂಬತ್ತು ಬಾರಿ ಶಾಸಕರಾಗಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಲಲ್ಲು ಸಿಂಗ್ ಅವರನ್ನು ಸೋಲಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ 35 ಸಾವಿರಕ್ಕೂ

ಅಯೋಧ್ಯೆಯಲ್ಲಿ ಬಿಜೆಪಿ ಬಿಟ್ಟು ಕೈಹಿಡಿದ ರಾಮ!! ಎಸ್ಪಿ ವಿರುದ್ದ ಸೋಲುಕಂಡ ಬಿಜೆಪಿ Read More »

ವಾರಣಾಸಿಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014 ಹಾಗೂ 2019ರಲ್ಲಿ ಇದೇ ವಾರಾಣಸಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಈ ಬಾರಿಯೂ ಗೆಲುವಿನ ನಗೆ ಬೀರುವ ಮೂಲಕ ಹ್ಯಾಟ್ರಿಕ್​ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಪ್ರಾರಂಭದ ಕೆಲವು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರೈ ಅವರು ಪರಾಜಯಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 62ರಿಂದ 35ಕ್ಕೆ ಕುಸಿತ ಕಂಡಿದೆ.

ವಾರಣಾಸಿಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡ ಪ್ರಧಾನಿ ಮೋದಿ Read More »

ದ.ಕ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ತಿರುವಳ್ಳೂರ್ ನಲ್ಲಿ ಭರ್ಜರಿ ಜಯ

ಸಮಗ್ರ ನ್ಯೂಸ್: ಐಎಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ಬಳಿಕ ರಾಜಕೀಯ ರಂಗವನ್ನು ಪ್ರವೇಶಿಸಿದ್ದ ಸಸಿಕಾಂತ್ ಸೆಂಥಿಲ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ತಮಿಳುನಾಡಿನ ತಿರುವಲ್ಲೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಸಿಕಾಂತ್ ಸೆಂಥಿಲ್, ಜಯಭೇರಿ ಬಾರಿಸಿದ್ದಾರೆ.ಸಸಿಕಾಂತ್ ಸೆಂಥಿಲ್ ಕರ್ನಾಟಕದ ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು.

ದ.ಕ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ತಿರುವಳ್ಳೂರ್ ನಲ್ಲಿ ಭರ್ಜರಿ ಜಯ Read More »

ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್ ಗೆ ಮರ್ಮಾಘಾತ| ಎಲ್ಲಾ 4 ಕ್ಷೇತ್ರಗಳು ಬಿಜೆಪಿ ಪಾಲು| ‘ಕೈ’ ಹಿಡಿಯದ ಗ್ಯಾರಂಟಿ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ಎಲ್ಲಾ 4 ಕ್ಷೇತ್ರಗಳು ಬಿಜೆಪಿ ಪಾಲಾಗಿದೆ. ಇದು ರಾಜ್ಯದಲ್ಲಿರುವ ಕಾಂಗ್ರೆಸ್‌ಗೆ ದೊಡ್ಡ ಹಿನ್ನೆಡೆಯಾಗಿದ್ದು, ಕಾಂಗ್ರೆಸ್‌ ನೀಡಿದ್ದ ಗ್ಯಾರೆಂಟಿಗಳು ಲೋಕಸಭೆ ಚುನಾವಣೆಯಲ್ಲಿ ಕೈ ಹಿಡಿಯಲಿಲ್ಲ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಬೆಂಗಳೂರು ಗ್ರಾಮಾಂತರದಲ್ಲಿ ಹಾಲಿ ಸಂಸದ, ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ ಸುರೇಶ್‌ ವಿರುದ್ಧ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ 2,68.094 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಎನ್‌ಡಿಎ ಅಭ್ಯರ್ಥಿ ತೇಜಸ್ವಿ ಸೂರ್ಯ,

ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್ ಗೆ ಮರ್ಮಾಘಾತ| ಎಲ್ಲಾ 4 ಕ್ಷೇತ್ರಗಳು ಬಿಜೆಪಿ ಪಾಲು| ‘ಕೈ’ ಹಿಡಿಯದ ಗ್ಯಾರಂಟಿ Read More »

ದ.ಕ ಲೋಕಸಭಾ ಕ್ಷೇತ್ರದಲ್ಲಿ ದಿ. ಸೌಜನ್ಯಾಳಿಗೆ 20 ಸಾವಿರಕ್ಕೂ ಅಧಿಕ ಮತ!! ನ್ಯಾಯಯುತ ಹೋರಾಟಕ್ಕೆ ಅಭೂತಪೂರ್ವ ಬೆಂಬಲ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಗಳ ಮತಬೇಟೆಯ ಜೊತೆ ಧರ್ಮಸ್ಥಳದಲ್ಲಿ ಕೊಲೆಯಾದ ದಿ.ಸೌಜನ್ಯಾ ಪರವಾದ ಕ್ಯಾಂಪೇನ್‌ ಕೂಡಾ ಜೋರಾಗಿ ನಡೆದಿತ್ತು. ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ನೋಟಾಗೆ ಮತ ಹಾಕುವಂತೆ ಕ್ಯಾಂಪೇನ್‌ ಮಾಡಲಾಗಿತ್ತು. ಬೆಳ್ತಂಗಡಿ ತಾಲ್ಲೂಕಿನಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನೋಟಾಗೆ ಮತ ಹಾಕುವಂತೆ ಕ್ಯಾಂಪೇನ್‌ ಮಾಡಲಾಗಿತ್ತು. ಇದಕ್ಕೆ ಮತದಾರರು ದೊಡ್ಡ ಮಟ್ಟದಲ್ಲಿ ಸ್ಪಂದಿಸಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ನೋಟಾ

ದ.ಕ ಲೋಕಸಭಾ ಕ್ಷೇತ್ರದಲ್ಲಿ ದಿ. ಸೌಜನ್ಯಾಳಿಗೆ 20 ಸಾವಿರಕ್ಕೂ ಅಧಿಕ ಮತ!! ನ್ಯಾಯಯುತ ಹೋರಾಟಕ್ಕೆ ಅಭೂತಪೂರ್ವ ಬೆಂಬಲ Read More »

ಲೋಕಸಭಾ ಚುನಾವಣೆ| ಇಂಡಿಯಾ ಒಕ್ಕೂಟದಿಂದ ನಿತೀಶ್, ನಾಯ್ಡುಗೆ ಬಿಗ್ ಆಫರ್| ಕಿಂಗ್ ಮೇಕರ್ ಆಗಲಿದ್ದಾರೆಯೇ ಟಿಡಿಪಿ, ಜೆಡಿಯು?

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿರುವ ನಡುವೆ ಪ್ರತಿ ಕ್ಷಣವೂ ಕುತೂಹಲ ಮೂಡಿಸುತ್ತಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯದೇ ಇರುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿಯ ಮಿತ್ರ ಪಕ್ಷಗಳ ಪೈಕಿ ಯಾರು ಕಿಂಗ್‌ಮೇಕರ್‌ ಆಗಲಿದ್ದಾರೆಂಬ ಕುತೂಹಲ ಮೂಡಿದೆ. ಪ್ರಸ್ತುತ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿಡಿಪಿ ಹಾಗೂ 15ರಲ್ಲಿ ಮುನ್ನಡೆ ಸಾಧಿಸಿರುವ ಜೆಡಿಯು ಗೆದ್ದರೆ ಎನ್‌ಡಿಎಗೆ 31 ಅಧಿಕ ಸ್ಥಾನಗಳು ಲಭಿಸುವಂತಾಗುತ್ತದೆ. ಬಿಜೆಪಿ ಬಹುಮತ ಪಡೆಯದೇ ಇದ್ದಲ್ಲಿ ಈ ಎರಡೂ ಪಕ್ಷಗಳ ಬೆಂಬಲ

ಲೋಕಸಭಾ ಚುನಾವಣೆ| ಇಂಡಿಯಾ ಒಕ್ಕೂಟದಿಂದ ನಿತೀಶ್, ನಾಯ್ಡುಗೆ ಬಿಗ್ ಆಫರ್| ಕಿಂಗ್ ಮೇಕರ್ ಆಗಲಿದ್ದಾರೆಯೇ ಟಿಡಿಪಿ, ಜೆಡಿಯು? Read More »

ಚಿಕ್ಕೋಡಿ: ಪಾಕಿಸ್ತಾನ ಪರ ಘೋಷಣೆ!? | ಮೋದಿಗೆ ನಿಂದನೆಗೈದು ಅವಮಾನ!!

ಸಮಗ್ರ ನ್ಯೂಸ್: ಲೋಕ ಸಭಾ ಚುನಾವಣೆ ಫಲಿತಾಂಶ ಬರುವ ಮುನ್ನವೇ ಚಿಕ್ಕೋಡಿಯಲ್ಲಿ ಕೈ ಕಾರ್ಯಕರ್ತರು ನಾಲಗೆ ಹರಿಬಿಟ್ಟಿದ್ದಾರೆ. ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದು, ಈ ವೇಳೆ ಅಭಿಮಾನಿಯೊಬ್ಬ ಮೋದಿ ಹಮಾರಾ ಕು# ಹೈ ಎಂದು ಕೂಗಿದ್ದಾನೆ. ಅಷ್ಟೇ ಅಲ್ಲದೆ ಪಾಕಿಸ್ತಾನ್‌ ಪರ ಘೋಷಣೆಗಳೂ ಕೇಳಿಬಂದಿದೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿಯವರಿಗೆ ಅಶ್ಲೀಲ ಪದಗಳಿಂದ ನಿಂದಿಸಲಾಗಿದ್ದು ಈ ವಿಡಿಯೋ ವೈರಲ್‌ ಆಗಿದೆ.

ಚಿಕ್ಕೋಡಿ: ಪಾಕಿಸ್ತಾನ ಪರ ಘೋಷಣೆ!? | ಮೋದಿಗೆ ನಿಂದನೆಗೈದು ಅವಮಾನ!! Read More »

ತಮಿಳುನಾಡಿನಲ್ಲಿ ಡಿಎಂಕೆ ಕಮಾಲ್, ಅಣ್ಣಾ ಮಲೈಗೆ ಹೀನಾಯ ಸೋಲು| ಕೇರಳದಲ್ಲಿ ಖಾತೆ ತೆರೆದ‌‌ ಬಿಜೆಪಿ

ಸಮಗ್ರ ನ್ಯೂಸ್: ತಮಿಳುನಾಡಿನಲ್ಲಿ ಮತ ಎಣಿಕೆ ಆರಂಭವಾದ ಮೊದಲ ಮೂರು ಗಂಟೆಗಳ ಬಳಿಕ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಇಂಡಿ ಮೈತ್ರಿಕೂಟವು 39 ಸ್ಥಾನಗಳಲ್ಲಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸುವತ್ತ ಸಾಗುತ್ತಿದೆ. ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ಪಿ ಮತ್ತು ಎಐಎಡಿಎಂಕೆಯ ಸಿಂಗೈ ವಿರುದ್ಧ ಸ್ಪರ್ಧಿಸಿದರೆ, ಹಾಲಿ ಡಿಎಂಕೆ ಸಂಸದೆ ಕನಿಮೋಳಿ ತೂತುಕುಡಿಯಲ್ಲಿ ಎಐಎಡಿಎಂಕೆಯ ಆರ್.ಶಿವಸಾಮಿ ವೇಲುಮಣಿ ಅವರನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮತ್ತು ತೆಲಂಗಾಣದ

ತಮಿಳುನಾಡಿನಲ್ಲಿ ಡಿಎಂಕೆ ಕಮಾಲ್, ಅಣ್ಣಾ ಮಲೈಗೆ ಹೀನಾಯ ಸೋಲು| ಕೇರಳದಲ್ಲಿ ಖಾತೆ ತೆರೆದ‌‌ ಬಿಜೆಪಿ Read More »