June 2024

ಗುಜರಿ ಗೋಡೌನ್‌ನಲ್ಲಿ ಅನಿಲ ಸೋರಿಕೆ‌| 30 ಮಂದಿ ಅಸ್ವಸ್ಥ

ಸಮಗ್ರ ನ್ಯೂಸ್: ಮೈಸೂರಿನಲ್ಲಿ ಗುಜರಿಯ ಗೋಡೌನ್‌ನಲ್ಲಿ ವಿಷಕಾರಿ ಅನಿಲ ಸೋರಿಕೆ‌ಯಿಂದಾಗಿ 30 ಮಂದಿ ಅಸ್ವಸ್ಥಗೊಂಡ ಘಟನೆ ಸಂಭವಿಸಿದೆ. ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿ ಅಂಗಡಿಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಐವರು ಅಸ್ವಸ್ಥಗೊಂಡು ಬಳಿಕ ಸುತ್ತಲಿನ ಗ್ರಾಮಸ್ಥರೂ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ಸೇರಿದ್ದಾರೆ. ಸಂಜೆ ವಿಷಾನಿಲ ಸೋರಿಕೆಯಾಗಿತ್ತು. ಮೊದಲು ಗುಜರಿ ಗೋಡೌನ್ನಲ್ಲಿ ಕೆಲಸ ಮಾಡುತ್ತಿದ್ದವರು ಅಸ್ವಸ್ಥಗೊಂಡರು ನಂತರ ಅನಿಲ ಗೋಡೌನ್ನಿಂದ ಹೊರಕ್ಕೆ ಬಂದು ಕೆಸರೆ ಗ್ರಾಮದಲ್ಲಿ ಹರಡಿದೆ. ಇದರಿಂದ […]

ಗುಜರಿ ಗೋಡೌನ್‌ನಲ್ಲಿ ಅನಿಲ ಸೋರಿಕೆ‌| 30 ಮಂದಿ ಅಸ್ವಸ್ಥ Read More »

ಉಡುಪಿ: ಕಾಪು ಬೀಚಿನಲ್ಲಿ ಬೈಕ್, ಪರ್ಸ್ ಇಟ್ಟು ನಾಪತ್ತೆ; ಪಡುಕೆರೆ ಸಮುದ್ರದಲ್ಲಿ ಮೃತದೇಹ ಪತ್ತೆ!

ಸಮಗ್ರ ನ್ಯೂಸ್‌ : ಕಾಪು ಬೀಚ್‌ ಬಳಿ ಬೈಕ್‌, ಮೊಬೈಲ್‌, ಪರ್ಸ್ ಇಟ್ಟು ನಾಪತ್ತೆಯಾದ ಯುವಕನ ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಶುಕ್ರವಾರ ಸಂಜೆ ವೇಳೆ ಪತ್ತೆಯಾಗಿದೆ. ಮೃತ ಯುವಕನನ್ನು ಕಾಪು ಪಡುಗ್ರಾಮದ ಕರಣ್ ಸಾಲ್ಯಾನ್ (20) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆಯಿಂದ ಮನೆಯಿಂದ ನಾಪತ್ತೆ ಆಗಿದ್ದ ಕರಣ್ ಸಾಲ್ಯಾನ್ ಅವರ ಬೈಕು, ಮೊಬೈಲ್ ಹಾಗೂ ಪರ್ಸ್ ಕಾಪು ಲೈಟ್ ಹೌಸ್ ಬಳಿಯ ಶ್ರೀಯಾನ್ ಸದನ ಮನೆಯ ಬಳಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು. ಕಾಣೆಯಾದ ಬಗ್ಗೆ

ಉಡುಪಿ: ಕಾಪು ಬೀಚಿನಲ್ಲಿ ಬೈಕ್, ಪರ್ಸ್ ಇಟ್ಟು ನಾಪತ್ತೆ; ಪಡುಕೆರೆ ಸಮುದ್ರದಲ್ಲಿ ಮೃತದೇಹ ಪತ್ತೆ! Read More »

ಚುನಾವಣೆಯಲ್ಲಿ ಹಿನ್ನಡೆ/ ಸಚಿವರ ವಿರುದ್ಧ ಗರಂ ಆದ ರಾಹುಲ್

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕರ್ನಾಟಕದ ನೂತನ ಸಂಸದರು ಮತ್ತು ಪರಾಜಿತ ಅಭ್ಯರ್ಥಿಗಳ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದು, ಚುನಾವಣಾ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದ ಸಚಿವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇಂದು ಬೆಂಗಳೂರಿನ ಸ್ಟೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ನಡೆದ ಸಭೆಯಲ್ಲಿಗೆದ್ದವರಿಗೆ ಅಭಿನಂದನೆ ಹಾಗೂ ಸೋತ ಅಭ್ಯರ್ಥಿಗಳಿಗೆ ರಾಹುಲ್ ಗಾಂಧಿ ಧೈರ್ಯ ಹೇಳಿದರು. ಲೀಡ್ ಕಡಿಮೆ ಕೊಟ್ಟ ಸಚಿವರ ಬಗ್ಗೆ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ. 18 ಸಚಿವರು ಲೀಡ್

ಚುನಾವಣೆಯಲ್ಲಿ ಹಿನ್ನಡೆ/ ಸಚಿವರ ವಿರುದ್ಧ ಗರಂ ಆದ ರಾಹುಲ್ Read More »

ಶಾಸಕ ಹರೀಶ್ ಪೂಂಜಾಗೆ ಬಿಗ್ ರಿಲೀಪ್| ಸರ್ಕಾರದ ಕಿವಿ ಹಿಂಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಖಲಾಗಿದ್ದ ಬೆಳ್ತಂಗಡಿ ಠಾಣೆಯಲ್ಲಿ ಅಮಾಯಕ ಕಾರ್ಯಕರ್ತ ಶಶಿರಾಜ್ ನ ಬಂಧನವನ್ನು ಪ್ರಶ್ನಿಸಿದ ವಿಚಾರದಲ್ಲಿ ಹಾಕಲಾಗಿದ್ದ ಮೊಕದ್ದಮೆ ವಿಚಾರವಾಗಿ ಇಂದು ಹೈಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರವನ್ನು ಕಿವಿ ಹಿಂಡಿದೆ ಇಂದು ವಿಚಾರಣೆ ನಡೆಸಿದ ಕೋರ್ಟ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರಿಗೆ ಈ ಕೇಸ್ ನಲ್ಲಿ ಬಂಧಿಸದಂತೆ ಹಾಗೂ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ಗಳನ್ನು ಕೂಡ ನೀಡದಂತೆ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ತಾಕೀತು

ಶಾಸಕ ಹರೀಶ್ ಪೂಂಜಾಗೆ ಬಿಗ್ ರಿಲೀಪ್| ಸರ್ಕಾರದ ಕಿವಿ ಹಿಂಡಿದ ಹೈಕೋರ್ಟ್ Read More »

ಧಾರವಾಡದಲ್ಲಿ ಮಳೆ ಆರ್ಭಟ| ನಡುರಸ್ತೆಯಲ್ಲೇ ವೃದ್ಧನ ತಪಸ್ಸು…!

ಸಮಗ್ರ ನ್ಯೂಸ್: ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ರಸ್ತೆಯಲ್ಲೆಲ್ಲ ನೀರು ನಿಂತು ಹೊಳೆಯಂತಾಗುತ್ತಿದೆ. ಇದರ ಮಧ್ಯೆ ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ಹಿರಿಯ ಜೀವಿಯೊಬ್ಬರು ಮಳೆ ಬರುವಾಗಲೇ ತಪಸ್ಸಿಗೆ ಕುಳಿತ ಘಟನೆ ನಡೆದಿದೆ..ಧಾರವಾಡದಲ್ಲಿ ಜೋರಾಗಿ ಬರುತ್ತಿದ್ದ ಮಳೆಯಲ್ಲಿ ನಡು ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ವೃದ್ಧರೊಬ್ಬರು ಕುಳಿತಿದ್ದಾರೆ. ಒಂಚೂರು ಅಲುಗಾಡದೆ ತಪಸ್ಸು ಮಾಡಿದ್ದಾರೆ. ಇನ್ನೂ ಈ ದೃಶ್ಯವನ್ನು ಓರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಧಾರವಾಡದಲ್ಲಿ ಮಳೆ ಆರ್ಭಟ| ನಡುರಸ್ತೆಯಲ್ಲೇ ವೃದ್ಧನ ತಪಸ್ಸು…! Read More »

ಬಾಳೆಹಣ್ಣಲ್ಲಿ ವಿಷಬೆರೆಸಿ ಮಂಗಗಳ ಅಮಾನವೀಯ ಹತ್ಯೆ

ಸಮಗ್ರ ನ್ಯೂಸ್: ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ 30 ಮಂಗಗಳನ್ನು ಹತ್ಯೆಗೈದ ಅಮಾನವೀಯ ಕೃತ್ಯ ಚಿಕ್ಕಮಗಳೂರಿನ ಎನ್‌ಆರ್‌ಪುರದ ಬಳಿ ನಡೆದಿದೆ. ತೋಟದಲ್ಲಿ ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಬೆರೆಸಿಟ್ಟು, ಅದನ್ನು ತಿಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದ ಮಂಗಗಳ ತಲೆಗೆ ಬಲವಾಗಿ ಹೊಡೆದು ಕೊಂದ ನಂತರ ರಸ್ತೆಗೆ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಸತ್ತ ಮಂಗಗಳ ತಲೆಯಲ್ಲಿ ಒಂದೇ ರೀತಿಯ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಮಂಗಗಳ ಮಾರಣ ಹೋಮಕ್ಕೆ ನಿಖರ ಕಾರಣ ತಿಳಿದು

ಬಾಳೆಹಣ್ಣಲ್ಲಿ ವಿಷಬೆರೆಸಿ ಮಂಗಗಳ ಅಮಾನವೀಯ ಹತ್ಯೆ Read More »

ರಾಜಕೀಯ ಗುರು ಅಡ್ವಾಣಿಯ ಆಶೀರ್ವಾದ ಪಡೆದ ಮೋದಿ

ಸಮಗ್ರ ನ್ಯೂಸ್: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಗಿರುವ ನರೇಂದ್ರ ಮೋದಿ ಅವರು, ತಮ್ಮ ರಾಜಕೀಯ ಗುರು, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ದೆಹಲಿಯಲ್ಲಿರುವ ಎಲ್.ಕೆ.ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಮೋದಿ ಅವರು ಅಡ್ವಾಣಿ ಅವರ ಜತೆ ಮಾತುಕತೆ ನಡೆಸಿ, ಆಶೀರ್ವಾದ ಪಡೆದರು. 2014, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಳಿಕವೂ ಮೋದಿ ಅವರು ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

ರಾಜಕೀಯ ಗುರು ಅಡ್ವಾಣಿಯ ಆಶೀರ್ವಾದ ಪಡೆದ ಮೋದಿ Read More »

ನಿವೇದಿತಾ ಗೌಡ – ಚಂದನ್ ಶೆಟ್ಟಿ ಬಾಳಲ್ಲಿ ಬಿರುಕು| ವಿಚ್ಛೇದನಕ್ಕೆ ಮುಂದಾದ ದಂಪತಿ…!

ಸಮಗ್ರ ನ್ಯೂಸ್: ಬಿಗ್ ಬಾಸ್ ಖ್ಯಾತಿಯ ಚಂದನ್ ಮತ್ತು ನಿವೇದಿತಾ ಗೌಡ ಬಾಳಲ್ಲಿ ಇದೀಗ ಬಿರುಕು ಬಿಟ್ಟಿದೆ. ಹೌದು ನಿವೇದಿತಾ ಗೌಡ – ಚಂದನ್ ಶೆಟ್ಟಿ ದಂಪತಿ ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ. ಆದರೆ ಈ ಬಗ್ಗೆ ದಂಪತಿ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಕರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಲುತ್ತಿದ್ದಾರೆ ಎನ್ನಲಾಗಿದೆ. ಇಂದು ಶಾಂತಿನಗರ ಕೋರ್ಟ್ ನಲ್ಲಿ ದಂಪತಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ

ನಿವೇದಿತಾ ಗೌಡ – ಚಂದನ್ ಶೆಟ್ಟಿ ಬಾಳಲ್ಲಿ ಬಿರುಕು| ವಿಚ್ಛೇದನಕ್ಕೆ ಮುಂದಾದ ದಂಪತಿ…! Read More »

ಎಲೆಕ್ಟ್ರಾನಿಕ್ ಸಿಟಿ: ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ ತಮ್ಮ ಇಬ್ಬರು ಬಲಿ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್‌ಗೆ ಅಕ್ಕ ತಮ್ಮ ಇಬ್ಬರು ಬಲಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ನಡೆದಿದೆ. ವೇಗವಾಗಿ ಬಂದ ವಾಟರ್ ಟ್ಯಾಂಕರ್, ಬೈಕ್‌ಗೆ ಡಿಕ್ಕಿಯಾಗಿದ್ದರಿಂದ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಮಧುಮಿತ (20), ರಂಜನ್(18) ಮೃತರು. ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳಾದ ಇವರು ಬೆಂಗಳೂರಿನ ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಮಧುಮಿತ ವ್ಯಾಸಂಗ ಮಾಡುತ್ತಿದ್ದಳು. ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಹೋಗಿದ್ದ. ಈ ವೇಳೆ ಕಿಲ್ಲರ್ ವಾಟರ್

ಎಲೆಕ್ಟ್ರಾನಿಕ್ ಸಿಟಿ: ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ ತಮ್ಮ ಇಬ್ಬರು ಬಲಿ Read More »

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ‘NDA’| ರಾಷ್ಟ್ರಪತಿ ಭೇಟಿ ಮಾಡಿದ ನಮೋ

ಸಮಗ್ರ ನ್ಯೂಸ್: ದೆಹಲಿಯಲ್ಲಿ ನಡೆದ ಎನ್ ಡಿಎ ಮೈತ್ರಿಕೂಟದ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಅವರನ್ನು ಬಿಜೆಪಿ ಮತ್ತು ಎನ್ ಡಿಎ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಂಸದೀಯ ಮಂಡಳಿ ಅನುಮೋದನೆ ಕೂಡ ನೀಡಿತ್ತು. ಈ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಮೋದಿಯವರು, 3ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರದ ಗದ್ದುಗೆಗೇರಲು ಸರ್ಕಾರದ ರಚನೆ ಸಂಬಂಧ ಹಕ್ಕು ಮಂಡನೆ ಮಾಡಿದ್ದಾರೆ. ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಸೇರಿದಂತೆ ಅದರ

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ‘NDA’| ರಾಷ್ಟ್ರಪತಿ ಭೇಟಿ ಮಾಡಿದ ನಮೋ Read More »