June 2024

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಏಕೈಕ ಸಂಸದ

ಸಮಗ್ರ ನ್ಯೂಸ್: ಕೇರಳದಿಂದ ಆಯ್ಕೆಯಾದ ಬಿಜೆಪಿಯ ಏಕೈಕ ಸಂಸದ ಸುರೇಶ್ ಗೋಪಿ ಅವರಿಗೆ ಇಂದು ಮೋದಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಲು ಸಿದ್ಧರಾಗಿದ್ದಾರೆ. ಮೋದಿ ಮತ್ತು ನಂತರ ಅಮಿತ್ ಶಾ ಇಬ್ಬರೂ ಸುರೇಶ್ ಗೋಪಿ ಅವರಿಗೆ ಕರೆ ಮಾಡಿದ್ದಾರೆ. ಈ ಕುರಿತು ಖುಷಿ ಹಂಚಿಕೊಂಡ ಅವರು, ಮೋದಿಯವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಮತ್ತು ಅದನ್ನು ಪಾಲಿಸುತ್ತಿದ್ದೇನೆ, ನನಗೆ ಯಾವ ಹುದ್ದೆ ನೀಡುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಸುರೇಶ್ ಗೋಪಿ ತಿಳಿಸಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಏಕೈಕ ಸಂಸದ Read More »

ಮೋದಿ ನೂತನ ಸರ್ಕಾರದಲ್ಲಿ 72 ಸಚಿವರಿಗೆ ಸ್ಥಾನ| ಯಾರಿಗೆಲ್ಲ ಸಿಕ್ತು ಪಟ್ಟ? ಇಲ್ಲಿದೆ ಸಂಪೂರ್ಣ ಪಟ್ಟಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದು, ನೂತನ ಸರ್ಕಾರದ ನಾಯಕರಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಹಂತದಲ್ಲಿ 24 ರಾಜ್ಯಗಳ 72 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿ ಏಳು ಮಾಜಿ ಮುಖ್ಯಮಂತ್ರಿಗಳು, ಏಳು ಮಹಿಳೆಯರು, 33 ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ. ಇಲ್ಲಿದೆ ಕೇಂದ್ರ

ಮೋದಿ ನೂತನ ಸರ್ಕಾರದಲ್ಲಿ 72 ಸಚಿವರಿಗೆ ಸ್ಥಾನ| ಯಾರಿಗೆಲ್ಲ ಸಿಕ್ತು ಪಟ್ಟ? ಇಲ್ಲಿದೆ ಸಂಪೂರ್ಣ ಪಟ್ಟಿ Read More »

ನೆಹರು ಬಳಿಕ ಮೂರನೇ ಬಾರಿ ಪ್ರಧಾನಿಯಾದ ನಮೋ| ಇಂದಿನಿಂದ ಮೋದಿ 3.0 ಶಕೆ ಆರಂಭ

ಸಮಗ್ರ ನ್ಯೂಸ್: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ನೆಹರು ಮೊದಲ ಬಾರಿಗೆ ನೇಮಕವಾಗಿದ್ದು, ನಂತರ ಎರಡು ಬಾರಿ ಚುನಾಯಿತರಾಗಿದ್ದರು. ಮೋದಿ ಸತತ ಮೂರು ಬಾರಿಗೆ ಚುನಾಯಿತರಾಗಿ ಪ್ರಧಾನಿ ಹುದ್ದೆಗೇರಿದ್ದಾರೆ. ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಅವರೊಂದಿಗೆ 72 ಸಚಿವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶ ವಿದೇಶಗಳ ಗಣ್ಯರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ನೆಹರು ಬಳಿಕ ಮೂರನೇ ಬಾರಿ ಪ್ರಧಾನಿಯಾದ ನಮೋ| ಇಂದಿನಿಂದ ಮೋದಿ 3.0 ಶಕೆ ಆರಂಭ Read More »

ಮೋದಿ 3.0/ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ

ಸಮಗ್ರ ನ್ಯೂಸ್: ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ಮೋದಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದರು.

ಮೋದಿ 3.0/ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ Read More »

ಮಹಿಳೆಯ ಕೊಲೆಗೈದು ಶವವನ್ನು ರೈಲಿನಲ್ಲಿಟ್ಟ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಮಹಿಳೆಯ ಹತ್ಯೆಗೈದು ಎರಡು ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಇಟ್ಟು ಹೋದ ಪ್ರಕರಣ ಮಧ್ಯಪ್ರದೇಶದ ಇಂದೋರ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ದಿನಗಳ ಹಿಂದೆ ಮಹಿಳೆಯನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕತ್ತರಿಸಿ ಬ್ಯಾಗ್‍ನಲ್ಲಿ ತುಂಬಿ ಶನಿವಾರ (ಜೂ.8) ರಾತ್ರಿ ರೈಲಿನಲ್ಲಿ ತಂದು ಇರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಚೀಲದಲ್ಲಿ ಮಹಿಳೆಯ ಕೈ ಹಾಗೂ ಕಾಲುಗಳು ಪತ್ತೆಯಾಗಿಲ್ಲ. ಚೀಲಗಳನ್ನು ವಶಕ್ಕೆ ಪಡೆದು ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರೈಲಿನ ಸ್ವಚ್ಛತಾ ಸಿಬ್ಬಂದಿ ಬೋಗಿಯ ಒಳಗೆ

ಮಹಿಳೆಯ ಕೊಲೆಗೈದು ಶವವನ್ನು ರೈಲಿನಲ್ಲಿಟ್ಟ ದುಷ್ಕರ್ಮಿಗಳು Read More »

ಮುಂಬೈ:ಒಂದೇ ರನ್‌ವೇಯಲ್ಲಿ ಲ್ಯಾಂಡಿಂಗ್‌, ಟೇಕಾಫ್‌| ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ!!

ಸಮಗ್ರ ನ್ಯೂಸ್: ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ (ಜೂ.8) ಸಂಜೆ ಒಂದೇ ರನ್‌ವೇಯಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದರೆ ಇಂಡಿಗೋ ವಿಮಾನ ಲ್ಯಾಂಡಿಂಗ್‌ ಆಗಿದೆ. ಏರ್‌ ಇಂಡಿಯಾ ವಿಮಾನ ತಿರುವನಂತಪುರಂಗೆ ಟೇಕಾಫ್‌ ಆಗುತ್ತಿತ್ತು. ಈ ಸಂದರ್ಭದಲ್ಲಿ ಇಂದೋರ್‌ನಿಂದ ಆಗಮಿಸಿದ ಇಂಡಿಗೋ ವಿಮಾನಕ್ಕೆ ತಪ್ಪಾಗಿ ರನ್‌ವೇಯಲ್ಲಿ ಲ್ಯಾಂಡಿಂಗ್‌ ಮಾಡಲು ಅನುಮತಿ ಸಿಕ್ಕಿದೆ. ಅನುಮತಿ ಸಿಕ್ಕಿದ ಕಾರಣ ಪೈಲಟ್‌ ರನ್‌ವೇಯಲ್ಲಿ ಟಚ್‌ಡೌನ್‌ ಆಗುತ್ತಿದ್ದಾಗ ಏರ್‌ ಇಂಡಿಯಾ ಜಸ್ಟ್‌ ಟೇಕಾಫ್‌ ಆಗಿತ್ತು. ಒಂದು ವೇಳೆ ಏರ್‌ ಇಂಡಿಯಾ

ಮುಂಬೈ:ಒಂದೇ ರನ್‌ವೇಯಲ್ಲಿ ಲ್ಯಾಂಡಿಂಗ್‌, ಟೇಕಾಫ್‌| ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ!! Read More »

‘ನಮೋ’ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಮಂತ್ರಿ ಸ್ಥಾನ…!

ಸಮಗ್ರ ನ್ಯೂಸ್: ಇಂದು ನರೇಂದ್ರ ಮೋದಿ ಅವರು ಸಂಜೆ 7.15ಕ್ಕೆ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಸಂಸದರು ಮೋದಿ ಸಂಪುಟದ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಹೀಗಾಗಿ ಸಚಿವರಾಗುವ ಸಂಸದರಿಗೆ ಕರೆ ಮಾಡಿ ಮಾಹಿತಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಪ್ರಮುಖವಾಗಿ ಕರ್ನಾಟಕದ ಐವರಿಗೆ ಮೋದಿ ಸಂಪುಟದಲ್ಲಿ ಅವಕಾಶ ಸಿಕ್ಕಿದೆ ಎಂದು ತಿಳಿದುಬಂದಿದೆ. ಮುಖ್ಯವಾಗಿ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್, ಎಚ್.ಡಿ ಕುಮಾರಸ್ವಾಮಿಗೆ ಈ ಬಾರಿ

‘ನಮೋ’ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಮಂತ್ರಿ ಸ್ಥಾನ…! Read More »

ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕುಳಿತು ಅಚ್ಚರಿ ಮೂಡಿಸಿದ ಕಪಿ!

ಸಮಗ್ರ ನ್ಯೂಸ್: ಮೃತಪಟ್ಟ ವ್ಯಕ್ತಿಯೋರ್ವನ ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕೋತಿ ಬಂದು ಕುಳಿತ ಅಚ್ಚರಿಯ ಘಟನೆಗೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ. ನವಲಗುಂದದ ಬಸವೇಶ್ವರ ನಗರದ ನಿವಾಸಿ ರವಿ ಮಾಗ್ರೆ ಮೊನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದರು. ಈ ಹಿನ್ನೆಲೆ ರವಿ ಮನೆಯವರು ನಿನ್ನೆ ದಿನ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿಕೊಂಡಿದ್ದರು. ಅದರಂತೆಯೇ ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಹೋಗಿ ಅಗ್ನಿ ಸ್ಪರ್ಶ ಮಾಡೊಣ ಎನ್ನುವಷ್ಟರಲ್ಲಿ ಈ ಕೋತಿ ಸಾವನ್ನಪ್ಪಿದ ವ್ಯಕ್ತಿಯ ಎದೆಯ ಮೇಲೆಯೇ ಬಂದು ಕುಳಿತಿದೆ. ಈ

ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕುಳಿತು ಅಚ್ಚರಿ ಮೂಡಿಸಿದ ಕಪಿ! Read More »

ಬೆಳಗಾವಿ:ಟ್ರೈಲರ್ ಸಮೇತ ನದಿಗೆ ಬಿದ್ದ ಟ್ರಾಕ್ಟರ್

ಸಮಗ್ರ ನ್ಯೂಸ್:ನಿರಂತರ ಮಳೆಯಿಂದ ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಗೆ 13 ಜನರಿದ್ದ ಟ್ರಾಕ್ಟರ್ ಮಗುಚಿ ಬಿದ್ದ ಪರಿಣಾಮ ಓರ್ವ ನಾಪತ್ತೆ ಆಗಿದ್ದು, 12 ಮಂದಿ ಬಚಾವ್ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಬ್ರಿಡ್ಜ್ ಕಮ್ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿತ್ತು. ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಂದಗಾಂವ್ ಬಳಿಯ ಮಧ್ಯೆ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್ ಜಲಾವೃತವಾಗಿತ್ತು. ನದಿ ದಾಟುವ ಸಂದರ್ಭ 13 ಜನರಿದ್ದ ಟ್ರಾಕ್ಟರ್ ಟ್ರೈಲರ್

ಬೆಳಗಾವಿ:ಟ್ರೈಲರ್ ಸಮೇತ ನದಿಗೆ ಬಿದ್ದ ಟ್ರಾಕ್ಟರ್ Read More »

ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್

ಸಮಗ್ರ ನ್ಯೂಸ್: ನಮಗೆ ಫ್ರೀ ಬಸ್ ಬೇಡ, ಹೆಚ್ಚುವರಿ ಬಸ್ಸುಗಳನ್ನು ಹಳ್ಳಿಯಲ್ಲಿ ಓಡಿಸಿ ಸಹಾಯ ಮಾಡಿ ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಓಡುವ ಹೆಚ್ಚುವರಿ ಬಸ್ಸುಗಳನ್ನು ಕೊಡಿ. ನಾವು ಪಾಸ್ ಮಾಡಿಸುತ್ತೇವೆ. ಹಣಕೊಟ್ಟು ಪ್ರಯಾಣ ಮಾಡುತ್ತೇವೆ ಎಂದು ಏರು ಧ್ವನಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಅಧಿಕಾರಿ ಮುಂದೆ ಸಮಸ್ಯೆ ತೋಡಿಕೊಂಡಿದ್ದಾಳೆ. ಎಬಿವಿಪಿ (ABVP) ನೇತೃತ್ವದಲ್ಲಿ ಕುಂದಾಪುರದಲ್ಲಿ ಪ್ರತಿಭಟನೆ ನಡೆದ ಸಂದರ್ಭ ತಮಗಾಗುವ ಬಸ್

ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್ Read More »