June 2024

ಬೆಂಗಳೂರಿನ ಪಾರ್ಕ್ ಗಳ ಸಮಯ ವಿಸ್ತರಣೆ| ಹೊಸ ಸಮಯ ನಿಗದಿ ಪಡಿಸಿ ಡಿಸಿಎಂ ಆದೇಶ

ಸಮಗ್ರ ನ್ಯೂಸ್: ಬೆಂಗಳೂರಿನ ಜನರಿಗೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಗುಡ್ ನ್ಯೂಸ್ ನೀಡಿದೆ. ಹೌದು ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್ ಗಳ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಇನ್ನು ಮುಂದೆ ಪ್ರತಿದಿನ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಾರ್ಕ್ ಗಳು ತೆರೆದಿರುತ್ತದೆ. ಇದೇ ವಿಚಾರವಾಗಿ ಡಿಸಿಎಂ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ನಿನ್ನೆ ಮಾಧ್ಯಮಗೋಷ್ಠಿ ನಡೆಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಉದ್ಯಾನವನದಲ್ಲಿ ಹೆಚ್ಚಿನ ಭದ್ರತೆಗೆ ಪಾಲಿಕೆ ವತಿಯಿಂದ ಸಿಬ್ಬಂದಿ […]

ಬೆಂಗಳೂರಿನ ಪಾರ್ಕ್ ಗಳ ಸಮಯ ವಿಸ್ತರಣೆ| ಹೊಸ ಸಮಯ ನಿಗದಿ ಪಡಿಸಿ ಡಿಸಿಎಂ ಆದೇಶ Read More »

ಬೆಳ್ಳಾರೆ: ಮಹಿಳೆಯ ತಲೆಗೆ ಕಲ್ಲೆತ್ತಿ‌ ಹಾಕಿ ಕೊಲೆಗೈದ ಪ್ರಕರಣ| ಮದ್ಯದ ಅಮಲಲ್ಲಿ ನಡೆದಿತ್ತು ಹತ್ಯೆ!!

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಹಿಳೆಯ ಕೊಲೆಗೈದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬೆಳ್ಳಾರೆಯ ಪಾಟಾಜೆಯ ನಳಿನಿ ಅವರನ್ನು ರವಿವಾರ ರಾತ್ರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಆರೋಪಿ ಕಲ್ಮಡ್ಕದ ಜೋಗಿಯಡ್ಕದ ವೆಂಕಪ್ಪ ಅವರ ಪುತ್ರ ಜಯರಾಮ ನಾಯ್ಕನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ:ಬೆಳ್ಳಾರೆ ಗ್ರಾಮದ ಪಾಟಾಜೆ ನಿವಾಸಿ ಸುಂದರ ಅವರ ಪತ್ನಿ ನಳಿನಿ (55) ಅವರನ್ನು

ಬೆಳ್ಳಾರೆ: ಮಹಿಳೆಯ ತಲೆಗೆ ಕಲ್ಲೆತ್ತಿ‌ ಹಾಕಿ ಕೊಲೆಗೈದ ಪ್ರಕರಣ| ಮದ್ಯದ ಅಮಲಲ್ಲಿ ನಡೆದಿತ್ತು ಹತ್ಯೆ!! Read More »

ಸಾರಿಗೆ ಇಲಾಖೆಗೆ ಮೇಜರ್ ಸರ್ಜರಿಗೆ ಸಿದ್ದತೆ| 9 ಸಾವಿರ ಹುದ್ದೆಗಳ ಭರ್ತಿಗೆ ನಿರ್ಧಾರ

ಸಮಗ್ರ ನ್ಯೂಸ್: ಸಾರಿಗೆ ಇಲಾಖೆಯಲ್ಲಿ 9 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿ ನಾಲ್ಕು ನಿಗಮಗಳಲ್ಲಿ 9 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 2 ಸಾವಿರ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಮಾಡಿಕೊಳ್ಳಲಾಗಿದೆ. ಉಳಿದವು ನೇಮಕಾತಿ ಪ್ರಕ್ರಿಯೆಯಲ್ಲಿವೆ. 5800 ಹೊಸ ಬಸ್ ಗಳನ್ನು ಖರೀದಿ ಮಾಡಲಾಗುತ್ತಿದ್ದು, ಈಗಾಗಲೇ 2400 ಬಸ್ ಗಳ ಖರೀದಿ ಆಗಿದೆ ಎಂದು ಸಚಿವರು ಮಾಹಿತಿ

ಸಾರಿಗೆ ಇಲಾಖೆಗೆ ಮೇಜರ್ ಸರ್ಜರಿಗೆ ಸಿದ್ದತೆ| 9 ಸಾವಿರ ಹುದ್ದೆಗಳ ಭರ್ತಿಗೆ ನಿರ್ಧಾರ Read More »

ಮತ್ತೊಂದು ದಸರಾ ಆನೆಯ ದುರಂತ ಅಂತ್ಯ| ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ‘ಅಶ್ವತ್ಥಾಮ’ ಸಾವು

ಸಮಗ್ರ ನ್ಯೂಸ್: ದಸರಾ ಮಹೋತ್ಸವದಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆಯು ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮಂಗಳವಾರ ಮೃತಪಟ್ಟಿರುವ ಘಟನೆ ನಡೆದಿದೆ. ಹುಣಸೂರು- ಪಿರಿಯಾಪಟ್ಟಣ ತಾಲ್ಲೂಕಿನ ಗಡಿ ಭಾಗದ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದ ಆನೆಯು ಆಹಾರ ಅರಸಿ ಕಾಡಿಗೆ ತೆರಳಿತ್ತು. ಸೋಲಾರ್ ಬೇಲಿ ಮೇಲೆ ವಿದ್ಯುತ್ ತಂತಿಯು ಬಿದ್ದಿದ್ದರಿಂದ ವಿದ್ಯುತ್ ಆಘಾತದಿಂದ ಅಶ್ವತ್ಥಾಮ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ‌ ಮೂಲಗಳು ತಿಳಿಸಿವೆ. 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ

ಮತ್ತೊಂದು ದಸರಾ ಆನೆಯ ದುರಂತ ಅಂತ್ಯ| ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ‘ಅಶ್ವತ್ಥಾಮ’ ಸಾವು Read More »

ಅಂಗಡಿಯ ಪರದೆ ಸರಿಸಿ ಹಣ್ಣು ತಿಂದು ತೆರಳುವ ಕಾಡಾನೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಹಲವೆಡೆ ಕಾಡಾನೆಗಳು ಕಾಫಿ ತೋಟ ಮತ್ತು ಜನವಸತಿ ಪ್ರದೇಶಗಳ ಮೇಲೆ ಲಗ್ಗೆಯಿಟ್ಟು ಕಂಟಕಪ್ರಾಯವಾಗಿ ಪರಿಣಮಿಸಿರುವುದರ ನಡುವೆ ಇದಕ್ಕೆ ವ್ಯತಿರಿಕ್ತವಾಗಿ ಇಲ್ಲೊಂದು ಸಲಗ ಸದ್ದಿಲ್ಲದೇ ಅಂಗಡಿಯೊಂದರಿಂದ ಹಣ್ಣು ಹಂಪಲುಗಳನ್ನು ತಿಂದು ಯಾವುದೇ ತೊಂದರೆ ಮಾಡದೇ ತನ್ನಪಾಡಿಗೆ ಹೊರಟು ಹೋಗುತ್ತಿದೆ. ಕಳೆದ ಎರಡು ದಿನಗಳಿಂದ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕಾಡಾನೆಯೊಂದುಗೋಣಿಕೊಪ್ಪಲು ಪೊನ್ನಂಪೇಟೆ ಮುಖ್ಯರಸ್ತೆಯ ಅರ್ವತೋಕ್ಲು ವಿದ್ಯಾನಿಕೇತನ ಶಾಲೆಗೆ ಹೋಗುವ ರಸ್ತೆಯ ಸಮೀಪದಲ್ಲಿರುವ ಹಣ್ಣು, ತರಕಾರಿ ಅಂಗಡಿಗೆ ಖಾಯಂ ಗಿರಾಕಿ ಎನ್ನುವಂತೆ ಬರುತ್ತಿದೆ.

ಅಂಗಡಿಯ ಪರದೆ ಸರಿಸಿ ಹಣ್ಣು ತಿಂದು ತೆರಳುವ ಕಾಡಾನೆ Read More »

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ರದ್ದು ಮಾಡಿ/ ತಮಿಳುನಾಡು ಸರ್ಕಾರಕ್ಕೆ ಶಿಫಾರಸು ಮಾಡಿದ ಆಯೋಗ

ಸಮಗ್ರ ನ್ಯೂಸ್: ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್)ಯನ್ನು ಕಾನೂನು ಅಥವಾ ಶಾಸನ ರಚನೆ ಪ್ರಕ್ರಿಯೆಗಳ ಮೂಲಕ ರದ್ದುಪಡಿಸುವಂತೆ ಆಯೋಗವೊಂದು ತಮಿಳುನಾಡು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, 12ನೇ ತರಗತಿಯ ಅಂಕಗಳನ್ನೇ ಆಧರಿಸಿ ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶಾವಕಾಶ ಕಲ್ಪಿಸುವಂತೆಯೂ ಸಲಹೆ ಮಾಡಿದೆ. ವಿವಿಧ ಬೋರ್ಡ್‍ಗಳಡಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಸಿಗುವಂತೆ ಸರ್ಕಾರ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ನ್ಯಾ ಎ.ಕೆ. ರಾಜನ್ ನೇತೃತ್ವದ ಅತ್ಯುನ್ನತ ಸಮಿತಿ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ರದ್ದು ಮಾಡಿ/ ತಮಿಳುನಾಡು ಸರ್ಕಾರಕ್ಕೆ ಶಿಫಾರಸು ಮಾಡಿದ ಆಯೋಗ Read More »

ದರ್ಶನ್ ಬಂಧನ ಬೆನ್ನಲ್ಲೇ ಗೆಳತಿ ಪವಿತ್ರಾ‌ ಗೌಡ ಕೂಡ ಪೊಲೀಸ್ ವಶಕ್ಕೆ!!

ಸಮಗ್ರ ನ್ಯೂಸ್: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ಇದೀಗ ಅವರ ಗೆಳತಿ ಪವಿತ್ರಾಗೌಡ ಅವರನ್ನು ಕೂಡ ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆರ್. ಆರ್ ನಗರ ಠಾಣೆ ಪೊಲೀಸರು ಅವರ ಗೆಳತಿ ಪವಿತ್ರಾಗೌಡ ಅವರನ್ನು ಕೂಡ ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದ ಎನ್ನಲಾಗುತ್ತಿರುವ ರೇಣುಕಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಯಿಸಲಾಗಿದೆ. ಜೂನ್ 8ರಂದು ಆತನನ್ನು ಶೆಡ್ ನಲ್ಲಿ ಇರಿಸಿ

ದರ್ಶನ್ ಬಂಧನ ಬೆನ್ನಲ್ಲೇ ಗೆಳತಿ ಪವಿತ್ರಾ‌ ಗೌಡ ಕೂಡ ಪೊಲೀಸ್ ವಶಕ್ಕೆ!! Read More »

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ಯಾಕೆ ಗೊತ್ತಾ? ಇಲ್ಲಿದೆ ಪ್ರಮುಖ ಮಾಹಿತಿ…

ಸಮಗ್ರ ನ್ಯೂಸ್: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ನಾಯಕ ನಟ ದರ್ಶನ ತೂಗುದೀಪ್ ಅರೆಸ್ಟ್ ಆಗಿದ್ದಾರೆ. ಮೈಸೂರಿನ ತಮ್ಮ ನಿವಾಸದಿಂದ ಪೊಲೀಸರು ಬಂಧಿಸಿದ್ದು, ಸದ್ಯ ಪೊಲೀಸ್ ವಶದಲ್ಲಿದ್ದಾರೆ. ಮೂಲತಃ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿಯಾಗಿದ್ದ ರೇಣುಕಾಸ್ವಾಮಿ ಬೆಂಗಳೂರಿನ ಮೆಡಿಕಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜೂ.8ರಂದು ಬೆಳಗ್ಗೆಯಿಂದ ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ರೇಣುಕಾಸ್ವಾಮಿ ವಾಪಸ್ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಮನೆಯವರು ಪೊಲೀಸ್ ದೂರು ನೀಡಿದ್ದರು. ಈ ನಡುವೆ ಜೂ.9ರಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ಯಾಕೆ ಗೊತ್ತಾ? ಇಲ್ಲಿದೆ ಪ್ರಮುಖ ಮಾಹಿತಿ… Read More »

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಸಮಗ್ರ ನ್ಯೂಸ್: ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರನ್ನು ಬಂಧಿಸಲಾಗಿದೆ. ಮೈಸೂರಿನ ಕೆಂಪಯ್ಯನಹುಂಡಿ ಗ್ರಾಮದ ಬಳಿ ಇರುವ ಫಾರ್ಮ್​ಹೌಸ್​ನಲ್ಲಿ ದರ್ಶನ್​ ಅವರನ್ನು ಬಂಧಿಸಲಾಗಿದೆ. ಆರ್ ಆರ್ ನಗರ ನಿವಾಸದಲ್ಲಿ ಇಂದು ಬೆಳಗಿನ ಜಾವ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ Read More »

ಹವಾಮಾನ ವರದಿ| ಭಾರೀ ಮಳೆ‌ ಹಿನ್ನೆಲೆ| ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಸಮಗ್ರ ನ್ಯೂಸ್: ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚದುರಿದಂತೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಯಾದಗಿರಿ,

ಹವಾಮಾನ ವರದಿ| ಭಾರೀ ಮಳೆ‌ ಹಿನ್ನೆಲೆ| ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ Read More »