June 2024

ಲಡಾಖ್: ನದಿ ನೀರಲ್ಲಿ ಕೊಚ್ಚಿ ಹೋಗಿ ಐವರು ಸೈನಿಕರು ಹುತಾತ್ಮ

ಸಮಗ್ರ ನ್ಯೂಸ್: ಲಡಾಖ್ ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಟಿ -72 ಟ್ಯಾಂಕ್ ನಲ್ಲಿ ನದಿಯನ್ನು ದಾಟುವಾಗ ಸೇನೆಯ ಐವರು ಸೈನಿಕರು ನೀರಿನಲ್ಲಿ ಕೊಚ್ಚಿಹೋಗಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐವರು ಸೈನಿಕರನ್ನು ಹೊತ್ತ ಟಿ -72 ಟ್ಯಾಂಕ್ ನದಿಯನ್ನು ದಾಟುವಾಗ ಪ್ರವಾಹದಿಂದಾಗಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಟ್ಯಾಂಕ್ ನಕ್ಕು ಒಬ್ಬ ಜೆಸಿಒ ಮತ್ತು 4 ಜವಾನರು ಸೇರಿದಂತೆ ಐದು ಸೈನಿಕರು ಇದ್ದರು. ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದ್ದು, […]

ಲಡಾಖ್: ನದಿ ನೀರಲ್ಲಿ ಕೊಚ್ಚಿ ಹೋಗಿ ಐವರು ಸೈನಿಕರು ಹುತಾತ್ಮ Read More »

ಇಂದು ಟಿ-20 ವಿಶ್ವಕಪ್ ಫೈನಲ್| ಮೊದಲ ಬಾರಿ‌ ಇಂಡಿಯಾ – ದ.ಆಫ್ರಿಕಾ ನಡುವೆ ಚಾಂಪಿಯನ್ ಪಟ್ಟಕ್ಕೆ ಹೋರಾಟ

ಸಮಗ್ರ ನ್ಯೂಸ್: ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024 ಇದರ ಕ್ಲೈಮ್ಯಾಕ್ಸ್ ಇಂದು ನಡೆಯಲಿದೆ. 2007ರ ಮೊದಲ ಆವೃತ್ತಿಯ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ 17 ವರ್ಷಗಳ ಬಳಿಕ ಇದೇ ಮೊದಲ ಬಾರಿ ಫೈನಲ್ ನಲ್ಲಿ ಸ್ಪರ್ಧಿಸುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲಿದೆ. ಉಭಯ ತಂಡಗಳು 2014ರ ಟಿ20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಭಾರತ ಜಯ ಸಾಧಿಸಿತ್ತು. ಭಾರತ ಕ್ರಿಕೆಟ್ ತಂಡ 2007ರಲ್ಲಿ

ಇಂದು ಟಿ-20 ವಿಶ್ವಕಪ್ ಫೈನಲ್| ಮೊದಲ ಬಾರಿ‌ ಇಂಡಿಯಾ – ದ.ಆಫ್ರಿಕಾ ನಡುವೆ ಚಾಂಪಿಯನ್ ಪಟ್ಟಕ್ಕೆ ಹೋರಾಟ Read More »

ಉಪ್ಪಿನಂಗಡಿ: ಅನ್ನ ಹಾಕಿದ ಯಜಮಾನಿಯ ಆತ್ಮಹತ್ಯೆ ತಡೆದ ಶ್ವಾನ!!| ನೇತ್ರಾವತಿಗೆ ಹಾರಲೆತ್ನಿಸಿದ್ದಾಕೆ ಬದುಕಿದ್ದು ಹೇಗೆ?

ಸಮಗ್ರ ನ್ಯೂಸ್: ಗಂಡನ ಜೊತೆ ಮುನಿಸಿಕೊಂಡು ಆತ್ಮಹತ್ಯೆ ಮಾಡುವ ಸಲುವಾಗಿ ನೇತ್ರಾವತಿ ಸೇತುವೆಯ ತಡೆಗೋಡೆ ಏರಿದ್ದ 36 ವರ್ಷದ ಮಹಿಳೆಯ ಜೀವ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿಯಿಂದ ಬಚಾವಾಗಿದೆ. ಬೆಳ್ತಂಗಡಿ ತಾಲೂಕಿನ ಪಿಲಿಗೂಡು ನಿವಾಸಿ ಮಹಿಳೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮನೆಯಿಂದ ಹತ್ತಾರು ಕಿ.ಮೀ ದೂರದ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಗೆ ನಡೆದು ಬಂದಿದ್ದರು. ಆದರೆ ಅವರನ್ನು ಮನೆಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಅಪಾಯ ವನ್ನು ಅರಿತು ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳುತ್ತಾ ರಸ್ತೆಯಲ್ಲಿ

ಉಪ್ಪಿನಂಗಡಿ: ಅನ್ನ ಹಾಕಿದ ಯಜಮಾನಿಯ ಆತ್ಮಹತ್ಯೆ ತಡೆದ ಶ್ವಾನ!!| ನೇತ್ರಾವತಿಗೆ ಹಾರಲೆತ್ನಿಸಿದ್ದಾಕೆ ಬದುಕಿದ್ದು ಹೇಗೆ? Read More »

ಗೂಗಲ್ ಟ್ರಾನ್ಸ್ ಲೆಟ್ ನಲ್ಲಿ ತುಳುಭಾಷೆ| ತುಳು ಕಲಿಕೆ ಈಗ ಮತ್ತಷ್ಟು ಸುಲಭ!

ಸಮಗ್ರ ನ್ಯೂಸ್: ತುಳು ಭಾಷೆ ಕಲಿಯಬೇಕೆಂಬ ಜನರಿಗೆ ಗೂಗಲ್ ಸಿಹಿಸುದ್ದಿ ನೀಡಿದ್ದು, ಗೂಗಲ್ ಟ್ರಾನ್ಸ್ ಲೇಟಲ್ಲಿ ತುಳು ಭಾಷೆ ಸೇರ್ಪಡೆಯಾಗಿದೆ. ದೊಡ್ಡ ಟೆಕ್ ದೈತ್ಯ ಗೂಗಲ್ ಹೊಸದಾಗಿ 110 ಹೊಸ ಭಾಷೆಗಳನ್ನು ಸೇರಿಸಿದೆ. ಅವಧಿ, ಬೋಡೋ, ಖಾಸಿ, ಕೋಕ್ ಬೊರೋಕ್, ಮಾರ್ವಾಡಿ, ಸಂತಾಲಿ ಮತ್ತು ತುಳು ಹೊಸ ಭಾರತೀಯ ಭಾಷೆಗಳಾಗಿವೆ. ಭಾಷಾಂತರಕ್ಕೆ ಹೊಸ ಭಾಷೆಗಳನ್ನು ಹೇಗೆ ಸೇರಿಸುತ್ತದೆ ಎಂಬುದನ್ನು ಗೂಗಲ್ ಉಲ್ಲೇಖಿಸಿದೆ. ಪ್ರಾದೇಶಿಕ ಪ್ರಭೇದಗಳು, ಉಪಭಾಷೆಗಳು ಮತ್ತು ಕಾಗುಣಿತ ಮಾನದಂಡಗಳಂತಹ ಹಲವಾರು ಅಂಶಗಳನ್ನು ಪರಿಗಣಿಸುತ್ತದೆ ಎಂದು ಟೆಕ್

ಗೂಗಲ್ ಟ್ರಾನ್ಸ್ ಲೆಟ್ ನಲ್ಲಿ ತುಳುಭಾಷೆ| ತುಳು ಕಲಿಕೆ ಈಗ ಮತ್ತಷ್ಟು ಸುಲಭ! Read More »

ಉಜಿರೆ: ಭೀಕರ ರಸ್ತೆ ಅಪಘಾತ| ಗಂಭೀರ ಗಾಯಗೊಂಡ ಕಾರು ಚಾಲಕ ಸಾವು

ಸಮಗ್ರ ನ್ಯೂಸ್: ಉಜಿರೆ – ಧರ್ಮಸ್ಥಳ ಮುಖ್ಯ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಛಿದ್ರ ಛಿದ್ರವಾಗಿದೆ. ಘಟನೆಯಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ತಲುಪಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಮೃತ ಕಾರು ಚಾಲಕನನ್ನು ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರಾದ ಎಂ. ಆರ್. ನಾಯಕ್ ಅವರ ಪುತ್ರ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಗಾಯಾಳು ಪ್ರಜ್ವಲ್ ಉಜಿರೆಯ ಡಿ.ಎಂ ಗೌಡ ಕಾಂಪ್ಲೆಕ್ಸ್ ನಲ್ಲಿ ಗೇಮಿಂಗ್ ಶಾಪ್ ಮಾಲೀಕ ಹಾಗೂ ಉದ್ಯಮಿ ಎಂದು

ಉಜಿರೆ: ಭೀಕರ ರಸ್ತೆ ಅಪಘಾತ| ಗಂಭೀರ ಗಾಯಗೊಂಡ ಕಾರು ಚಾಲಕ ಸಾವು Read More »

ಬಾಹ್ಯಾಕಾಶ ‌ನಿಲ್ದಾಣದಲ್ಲಿ‌ ತುರ್ತುಪರಿಸ್ಥಿತಿ| ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಗೆ ಸ್ಟಾರ್ ಲೆನ್ಸರ್ ನಲ್ಲಿ ಆಶ್ರಯ ಪಡೆಯಲು ಸೂಚನೆ

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ನಿಲ್ದಾಣದ ಎತ್ತರದ ಬಳಿ ಉಪಗ್ರಹ ಛಿದ್ರವಾಗುವ ಬಗ್ಗೆ ನಾಸಾ ಎಚ್ಚರಿಕೆ ನೀಡಿದ್ದು, ತಕ್ಷಣವೇ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಬೋಯಿಂಗ್ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮತ್ತು ಇತರ ವಾಪಸಾತಿ ವಾಹನಗಳಲ್ಲಿ ಆಶ್ರಯ ಪಡೆಯುವಂತೆ ಆದೇಶಿಸಲಾಗಿದೆ. ಬಾಹ್ಯಾಕಾಶ ಅವಶೇಷಗಳು ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಬುಧವಾರ ಬೆದರಿಕೆ ಹಾಕಿದ್ದರಿಂದ ತುರ್ತು ಆದೇಶವನ್ನು ಹೊರಡಿಸಲಾಗಿದೆ. ನಿಲ್ದಾಣದ ಸಮೀಪವಿರುವ ಎತ್ತರದಲ್ಲಿ ಉಪಗ್ರಹ ಮುರಿದುಹೋಗಿರುವ ಬಗ್ಗೆ ನಾಸಾಗೆ ತಿಳಿಸಿದಾಗ ತುರ್ತು

ಬಾಹ್ಯಾಕಾಶ ‌ನಿಲ್ದಾಣದಲ್ಲಿ‌ ತುರ್ತುಪರಿಸ್ಥಿತಿ| ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಗೆ ಸ್ಟಾರ್ ಲೆನ್ಸರ್ ನಲ್ಲಿ ಆಶ್ರಯ ಪಡೆಯಲು ಸೂಚನೆ Read More »

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್ ಮಿಸ್ತ್ರಿ ಆಯ್ಕೆ

ಸಮಗ್ರ ನ್ಯೂಸ್‌: ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ 1989ರ ಐಎಫ್‌ಎಸ್ ಬ್ಯಾಚ್ ಅಧಿಕಾರಿ ವಿಕ್ರಮ್ ಮಿಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ಅವರ ಅವಧಿಯು ಜುಲೈ 14ರಂದು ಮುಗಿಯುವ ಕಾರಣ ವಿಕ್ರಮ್ ಮಿಸ್ತ್ರಿ ಅವರನ್ನು ನೇಮಿಸಲಾಗಿದೆ. ಜುಲೈ 15ರಂದು ವಿಕ್ರಮ್ ಮಿಸ್ತ್ರಿ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿನಯ್ ಕ್ವಾಟ್ರಾ ಅವರ ಅಧಿಕಾರದ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲಾಗಿತ್ತು. ವಿನಯ್ ಕ್ವಾಟ್ರಾ ಅವರನ್ನು ಅಮೆರಿಕಕ್ಕೆ ಭಾರತದ ರಾಯಭಾರಿಯನ್ನಾಗಿ ನೇಮಿಸಲಾಗುತ್ತದೆ

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್ ಮಿಸ್ತ್ರಿ ಆಯ್ಕೆ Read More »

ಹೇಮಾವತಿ ನದಿಗೆ ಬಿದ್ದ ಕಾರು|ಇಬ್ಬರು ಪ್ರಾಣಾಪಾಯದಿಂದ ಪಾರು

ಸಮಗ್ರ ನ್ಯೂಸ್: ಕೊಟ್ಟಿಗೆಹಾರದಿಂದ ಬಣಕಲ್ ಹೋಗುವ ರಸ್ತೆಯ ಮಾರ್ಗ ಮಧ್ಯೆ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೇಮಾವತಿ ನದಿಯ ಕಿರು ಕಾಲುವೆಗೆ ನೇರವಾಗಿ ಬಿದ್ದಿದೆ. ಕಾರು ಮಂಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದಾಗ ಮಳೆಗೆ ತಿರುವು ಕಾಣದೇ ಕೆಳಕ್ಕೆ ಹಳ್ಳಕ್ಕೆ ಬಿದ್ದಿದೆ. ಈ ಹೆದ್ದಾರಿಯಲ್ಲಿ ನೀರು ನಿಲ್ಲುವುದರಿಂದ ಈ ವರೆಗೆ ಸುಮಾರು ಮೂರು ನಾಲ್ಕು ವಾಹನಗಳು ಅಪಘಾತಕ್ಕೀಡಾಗಿವೆ. ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ನಿಂತು ಇಂತಹ ಘಟನೆ ಸಂಭವಿಸುತ್ತಿದೆ.

ಹೇಮಾವತಿ ನದಿಗೆ ಬಿದ್ದ ಕಾರು|ಇಬ್ಬರು ಪ್ರಾಣಾಪಾಯದಿಂದ ಪಾರು Read More »

ಉಪ್ಪಿನಂಗಡಿ: 108ರಲ್ಲಿ ಹೆಣ್ಮಗುವಿಗೆ ಜನ್ಮ ನೀಡಿದ ಮಹಿಳೆ

ಸಮಗ್ರ ನ್ಯೂಸ್: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಜೂ.27ರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ. ಬಂಟ್ವಾಳ ತಾಲ್ಲೂಕು ಕಕ್ಕೆಪದವು ಪರಿಸರದ ಉಮೇಶ್ ಎಂಬುವರ ಪತ್ನಿ ಪವಿತ್ರಾ ಅವರು ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ಹೋಗಲು 108 ಆಂಬುಲೆನ್ಸ್ ಸೇವೆಗಾಗಿ ಕರೆ ಮಾಡಿದ್ದರು. ಈ ವೇಳೆ ಪರಿಸರದ ಎರಡೂ ಆಂಬುಲೆನ್ಸ್‌ಗಳು ಬೇರೆಡೆ ಇದ್ದ ಕಾರಣ, ಉಪ್ಪಿನಂಗಡಿಯಲ್ಲಿದ್ದ ಆಂಬುಲೆನ್ಸ್ ಅನ್ನು ಸೇವೆಗೆ ಕರೆಸಲಾಗಿತ್ತು. ಉಪ್ಪಿನಂಗಡಿಯಿಂದ ಕಕ್ಕೆಪದವಿಗೆ ಹೋಗಿ ಗರ್ಭಿಣಿಯನ್ನು

ಉಪ್ಪಿನಂಗಡಿ: 108ರಲ್ಲಿ ಹೆಣ್ಮಗುವಿಗೆ ಜನ್ಮ ನೀಡಿದ ಮಹಿಳೆ Read More »

ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿ‌ ಜಮೀರ್ ಅಹಮದ್ ನೇಮಕ

ಸಮಗ್ರ ನ್ಯೂಸ್: ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಮೀರ್ ಅಹ್ಮದ್ ಖಾನ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಜಮೀರ್ ಅಹ್ಮದ್ ಖಾನ್, ಮಾನ್ಯ ವಸತಿ, ವಕ್ಸ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಹಾಗೂ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಲಾಗಿದೆ ಎಂದಿದೆ.

ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿ‌ ಜಮೀರ್ ಅಹಮದ್ ನೇಮಕ Read More »