June 2024

ಸುಳ್ಯ: ಕಾರಿನಲ್ಲಿ ಹಿಂದೂ ಹುಡುಗಿ ಜೊತೆ‌ ಮುಸ್ಲಿಂ ಯುವಕ| ಪೊಲೀಸ್ ವಿಚಾರಣೆ ವೇಳೆ ಬಯಲಾಯ್ತು ಅಸಲಿ ಸತ್ಯ!!

ಸಮಗ್ರ ನ್ಯೂಸ್: ಕೇರಳ ಮೂಲದ ಅನ್ಯಕೋಮಿನ ಜೋಡಿಯೊಂದು ಸುಳ್ಯ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ವೇಳೆ ಹಿಂದೂ ಕಾರ್ಯಕರ್ತರು ಸುಳ್ಯದಲ್ಲಿ ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಜೂ. 18 ರಂದು ಸಂಜೆ ನಡೆದಿದೆ. ಕೇರಳ ಮೂಲದ ಹಿಂದೂ ಹುಡುಗಿಯೊಬ್ಬಳು ಮನೆಯಲ್ಲಿ ಪೋಷಕರ ಜೊತೆ ಜಗಳವಾಡಿಕೊಂಡು ಅನ್ಯಕೋಮಿನ ಯುವಕನೊಂದಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದಳು ಎಂದು ಭಾವಿಸಿ ಹಿಂದೂ ಕಾರ್ಯಕರ್ತರು ಸುಳ್ಯದಲ್ಲಿ ‌ತಡೆದು ಆ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದರು. ಪೊಲೀಸ್ ವಿಚಾರಣೆ ವೇಳೆ ಆ ಜೋಡಿ ಈ […]

ಸುಳ್ಯ: ಕಾರಿನಲ್ಲಿ ಹಿಂದೂ ಹುಡುಗಿ ಜೊತೆ‌ ಮುಸ್ಲಿಂ ಯುವಕ| ಪೊಲೀಸ್ ವಿಚಾರಣೆ ವೇಳೆ ಬಯಲಾಯ್ತು ಅಸಲಿ ಸತ್ಯ!! Read More »

ಮಧುರೈ-ಬೆಂಗಳೂರು ನಡುವೆ ವಂದೇ ಭಾರತ್/ ಪ್ರಾಯೋಗಿಕ ಸಂಚಾರ ಆರಂಭ

ಸಮಗ್ರ ನ್ಯೂಸ್:ರಾಜ್ಯದ ಎಂಟನೇ ವಂದೇ ಭಾರತ್‌ ರೈಲು ಮಧುರೈ- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಮೊದಲ ಪ್ರಾಯೋಗಿಕ ಸಂಚಾರ ನಡೆಸಿತು. ಸೋಮವಾರ ಬೆಳಗ್ಗೆ 5.15ಕ್ಕೆ ಮಧುರೈ ನಿಲ್ದಾಣದಿಂದ ಹೊರಟು ಬೆಂಗಳೂರನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿ ಪುನಃ ತೆರಳಿತು. ಎರಡು ನಗರಗಳನ್ನು ಸರಿಸುಮಾರು 6 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ರೈಲಿನ ವೇಗ, ನಿಲುಗಡೆ ನಿಲ್ದಾಣ ನಿಗದಿ ಬಳಿಕ ರೈಲಿನ ವೇಳಾಪಟ್ಟಿ, ದರವನ್ನು ಪ್ರಕಟಿಸಿ, ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಪ್ರಾಥಮಿಕ ಮಾಹಿತಿಯಂತೆ ಈ

ಮಧುರೈ-ಬೆಂಗಳೂರು ನಡುವೆ ವಂದೇ ಭಾರತ್/ ಪ್ರಾಯೋಗಿಕ ಸಂಚಾರ ಆರಂಭ Read More »

ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ/ 9.26 ಕೋಟಿ ರೈತರ ಖಾತೆಗೆ ಬಿತ್ತು ಹಣ

ಸಮಗ್ರ ನ್ಯೂಸ್: ಪಿಎಂ ಕಿಸಾನ್ ಯೋಜನೆಯ 17 ನೇ ಕಂತನ್ನು ವಾರಣಾಸಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಬಿಡುಗಡೆ ಮಾಡಿದ್ದಾರೆ. ವಾರಣಾಸಿಯಲ್ಲಿ ಈ ಕಾರ್ಯಕ್ರಮವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಸಮನ್ವಯದೊಂದಿಗೆ ಆಯೋಜಿಸಿದೆ.ಈ ಸಂದರ್ಭ, ಪಿಎಂ ಮೋದಿ 9.26 ಕೋಟಿ ಫಲಾನುಭವಿ ರೈತರಿಗೆ ಕಂತಿನ ಭಾಗವಾಗಿ 20,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರ ಯೋಜನೆಯಾದ ಪಿಎಂ ಕಿಸಾನ್ ಯೋಜನೆ ಕೋಟ್ಯಂತರ ರೈತರಿಗೆ ವಾರ್ಷಿಕ 6,000 ರೂ.ಗಳ

ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ/ 9.26 ಕೋಟಿ ರೈತರ ಖಾತೆಗೆ ಬಿತ್ತು ಹಣ Read More »

ಜೂನ್ 27ಕ್ಕೆ ಕೆಂಪೇಗೌಡ ಜಯಂತಿ/ ಡಿ‌ ಕೆ‌ ಶಿವಕುಮಾರ್ ಹೇಳಿಕೆ

ಸಮಗ್ರ ನ್ಯೂಸ್: ಜೂನ್ 27ರಂದು ಬೆಂಗಳೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಆಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜಾಗದ ಸಮಸ್ಯೆ ಕಾರಣಕ್ಕೆ ಸ್ಟೇಡಿಯಂ ಅಥವಾ ಅರಮನೆ ಮೈದಾನದಲ್ಲಿ ಜಯಂತಿ ಮಾಡಲು ಸಲಹೆಗಳು ಬಂದಿದ್ದು, ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಹೇಳಿದರು. ಸಂಘ, ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸಿ ಚರ್ಚೆ ಮಾಡಿದ್ದೇವೆ. ಪಕ್ಷ, ಜಾತಿ, ಧರ್ಮ ದೂರವಿಟ್ಟು ಸಭೆ ಮಾಡಿದ್ದೇವೆ. ಜೂನ್ 27ರಂದು ಬೆಂಗಳೂರಿನಲ್ಲಿ ಜಯಂತಿ ಆಚರಣೆ ಆಗಲಿದೆ ಎಂದು ತಿಳಿಸಿದರು.

ಜೂನ್ 27ಕ್ಕೆ ಕೆಂಪೇಗೌಡ ಜಯಂತಿ/ ಡಿ‌ ಕೆ‌ ಶಿವಕುಮಾರ್ ಹೇಳಿಕೆ Read More »

ಕಾಣೆಯಾಗಿದ್ದ ದರ್ಶನ್ ಮ್ಯಾನೇಜರ್ ಶವವಾಗಿ ಪತ್ತೆ| ಆತ್ಮಹತ್ಯೆ ಮಾಡಿಕೊಂಡನಾ ದುರ್ದೈವಿ!?

ಸಮಗ್ರ ನ್ಯೂಸ್: ಕಾಣೆಯಾಗಿದ್ದ ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ ಎಂಬಾತನ ಶವ ಪತ್ತೆಯಾಗಿದ್ದು,‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ (35) ವಿಷ ಸೇವಿಸಿ ಏಪ್ರಿಲ್‌ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ. ಕೀಟನಾಶಕ ಸೇವನೆ ಮಾಡಿ ಶ್ರೀಧರ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಇದೀಗ

ಕಾಣೆಯಾಗಿದ್ದ ದರ್ಶನ್ ಮ್ಯಾನೇಜರ್ ಶವವಾಗಿ ಪತ್ತೆ| ಆತ್ಮಹತ್ಯೆ ಮಾಡಿಕೊಂಡನಾ ದುರ್ದೈವಿ!? Read More »

ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್: ಭಯಭೀತರಾದ ಜನ

ಸಮಗ್ರ ನ್ಯೂಸ್: ಉಡುಪಿಯಲ್ಲಿ ಮೊನ್ನೆಯಷ್ಟೇ ಒಂದು ಗ್ಯಾಂಗ್ ವಾರ್ ನಡೆದಿತ್ತು, ಇದಾದ ಬಳಿಕ ಈಗ ಮತ್ತೊಂದು ಇದೇ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಜೂನ್ 15ರ ರಾತ್ರಿ ನಡೆದಿದೆ. ಪುತ್ತೂರಿನ ಸೆಲೂನ್ ನೌಕರ ಚರಣ್, ಶಬರಿ ಎಂಬಾತನಿಗೆ ಬೈದಿದ್ದನು. ಈ ವಿಚಾರ ತಿಳಿದ ಪ್ರವೀಣ್ ಮತ್ತು ಈತನ ಗ್ಯಾಂಗ್ ಮಾತುಕತೆಗೆಂದು ಚರಣ್ ನನ್ನು ಉಡುಪಿ ನಗರದ ಪುತ್ತೂರಿ‌ನ ಬಿರಿಯಾನಿ ಪಾಯಿಂಟ್‌ ಬಳಿ ಬರಲು ತಿಳಿಸಿದರು. ಚರಣ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಗಮಿಸಿದ್ದನು. ಪ್ರವೀಣ್ ಆ್ಯಂಡ್

ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್: ಭಯಭೀತರಾದ ಜನ Read More »

ಹೊಸದಾಗಿ ಸಾವಿರ ಬಸ್ ರಸ್ತೆಗಿಳಿಸಲೂ ಕೆಎಸ್ಆರ್ಟಿಸಿ ಪ್ಲಾನ್

ಸಮಗ್ರ ನ್ಯೂಸ್: ಶಕ್ತಿ ಯೋಜನೆ ಆರಂಭವಾದಾಗಿನಿಂದ ಹಲವು ಮಾರ್ಗಗಳಲ್ಲಿ ಬಸ್‌ಗಳ ಕೊರತೆ ಉಂಟಾಗಿತ್ತು. ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಬಸ್ ಸಮಸ್ಯೆ ಎದುರಾಗಿತ್ತು. ಇದರ ಮುಖಾಂತರ ಹೆಚ್ಚಿನ ಬಸ್ ಗೆ ಮನವಿ ಮಾಡಲಾಗಿತ್ತು. ಇದರಿಂದ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಸೇವೆ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನಿರ್ಧಾರ ಮಾಡಿದೆ. ಶಾಲೆ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳನ್ನು KSRTC ಗುರುತಿಸಿ ಅಂತಹ ಭಾಗಗಳಿಗೆ ಹೆಚ್ಚುವರಿ ಅಥವಾ ಹೊಸದಾಗಿ ಬಸ್ ಸೇವೆ ಆರಂಭಿಸಲು ಸಿದ್ದತೆ ನಡೆಸಿದೆ.

ಹೊಸದಾಗಿ ಸಾವಿರ ಬಸ್ ರಸ್ತೆಗಿಳಿಸಲೂ ಕೆಎಸ್ಆರ್ಟಿಸಿ ಪ್ಲಾನ್ Read More »

ತಿರುವನಂತಪುರಂ ಅನಂತ ಪದ್ಮನಾಭ ದೇವಾಲಯದ ಮುಖ್ಯ ಅರ್ಚಕರಾಗಿ ಕನ್ನಡಿಗ ನೇಮಕ| ಬೆಳ್ತಂಗಡಿಯ ಕೊಕ್ಕಡ ಗ್ರಾಮದ ನಾಗೇಶರಿಗೆ ಒಲಿದ ಭಾಗ್ಯ

ಸಮಗ್ರ ನ್ಯೂಸ್: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಜೂ.16ರಂದು ನೇಮಕಗೊಂಡಿದ್ದಾರೆ. ಇವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದು, ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿಗಳ ಪುತ್ರರಾಗಿದ್ದಾರೆ. ಹಿಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ ಇದೇ ದೇವಸ್ಥಾನದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು

ತಿರುವನಂತಪುರಂ ಅನಂತ ಪದ್ಮನಾಭ ದೇವಾಲಯದ ಮುಖ್ಯ ಅರ್ಚಕರಾಗಿ ಕನ್ನಡಿಗ ನೇಮಕ| ಬೆಳ್ತಂಗಡಿಯ ಕೊಕ್ಕಡ ಗ್ರಾಮದ ನಾಗೇಶರಿಗೆ ಒಲಿದ ಭಾಗ್ಯ Read More »

ರಾಜ್ಯದಲ್ಲಿ ಬಾಕಿ ಉಳಿದ ರೈಲ್ವೆ ಯೋಜನೆಗಳು ಎರಡೇ ವರ್ಷದಲ್ಲಿ ಪೂರ್ಣ; ಕೇಂದ್ರ ಸಚಿವ ವಿ.ಸೋಮಣ್ಣ

ಸಮಗ್ರ ನ್ಯೂಸ್: ರಾಜ್ಯದಲ್ಲಿ 30 ವರ್ಷದಿಂದ ಬಾಕಿ ಉಳಿದ 9 ರೈಲ್ವೆ ಯೋಜನೆಗಳನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಂಪರ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ವಿಳಂಬವಾಗಿರುವ ಸುಮಾರು 1264 ಕಿಲೋ ಮೀಟರ್ ಒಳಗೊಂಡ 9 ರೈಲ್ವೆ ಯೋಜನೆ 2025 -26ರ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ತುಮಕೂರು -ಕಲ್ಯಾಣದುರ್ಗ – ರಾಯದುರ್ಗ, ತುಮಕೂರು -ಚಿತ್ರದುರ್ಗ -ದಾವಣಗೆರೆ, ಗಿಣಿಗೇರಾ -ರಾಯಚೂರು, ಬಾಗಲಕೋಟ -ಕುಡಚಿ, ಗದಗ -ವಾಡಿ, ಕಡೂರು -ಚಿಕ್ಕಮಗಳೂರು,

ರಾಜ್ಯದಲ್ಲಿ ಬಾಕಿ ಉಳಿದ ರೈಲ್ವೆ ಯೋಜನೆಗಳು ಎರಡೇ ವರ್ಷದಲ್ಲಿ ಪೂರ್ಣ; ಕೇಂದ್ರ ಸಚಿವ ವಿ.ಸೋಮಣ್ಣ Read More »

ಉದ್ಯೋಗ ಸಮಾಚಾರ| ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಹಲವು ಹುದ್ದೆಗಳು| ಜೂ.24 ಅರ್ಜಿ ಸಲ್ಲಿಕೆಗೆ ಕೊನೆದಿನ

ಸಮಗ್ರ ನ್ಯೂಸ್: ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ 586 ಆಫೀಸ್ ಅಸಿಸ್ಟೆಂಟ್​, ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 27, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್‌ ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ. ಯಾವ್ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಹುದ್ದೆಗಳಿಗೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕ

ಉದ್ಯೋಗ ಸಮಾಚಾರ| ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಹಲವು ಹುದ್ದೆಗಳು| ಜೂ.24 ಅರ್ಜಿ ಸಲ್ಲಿಕೆಗೆ ಕೊನೆದಿನ Read More »