June 2024

ಸಂಪಾಜೆಯಲ್ಲಿ ಭೀಕರ ಕಾರು ಅಪಘಾತ| ಮಂಡ್ಯ ಮೂಲದ‌ ಯುವಕರು ಗಂಭೀರ

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಡಗು ಸಂಪಾಜೆಯ ಬಳಿ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದ ಮಂಡ್ಯ ಮೂಲದ ಯುವಕರು ಗಂಭೀರ ಗಾಯಗೊಂಡಿದ್ದಾರೆ. ಮಂಡ್ಯ ಮೂಲದ ನಾಲ್ವರು ಫೋಟೋ ಗ್ರಾಫರ್ಸ್ ಹೊನ್ನಾವರಕ್ಕೆ ಹೋಗಿ ತಮ್ಮ ಕೆಲಸ ಮುಗಿಸಿ ವಾಪಸ್‌ ಮಂಡ್ಯಕ್ಕೆ ಹೊರಟಿದ್ದರು. ರಾತ್ರಿ ಮೂರು ಗಂಟೆಯ ವೇಳೆಗೆ ಸಂಪಾಜೆ ಗೇಟಿನಿಂದ ಸ್ವಲ್ಪ ದೂರದಲ್ಲಿ ನಿಯಂತ್ರಣ ತಪ್ಪಿದ ವೋಕ್ಸ್‌ವ್ಯಾಗನ್ ಕಾರು ರಸ್ತೆಯ ರಕ್ಷಣಾ ಗೋಡೆಗೆ […]

ಸಂಪಾಜೆಯಲ್ಲಿ ಭೀಕರ ಕಾರು ಅಪಘಾತ| ಮಂಡ್ಯ ಮೂಲದ‌ ಯುವಕರು ಗಂಭೀರ Read More »

ಪರೀಕ್ಷಾ ಅಕ್ರಮ/ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಹಾ ನಿರ್ದೇಶಕರ‌ ವಜಾ

ಸಮಗ್ರ ನ್ಯೂಸ್: ನೀಟ್-ಯುಜಿ ಪರೀಕ್ಷೆಯ ಅಕ್ರಮ ಆರೋಪ ಮತ್ತು ಯುಜಿಸಿ-ನೆಟ್ ಪರೀಕ್ಷೆ ಮುಂದೂಡಿಕೆ, ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳ ವಿವಾದಗಳ ನಡುವೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಹಾನಿರ್ದೇಶಕರನ್ನು ವಜಾಗೊಳಿಸಲಾಗಿದೆ. ನೀಟ್-ಯುಜಿ ಪರೀಕ್ಷೆಯ ಅಕ್ರಮ ಮತ್ತು ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡುವುದರ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ಪರೀಕ್ಷೆಯಲ್ಲಿ ನಕಲು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳೂ ಆಕ್ರೋಶ ವ್ಯಕ್ತಪಡಿಸಿವೆ. ಎನ್‌ಟಿಎಯ ಮಹಾನಿರ್ದೇಶಕರಾಗಿದ್ದ ಸುಬೋದ್ ಕುಮಾ‌ರ್ ಸಿಂಗ್‌ ಅವರನ್ನು ತೆಗೆದುಹಾಕಲಾಗಿದೆ ಮತ್ತು ಅವರ ಉತ್ತರಾಧಿಕಾರಿಯಾಗಿ ಮಾಜಿ ಐಎಎಸ್ ಅಧಿಕಾರಿ

ಪರೀಕ್ಷಾ ಅಕ್ರಮ/ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಹಾ ನಿರ್ದೇಶಕರ‌ ವಜಾ Read More »

ಜಿ ಎಸ್ ಟಿ ಕೌನ್ಸಿಲ್ ಸಭೆ/ ಹಲವು ಸೇವೆಗಳಿಗೆ ಜಿ ಎಸ್ ಟಿ ವಿನಾಯಿತಿ

ಸಮಗ್ರ ನ್ಯೂಸ್: ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಿತು. ಭಾರತೀಯ ರೈಲ್ವೆಯು ಸಾಮಾನ್ಯ ಜನರಿಗೆ ಒದಗಿಸುವ ಸೇವೆಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟ, ಕೊಠಡಿಗಳ ಸೌಲಭ್ಯ, ಕ್ಲೋಕ್‌ರೂಮ್ ಸೇವೆಗಳು ಹಾಗೂ ಬ್ಯಾಟರಿ ಚಾಲಿತ ಕಾರು ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಘೋಷಿಸಲಾಯಿತು. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರದ ಉದ್ದೇಶ ಸ್ಪಷ್ಟವಾಗಿದೆ. ಇಂಧನದ ಮೇಲಿನ ಜಿಎಸ್‌ಟಿ ದರವನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಟ್ಟಿದೆ

ಜಿ ಎಸ್ ಟಿ ಕೌನ್ಸಿಲ್ ಸಭೆ/ ಹಲವು ಸೇವೆಗಳಿಗೆ ಜಿ ಎಸ್ ಟಿ ವಿನಾಯಿತಿ Read More »

ಹಾಸನ: ಸಲಿಂಗ ರತಿ ಆರೋಪ| ಎಂಎಲ್ ಸಿ ಸೂರಜ್‌ ರೇವಣ್ಣ ಅರೆಸ್ಟ್!?

ಸಮಗ್ರ ನ್ಯೂಸ್: ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಹಾಸನ ಸೆನ್‌ ಪೊಲೀಸ್‌ ಠಾಣೆಯ ಪೊಲೀಸರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರ ಎಂಎಲ್‌ ಸಿ ಸೂರಜ್‌ ರೇವಣ್ಣರನ್ನು ಅರೆಸ್ಟ್‌ ಮಾಡಲಾಗಿದೆ ಎನ್ನಲಾಗಿದೆ. ನಿನ್ನೆ ಹಾಸನದ ಸೆನ್‌ ಪೊಲೀಸ್‌ ಠಾಣೆಗೆ ಕರೆತಂದಿದ್ದ ಪೊಲೀಸರು ಇಂದು ಮುಂಜಾನೆ ನಾಲ್ಕು ಗಂಟೆಯವರೆಗೂ ಸುಧೀರ್ಘ ವಿಚಾರಣೆ ನಡೆಸಿದ್ದಾರೆ. ಸೂರಜ್‌ ರೇವಣ್ಣ ಆಪ್ತ ಶಿವಕುಮಾರ್‌ ನೀಡಿದ್ದ ತಾಂತ್ರಿಕ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಸಂತ್ರಸ್ತ ಯುವಕ ಹಣಕ್ಕಾಗಿ ಬ್ಲ್ಯಾಕ್‌‌ಮೇಲ್‌ ಮಾಡಿದ ಸಂಬಂಧದ ಆಡಿಯೋ ಗಳನ್ನು

ಹಾಸನ: ಸಲಿಂಗ ರತಿ ಆರೋಪ| ಎಂಎಲ್ ಸಿ ಸೂರಜ್‌ ರೇವಣ್ಣ ಅರೆಸ್ಟ್!? Read More »

ಹವಾಮಾನ ವರದಿ| ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ| ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಮುಂದಿನ ಮೂರು ದಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಅತೀ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇಂದು(ಜೂ.23)ರ ಭಾನುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ 20 ಸೆಂ.ಮೀ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.ಉಳಿದಂತೆ ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗೆ ‘ಆರೆಂಜ್ ಅಲರ್ಟ್’, ಮೈಸೂರು, ಬೀದರ್ ಕಲಬುರಗಿ ಜಿಲ್ಲೆಗೆ ‘ಯಲ್ಲೋ ಅಲರ್ಟ್’

ಹವಾಮಾನ ವರದಿ| ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ| ರೆಡ್ ಅಲರ್ಟ್ ಘೋಷಣೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ರಾಶಿಗಳ ಗೋಚಾರಫಲ ತಿಳಿಯುವುದು‌ ದಿನಚರಿಗಳನ್ನು‌ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ವಾರ ದ್ವಾದಶ ರಾಶಿಗಳ ಗೋಚಾರಫಲ ಏನು? ಯಾರಿಗೆ ಲಾಭ? ಯಾರಿಗೆ ಶುಭ? ತಿಳಿಯೋಣ… ಮೇಷ ರಾಶಿ:ಈ ವಾರ ನಿಮಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ ಹೆಚ್ಚಿನ ಆರ್ಥಿಕ ಲಾಭ ಪಡೆಯುತ್ತೀರಿ, ಸಾಲ ತೀರಿಸಲು ಸಾಧ್ಯವಾಗುವುದು, ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗದಂತೆ ಜಾಗ್ರತೆವಹಿಸಿ. ಅನಗ್ಯತ ಒತ್ತಡ ಬೇಡ, ಸಮಯ ಬಂದಾಗ ಎಲ್ಲವೂ ಸರಿಯಾಗಲಿದೆ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ. ವೃಷಭ ರಾಶಿ:ವೃಷಭ ರಾಶಿಯವರು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಕಾರ್ಕಳ: ಪರಶುರಾಮ ಮೂರ್ತಿ ಸ್ಥಾಪನೆಯಲ್ಲಿ ವಂಚನೆ ಆರೋಪ| ಪೊಲೀಸ್ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಮೂರ್ತಿ ಬದಲು ಪರಶುರಾಮನ ನಕಲಿ ಮೂರ್ತಿಯನ್ನು ಸ್ಥಾಪಿಸಿ ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಕೃಷ್ಣ ಎಂಬಾತ ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1,25,50,000 ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ನಂತರ ಆರೋಪಿ

ಕಾರ್ಕಳ: ಪರಶುರಾಮ ಮೂರ್ತಿ ಸ್ಥಾಪನೆಯಲ್ಲಿ ವಂಚನೆ ಆರೋಪ| ಪೊಲೀಸ್ ಪ್ರಕರಣ ದಾಖಲು Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಸೇರಿದಂತೆ ನಾಲ್ಕು‌ ಮಂದಿ ಪರಪ್ಪನ ಅಗ್ರಹಾರ ಜೈಲಿಗೆ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಸೇರಿದಂತೆ 4 ಆರೋಪಿಗಳು ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ. ದರ್ಶನ್ ಸೇರಿದಂತೆ ಉಳಿದ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿ ಅಂತ್ಯವಾದ ಹಿನ್ನೆಲೆ ಇಂದು 5ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ದರ್ಶನ್ ಸೇರಿದಂತೆ ಒಟ್ಟು 4 ಆರೋಪಿಗಳಿಗೆ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ಅದರಂತೆ ಎರಡನೇ ಬಾರಿಗೆ ನಟ ದರ್ಶನ್ ಜೈಲು ಪಾಲಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಸೇರಿದಂತೆ ನಾಲ್ಕು‌ ಮಂದಿ ಪರಪ್ಪನ ಅಗ್ರಹಾರ ಜೈಲಿಗೆ Read More »

ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ/ ಪ್ರಚಾರಕ್ಕೆ ಬರಲಿದ್ದಾರೆ ಮಮತಾ ಬ್ಯಾನರ್ಜಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣಾ ಪೂರ್ವ ಹೋರಾಟದ ನಂತರ ತೃಣಮೂಲ ಕಾಂಗ್ರೆಸ್ ಮತ್ತು I.N.D.I.A ಬಣಗಳ ನಡುವಿನ ಸಂಬಂಧವು ಸುಧಾರಿಸುತ್ತಿದೆ ಎಂಬ ಸಂಕೇತವಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಪ್ರಚಾರ ಮಾಡುವ ಸಾಧ್ಯತೆಯಿದೆ. ರಾಹುಲ್ ಗಾಂಧಿ ಗೆದ್ದ ಕೇರಳದ ಸೀಟಿನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಮತ್ತು ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ

ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ/ ಪ್ರಚಾರಕ್ಕೆ ಬರಲಿದ್ದಾರೆ ಮಮತಾ ಬ್ಯಾನರ್ಜಿ Read More »

ಒಂದೇ ಮಳೆಗೆ ಬಿರುಕು ಬಿಟ್ಟ ನೂತನ ಅಟಲ್ ಸೇತುವೆ| ಬಹುಕೋಟಿ ವೆಚ್ಚದ ಸೇತುವೆ ಕಾಮಗಾರಿ ಕಳಪೆ

ಸಮಗ್ರ ನ್ಯೂಸ್: ವರ್ಷಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ನವಿ ಮುಂಬೈನ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಸೇವಾ ಅಟಲ್ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಇಂದು ಸೇತುವೆಯಲ್ಲಿ ಕಾಣಿಸಿಕೊಂಡಿರುವ ಬಿರುಕುಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಸೇವ್ರಿ ನ್ಹವಾ ಶೇವಾ ಅಟಲ್ ಸೇತು, ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. 21.8 ಕಿಮೀ ಉದ್ದದ ಸೇತುವೆಯ 16.5 ಕಿಮೀ ಭಾಗ ಸಮುದ್ರದ ಮೇಲೆ ಇದೆ.

ಒಂದೇ ಮಳೆಗೆ ಬಿರುಕು ಬಿಟ್ಟ ನೂತನ ಅಟಲ್ ಸೇತುವೆ| ಬಹುಕೋಟಿ ವೆಚ್ಚದ ಸೇತುವೆ ಕಾಮಗಾರಿ ಕಳಪೆ Read More »