Ad Widget .

ರಾಶಿಭವಿಷ್ಯ; ದ್ವಾದಶ ರಾಶಿಗಳ ಗೋಚಾರಫಲ

ಸಮಗ್ರ ನ್ಯೂಸ್: ನಿತ್ಯ ಜೀವನದಲ್ಲಿ ರಾಶಿಫಲಗಳು ಪ್ರಭಾವ ಬೀರುತ್ತವೆ. ರಾಶಿಗಳ ಚಲನೆ, ಗ್ರಹಗಳ ಪರಿಣಾಮದಿಂದ ಮನುಷ್ಯನ ಆಗುಹೋಗುಗಳು ನಿರ್ಧಾರವಾಗುತ್ತದೆ ‌ಎಂಬುದು ಜ್ಯೋತಿಷ್ಯ ಶಾಸ್ತ್ರದ ‌ನಂಬಿಕೆ. ಈ ಹಿನ್ನೆಲೆಯಲ್ಲಿ ಈ ವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಇಲ್ಲಿ ನೀಡಲಾಗಿದೆ.

Ad Widget . Ad Widget .

ಮೇಷರಾಶಿ:
ಈ ವಾರ ನಿಮಗೆ ಸರ್ಕಾರಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಿರಬಹುದು, ಇನ್ನು ನೀವು ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡುವ ತಪ್ಪನ್ನು ಮಾಡಬೇಡಿ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ಆರೋಗ್ಯದ ಮೇಲೆ ಗಮನವಿರಲಿ.

Ad Widget . Ad Widget .

ವೃಷಭ ರಾಶಿ:
ಉದ್ಯೋಗಿಗಳಿಗೆ ಈ ವಾರ ಬಹಳ ಶುಭಕರವಾಗಿರುತ್ತದೆ. ಕುಟುಂಬ ಜೀವನದಲ್ಲಿ ಪ್ರೀತಿ ಹಾಗೂ ಸಾಮರಸ್ಯ ಇರಲಿದೆ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಯಾವುದೇ ದುಬಾರಿ ವಸ್ತುವನ್ನು ಖರೀದಿಸಲು ಬಯಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮಾಸೆ ನೆರವೇರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ.

ಮಿಥುನ ರಾಶಿ:
ವಾರದ ಆರಂಭ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಆದರೆ ನಂತರದಲ್ಲಿ ಎಲ್ಲವೂ ಸರಿ ಹೋಗುವುದು, ಕುಟುಂಬ ಜೀವನ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.

ಕರ್ಕ ರಾಶಿ:
ವ್ಯಾಪಾರಿಗಳು ಜಾಗ್ರತೆವಹಿಸಬೇಕು, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಪಾಲುದಾರರೊಂದಿಗೆ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಿ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಈ ಏಳು ದಿನಗಳು ನಿಮ್ಮ ಸಂಗಾತಿಯೊಂದಿಗೆ ಬಹಳ ವಿಶೇಷವಾಗಿರುತ್ತವೆ. ಅರ್ಥಿಕವಾಗಿ ಚೆನ್ನಾಗಿರಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಸಿಂಹ ರಾಶಿ:
ಕೆಲಸದಲ್ಲಿ ಈ ವಾರ ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ನಿರ್ಲಕ್ಷ್ಯದಿಂದ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರೆ ಈ ವಾರ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ದಂಪತಿಗಳು ತಮ್ಮ ಸಂಬಂಧದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯದ ಕಡೆಯೂ ಗಮನಹರಿಸಿ.

ಕನ್ಯಾ ರಾಶಿ:
ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಸಿಗಲಿದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಯಾವುದೇ ರೀತಿಯ ಬದಲಾವಣೆಯನ್ನು ತರಲು ಯೋಜಿಸುತ್ತಿದ್ದರೆ ನಂತರ ನೀವು ಅದನ್ನು ಮರುಚಿಂತನೆ ಮಾಡಬೇಕಾಗುತ್ತದೆ.ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರ. ವೃತ್ತಿ ಸಂಬಂಧಿತ ಯಾವುದೇ ಸಮಸ್ಯೆಯನ್ನು ಪರಿಹರಿಸುವಲ್ಲಿ ನಿಮ್ಮ ಹಿರಿಯರು ಮತ್ತು ಶಿಕ್ಷಕರ ಬೆಂಬಲವನ್ನು ನೀವು ಪಡೆಯುತ್ತೀರಿ. ಹಣದ ವಿಷಯದಲ್ಲಿ ಈ ವಾರ ನಿಮಗೆ ಸಾಮಾನ್ಯವಾಗಿರುತ್ತದೆ. ಹೆಚ್ಚು ಖರ್ಚು ಮಾಡಲು ಹೋಗಬೇಡಿ.

ತುಲಾ ರಾಶಿ:
ಈ ವಾರ ನಿಮಗೆ ನಿಮಗೆ ಉತ್ತಮವಾಗಿದೆ, ನೀವು ಯಶಸ್ಸನ್ನು ಪಡೆಯಬಹುದು. ಅವಧಿಯಲ್ಲಿ, ನಿಮ್ಮ ಯಾವುದೇ ಕೆಲಸವನ್ನು ನಾಳೆಗೆ ಮುಂದೂಡುವುದನ್ನು ತಪ್ಪಿಸಿ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಅನಗ್ಯತ ವಿಷಯಗಳಿಂದ ದೂರವಿರಿ. ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು.

ವೃಶ್ಚಿಕ ರಾಶಿ:
ಈ ವಾರ ಉದ್ಯಮಿಗಳಿಗೆ ಕಾರ್ಯನಿರತವಾಗಿದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಅಧಿಕವಿರಲಿದೆ. ಹೀಗಾಗಿ ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಲು ಕಷ್ಟವಾಗಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಬೇಡ.

ಧನು ರಾಶಿ:
ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರಲಿದೆ. ಉದ್ಯಮಿಗಳು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.

ಮಕರ ರಾಶಿ:
ಈ ರಾಶಿಯ ಉದ್ಯಮಿಗಳಿಗೆ ಈ ವಾರವು ತುಂಬಾ ಚೆನ್ನಾಗಿರಲಿದೆ. ಉದ್ಯೋಗಿಗಳಿಗೆ ಇದು ಬದಲಾವಣೆಯ ಸಮಯ. ಬೇರೆ ಕಡೆ ಕೆಲಸ ಹುಡುಕುತ್ತಿದ್ದರೆ ಈ ಅವಧಿ ಅನುಕೂಲಕವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.

ಕುಂಭ ರಾಶಿ:
ಈ ವಾರ ನಿಮಗೆ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿರುತ್ತೀರಿ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪ್ರಯತ್ನವು ಯಶಸ್ವಿಯಾಗಬಹುದು, ಆದರೆ ನೀವು ಧನಾತ್ಮಕವಾಗಿರಬೇಕು. ನಿಮ್ಮ ಆರ್ಥಿಕ ಸ್ಥಿತಿಯು ಕುಸಿಯಬಹುದು. ಸರಿಯಾದ ಹಣಕಾಸು ಯೋಜನೆಯ ಪ್ರಕಾರ ನೀವು ಮುಂದುವರಿಯಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಆರೋಗ್ಯದ ಕಡೆಗೆ ಗಮನಹರಿಸಬೇಕು.

ಮೀನ ರಾಶಿ:
ಹೆಚ್ಚು ಕೆಲಸ ಇರಲಿದೆ, ನೀವು ಅನಗತ್ಯ ಜಗಳಗಳನ್ನು ಹೊಂದಿರಬಹುದು. ಉದ್ಯಮಿ ದೊಡ್ಡ ಹಣಕಾಸಿನ ವಹಿವಾಟು ಮಾಡಲು ಹೋದರೆ, ಕೆಲವು ಕಾರಣಗಳಿಂದ ಕೆಲಸವು ಸ್ಥಗಿತಗೊಳ್ಳಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಪಾಲುದಾರರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಸಕಾರಾತ್ಮಕವಾಗಿರಿ ಮತ್ತು ಒಳ್ಳೆಯದನ್ನು ಯೋಚಿಸಿ.

Leave a Comment

Your email address will not be published. Required fields are marked *