Ad Widget .

ಪುತ್ತೂರು: ಪ್ರಿಡ್ಜ್ ಸ್ಪೋಟಗೊಂಡು‌ ಮನೆ ಹೊತ್ತಿ‌ ಉರಿದರೂ ಹಾನಿಯಾಗದ ಕಲ್ಲುರ್ಟಿ‌ ದೈವದ ಪೀಠ| ತುಳುನಾಡಿನಲ್ಲಿ ‌ಮತ್ತೆ ಅನಾವರಣಗೊಂಡ ದೈವಲೀಲೆ

ಸಮಗ್ರ ನ್ಯೂಸ್: ಪುತ್ತೂರಿನ ಮನೆಯೊಂದರಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡು ಮನೆ ಹೊತ್ತಿ ಉರಿದಿದೆ. ಆದರೆ ಪವಾಡವೆಂಬಂತೆ ಕಲ್ಲುರ್ಟಿ ದೈವದ ಪೀಠವು ಕಿಂಚಿತ್ತೂ ಹಾನಿಗೊಂಡಿಲ್ಲ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತುಳುನಾಡಿನ ದೈವದ ಶಕ್ತಿ ಕಂಡು ಬೆರಗಾಗಿದ್ದಾರೆ.

Ad Widget . Ad Widget .

ದೈವಾರಾಧನೆ ತುಳುನಾಡಿನ ಕಲೆ ಸಂಸ್ಕೃತಿ, ಬದುಕಿನ ಭಾಗವಾಗಿರದೇ ನಂಬಿಕೆ ಹಾಗೂ ಶಕ್ತಿಯ ಮೂಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ದೇವರಿಗೆ ಎಷ್ಟು ಪ್ರಾಮುಖ್ಯತೆವಿದೆಯೋ ಅಷ್ಟೇ ಪ್ರಾಮುಖ್ಯತೆ ದೈವಗಳಿಗಿದೆ. ಕಷ್ಟದ ಕಾಲದಲ್ಲಿ ನಂಬಿದ ದೈವ ಕೈ ಬಿಡೋದಿಲ್ಲ ಎಂದು ನಂಬಿಕೊಂಡು ಬಂದಿರುವ ಇಲ್ಲಿನ ಜನರ ನಂಬಿಕೆಯು ಹುಸಿಯಾಗಿಲ್ಲ. ದೈವ- ದೇವರ ಮೇಲಿನ ನಂಬಿಕೆಯೇ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಅಗೋಚರ ಶಕ್ತಿಯೂ ತನ್ನ ಇರುವಿಕೆಯನ್ನು ತೋರಿಸಿಕೊಟ್ಟಿದೆ.

Ad Widget . Ad Widget .

ವೈರಲ್ ಆಗಿರುವ ವಿಡಿಯೋದಲ್ಲಿ ಪುತ್ತೂರಿನ ಜಿಡೆಕಲ್ಲು ಕಾಲೇಜು ಬಳಿ ಮನೆಯೊಂದರಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿ, ಮನೆ ಸುಟ್ಟು ಕರಕಲಾಗಿದ್ದರೂ ಕಲ್ಲುರ್ಟಿ ದೈವದ ಪೀಠಕ್ಕೆ ಮಾತ್ರ ಏನು ಆಗದೇ ಇರುವುದು ನಿಜಕ್ಕೂ ಅಚ್ಚರಿ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಪುತ್ತೂರಿನ ಜಿಡೆಕಲ್ಲು ಸರ್ಕಾರಿ ಕಾಲೇಜಿನ ಸಮೀಪದ ಮನೆಯೊಂದರಲ್ಲಿ ಮನೆಯ ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಮನೆಗೆ ಬೆಂಕಿ ತಗುಲಿತ್ತು. ಆ ತಕ್ಷಣವೇ ಕಾಲೇಜಿನ ವಿದ್ಯಾರ್ಥಿಗಳಾದ ಎಡ್ವರ್ಡ್, ವಿಖ್ಯಾತ್ ಮತ್ತು ಪ್ರೀತೇಶ್ ಸೇರಿ ಸ್ಥಳೀಯರಾದ ಅಶೋಕ್ ಅವರ ಸಹಾಯದಿಂದ ಮನೆಯೊಳಗೆ ಧಾವಿಸಿ ನೀರು ಹಾಕಿ ಬೆಂಕಿ ನಂದಿಸಿದ್ದರು. ಆ ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮನೆಯು ಸಂಪೂರ್ಣ ಸುಟ್ಟು ಹೋಗಿದ್ದರೂ, ಕಲ್ಲುರ್ಟಿ ದೈವದ ಮಂಚಕ್ಕೆ ಕಿಂಚಿತ್ತೂ ಬೆಂಕಿಯೂ ತಗಲಿಲ್ಲ. ಇದೀಗ ಮತ್ತೊಮ್ಮೆ ತುಳುನಾಡಿನ ದೈವ ಕಲ್ಲುರ್ಟಿ ತನ್ನ ಕಾರ್ಣಿಕವನ್ನು ತೋರಿಸಿಕೊಟ್ಟಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ದೈವದ ಶಕ್ತಿಗೆ ತಲೆ ಬಾಗಿದ್ದಾರೆ.

Leave a Comment

Your email address will not be published. Required fields are marked *