ಬೆಳ್ತಂಗಡಿ: ಮಹಿಳೆಯ ಅಂಗಡಿಗೆ ನುಗ್ಗಿ‌ ಹಲ್ಲೆ| ಶಾಸಕ‌ ಹರೀಶ್ ಪೂಂಜಾ ಆಪ್ತ ಅರೆಸ್ಟ್

ಸಮಗ್ರ ನ್ಯೂಸ್: ಟೈಲರಿಂಗ್ ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಗಳು ಎಲ್ಲೆಡೆ ವೈರಲ್ ಆದ ಬಳಿಕ ಬೆಳ್ತಂಗಡಿ ಶಾಸಕರ ಆಪ್ತ, ಆರೆಸ್ಸೆಸ್ ಕಾರ್ಯಕರ್ತ ನವೀನ್ ಕನ್ಯಾಡಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

Ad Widget ... ..

ನವೀನ್ ಮತ್ತು ಟೈಲರಿಂಗ್ ನಡೆಸುವ ಮಹಿಳೆಯ ನಡುವೆ ಹಣಕಾಸಿನ ವ್ಯವಹಾರವೂ ಇದ್ದು, ಸಾಲ ಮರುಪಾವತಿಗೆ ಪಟ್ಟು ಹಿಡಿದುದಕ್ಕಾಗಿ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

Ad Widget

ಹಲ್ಲೆ ಪ್ರಕರಣ ನಡೆದು ಎರಡು ದಿನಗಳು ಕಳೆದಿದ್ದರೂ ಮಹಿಳೆ ಯಾವುದೇ ದೂರನ್ನು ದಾಖಲಿಸಿರಲಿಲ್ಲ. ಹಲ್ಲೆಯ ದೃಶ್ಯಗಳು ಬಹಿರಂಗಗೊಂಡ ಬಳಿಕ ಮಹಿಳೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ತನ್ನಿಂದ ಏಳು ಲಕ್ಷ ಹಣವನ್ನು ಪಡೆದು ನವೀನ್ ವಂಚಿಸಿದ್ದಾನೆ, ಹಣ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವೀನ್ ಕನ್ಯಾಡಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *