Ad Widget .

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್ ಮಿಸ್ತ್ರಿ ಆಯ್ಕೆ

ಸಮಗ್ರ ನ್ಯೂಸ್‌: ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ 1989ರ ಐಎಫ್‌ಎಸ್ ಬ್ಯಾಚ್ ಅಧಿಕಾರಿ ವಿಕ್ರಮ್ ಮಿಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ಅವರ ಅವಧಿಯು ಜುಲೈ 14ರಂದು ಮುಗಿಯುವ ಕಾರಣ ವಿಕ್ರಮ್ ಮಿಸ್ತ್ರಿ ಅವರನ್ನು ನೇಮಿಸಲಾಗಿದೆ. ಜುಲೈ 15ರಂದು ವಿಕ್ರಮ್ ಮಿಸ್ತ್ರಿ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿನಯ್ ಕ್ವಾಟ್ರಾ ಅವರ ಅಧಿಕಾರದ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲಾಗಿತ್ತು. ವಿನಯ್ ಕ್ವಾಟ್ರಾ ಅವರನ್ನು ಅಮೆರಿಕಕ್ಕೆ ಭಾರತದ ರಾಯಭಾರಿಯನ್ನಾಗಿ ನೇಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

Ad Widget . Ad Widget .

1964ರ ನವೆಂಬರ್ 7ರಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದ ವಿಕ್ರಮ್ ಮಿಸ್ತ್ರಿ ಅವರು ಇತಿಹಾಸ ವಿಷಯದಲ್ಲಿ ಪದವಿ ಮತ್ತು ಜಮ್‌ಶೆಡ್‌ಪುರದಲ್ಲಿ ಎಂಬಿಎ ಅಧ್ಯಯನ ಮಾಡಿದ್ದಾರೆ. ಇವರು ಮೂವರು ಪ್ರಧಾನಿಗಳಿಗೆ ಖಾಸಗಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನರೇಂದ್ರ ಮೋದಿ, ಮನಮೋಹನ್ ಸಿಂಗ್ ಹಾಗೂ ಐ.ಕೆ. ಗುಜ್ರಾಲ್ ಅವರಿಗೆ ಕಾರ್ಯದರ್ಶಿಯಾಗಿದ್ದರು. ಚೀನಾದ ಬೀಜಿಂಗ್‌ನಲ್ಲಿ ದೂತಾವಾಸ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ವಿಕ್ರಮ್ ಮಿಸ್ತ್ರಿ ಅವರು ಚೀನಾ ವಿಷಯಕ್ಕೆ ಸಂಬಂಧಿಸಿದಂತೆ ಪರಿಣತ ಎನಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *