ಬೆಂಗಳೂರಿನಲ್ಲಿ ಅಮಾನವೀಯ ಘಟನೆ: ಮೊಮ್ಮಗಳ ಮೇಲೆ ಕಾಮುಕ ತಾತನಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮೊಮ್ಮಗಳ ಮೇಲೆ ಕಾಮುಕ ತಾತ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget ... ..

ಬಾಲಕಿ ತಾಯಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಈ ಹೇಯ ಕೃತ್ಯ ನಡೆಸಿದ್ದಾನೆ. ಈ ಬಾಲಕಿಗೆ 6 ವರ್ಷ. ಲೈಂಗಿಕ ದೌರ್ಜನ್ಯ ನಡೆಸಿರುವುದು ಬಾಲಕಿ ತಾಯಿಗೆ ತಿಳಿಯುತ್ತಿದ್ದಂತೆ ಯಾರಿಗೂ ಹೇಳದಂತೆ ಆರೋಪಿಗಳು ಆಮಿಷವೊಡ್ಡಿದ್ದಾರೆ. ಮನೆಯನ್ನು ಮೊಮ್ಮಗಳ ಹೆಸರಿಗೆ ಬರೆಯುತ್ತೇವೆ. ಚಿನ್ನದ ಒಡವೆ ಕೊಡಿಸುತ್ತೇವೆ ಎಂದು ಆಸೆ ತೋರಿಸಿದ್ದಾರೆ. ಆದರೆ ಆರೋಪಿಗಳ ವಿರುದ್ಧ ತಿರುಗಿ ಬಿದ್ದಿರುವ ಸಂತ್ರಸ್ತೆಯ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ad Widget

ಇನ್ನೂ ಈ ಅಜ್ಜನ ಜತೆಗೆ ಅಜ್ಜಿ ಮತ್ತು ಅತ್ತೆ ಸಹ ಎಸ್ಕೇಪ್ ಆಗಿದ್ದಾರೆ. ಇವರೆಲ್ಲರೂ ಪರಾರಿ ಆಗಲು ಸಹಕರಿಸಿದ ಬಾಲಕಿಯ ತಂದೆಯನ್ನು ಬಂಧಿಸಲಾಗಿದೆ. ಬಾಲಕಿ ತಾಯಿ ನೀಡಿದ ದೂರಿನ ಮೇಲೆ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದ್ಯ ಅಸ್ವಸ್ಥಳಾಗಿರುವ ಬಾಲಕಿಯನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ

Leave a Comment

Your email address will not be published. Required fields are marked *