Ad Widget .

ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಜೊತೆ ಸೋನಲ್ ಮದುವೆ

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಮತ್ತೊಂದು ಜೋಡಿ ಮದುವೆ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಹೌದು ‘ರಾಬರ್ಟ್’ ನಿರ್ದೇಶಕ ತರುಣ್ ಸುಧೀರ್ ಜೊತೆ ಸೋನಲ್ ಹಸೆಮಣೆ ಏರಲಿದ್ದಾರೆ. ಈ ಕುರಿತು ತರುಣ್ ಸುಧೀರ್ ತಾಯಿ ಮಾಲತಿ ಖಚಿತಪಡಿಸಿದ್ದಾರೆ.

Ad Widget . Ad Widget .

ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್‌ ಕೂಡ ಆಗಾಗ ತರುಣ್‌ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್‌ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.

Ad Widget . Ad Widget .

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. ‘ಅಭಿಸಾರಿಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಇದೀಗ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗಿದೆ. ಆದರೆ ತರುಣ್‌ ಹಾಗೂ ಸೋನಲ್‌ ಈ ಬಗ್ಗೆ ಯಾವುದೇ ಮಾಹಿತಿ ತಿಳಿಸಿಲ್ಲ.

Leave a Comment

Your email address will not be published. Required fields are marked *