Ad Widget .

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್| ಬೆಳೆವಿಮೆ ನೋಂದಣಿ ವಿಮಾಕಂತು ಪಾವತಿಗೆ ದಿನ ನಿಗದಿ| ಯಾವಾಗ ಕೊನೆ ದಿನ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ವಿಮಾ ಕಂಪನಿ ಜೊತೆ ಒಪ್ಪಂದ ರೂಪುಗೊಂಡಿದ್ದು, ವಿಮಾಕಂತು ಪಾವತಿಗೆ ಜು.31ನ್ನು ಕೊನೆ ದಿನ‌ ಎಂದು ನಿಗದಿಗೊಳಿಸಲಾಗಿದೆ.

Ad Widget . Ad Widget .

ಬೆಳೆವಿಮೆಯಿಂದ ಅಡಿಕೆ, ಕಾಳುಮೆಣಸು ‌ಬೆಳೆಗಳನ್ನು ಹೊರಗಿಡಲಾಗಿದ್ದು, ಇದರಿಂದ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಕೃಷಿಕರಿಗೆ ತೊಂದರೆಯಾಗಿತ್ತು. ಕಂಪನಿ ಜೊತೆ ಒಪ್ಪಂದ ಕೈಗೂಡದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿತ್ತು. ಇದೀಗ ಒಪ್ಪಂದಕ್ಕೆ ಟಾಟಾ ಎಐಜಿ ಸಂಸ್ಥೆ ಒಪ್ಪಿಕೊಂಡಿದೆ.

Ad Widget . Ad Widget .

ದ.ಕ‌ ಜಿಲ್ಲೆಗೆ ಅನ್ವಯವಾಗುವಂತೆ ಅಡಿಕೆ‌ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮಾ ಆಧಾರಿತ ಪ್ರೀಮಿಯಂ ಪಾವತಿಗೆ 2024ರ ಜು.31ನೇ ದಿನಾಂಕವನ್ನು ಕೊನೆದಿನವಾಗಿ ಘೋಷಿಸಿ, ಸಂಬಂಧಪಟ್ಟ ‌ಇಲಾಖೆಗಳು ರೈತರಿಂದ ಕಂತು ಪಾವತಿಸಲು ಪ್ರಕಟಣೆ ಹೊರಡಿಸಲಾಗಿದೆ.

Leave a Comment

Your email address will not be published. Required fields are marked *