Ad Widget .

ಸುಬ್ರಹ್ಮಣ್ಯ: 9/11A, ಬೆಳೆವಿಮೆ ಸಮಸ್ಯೆ ಪರಿಹರಿಸಲು ಡಿಸಿಎಂ ಗೆ ಮನವಿ

ಸಮಗ್ರ ನ್ಯೂಸ್: ಸಾರ್ವಜನಿಕರು ಹಾಗೂ ರೈತರು ಇದೀಗ 9/11A ಮಾಡಿಸಲು ಮೂಡಾ ಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿದ್ದು ಇದನ್ನು ಮತ್ತೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ತರಬೇಕೆಂದು ಹಾಗೂ ಹವಾಮಾನ ಆಧಾರಿತ ಬೆಲೆ ವಿಮೆ ಇನ್ನೂ ಆದೇಶ ಬರದೆ ಕೃಷಿಕರು ಕಂಗಾಲಾಗಿದ್ದು ಈ ಬಗ್ಗೆ ಕ್ರಮ ವಹಿಸುವಂತೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಸುಧಿರ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರನ್ನು ಭೇಟಿ ಆಗಿ ಮನವಿ ನೀಡಲಾಯಿತು

Ad Widget . Ad Widget .

ಇದಕ್ಕೆ ಸ್ಪಂದಿಸಿದ ಡಿಸಿಎಂ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 9/11 ಅನ್ನು ಮತ್ತೇ ಪಂಚಾಯತಿ ವ್ಯಾಪ್ತಿಗೆ ತರುವ ಬಗ್ಗೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು ಆದಷ್ಟು ಬೇಗ ಪಂಚಾಯತಿ ವ್ಯಾಪ್ತಿಯಲ್ಲಿ 9/11 ಅನ್ನು ನೀಡುವಂತೆ ಕ್ರಮ ವಹಿಸುವುದಾಗಿ ಹೇಳಿದರು. ಅಲ್ಲದೆ ಹವಮಾನ ಆಧಾರಿತ ಬೆಲೆ ವಿಮೆಗೆ ತಾಂತ್ರಿಕ ತೊಂದರೆಗಳು ಬಂದಿದ್ದು ತಾಂತ್ರಿಕ ತೊಂದರೆ ನಿವಾರಣೆ ಆದ ತಕ್ಷಣ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಕಾಂಗ್ರೆಸ್ ಮುಖಂಡರಾದ ಮಿಥ್‌ನ್ ರೈ, ಎಂಎಸ್ ಮಹಮ್ಮದ್ , ರಕ್ಷಿತ್ ಶಿವರಾಮ್, ಸುಧಿರ್ ಕುಮಾರ್ ಶೆಟ್ಟಿ ,ಪಿ ಸಿ ಜಯರಾಂ ಮಲ್ಲಿಕಾ ಪಕ್ಕಲ ಕಿರಣ ಬುಡ್ಲೆಗುತ್ತು ಪಿ ಪಿ ವರ್ಗೀಸ್ ಸರ್ವೋತ್ತಮ ಗೌಡ ಪ್ರದೀಪ್ ಕಳಿಗೆ ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *