ಸಮಗ್ರ ನ್ಯೂಸ್: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ವಿಮಾ ಕಂಪನಿ ಜೊತೆ ಒಪ್ಪಂದ ರೂಪುಗೊಂಡಿದ್ದು, ಶೀಘ್ರದಲ್ಲೇ ಪ್ರೀಮಿಯಂ ಪಾವತಿಗೆ ಆದೇಶ ಜಾರಿಯಾಗುವ ನಿರೀಕ್ಷೆಯಿದೆ.
ಬೆಳೆವಿಮೆಯಿಂದ ಅಡಿಕೆ, ಕಾಳುಮೆಣಸು ಬೆಳೆಗಳನ್ನು ಹೊರಗಿಡಲಾಗಿದ್ದು, ಇದರಿಂದ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಕೃಷಿಕರಿಗೆ ತೊಂದರೆಯಾಗಿತ್ತು. ಕಂಪನಿ ಜೊತೆ ಒಪ್ಪಂದ ಕೈಗೂಡದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿತ್ತು. ಇದೀಗ ಒಪ್ಪಂದಕ್ಕೆ ಟಾಟಾ ಎಐಜಿ ಸಂಸ್ಥೆ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ವಿಮಾ ಕಂತು ಪಾವತಿಸಲು ಆದೇಶವಾಗುವ ನಿರೀಕ್ಷೆಯಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಕಡಬ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ ಪಿ ವರ್ಗೀಸ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು, ಈಗಾಗಲೇ ಇನ್ಸುರೆನ್ಸ ಕಂಪನಿ ಪೈನಲ್ ಆಗಿದೆ ಮುಂದಿನ ವಾರದೊಳಗೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು.
ಇದೀಗ ಫಸಲ್ ಭೀಮಾ ಯೋಜನೆಯ ವೆಬ್ಸೈಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬಾಕಿ ಉಳಿದ ಜಿಲ್ಲೆಗಳಿಗೆ ಹವಾಮಾನ ಆಧಾರಿತ ಇನ್ಸುರೆನ್ಸ್ ಕಂಪನಿ ಒಪ್ಪಂದ ಆಗಿರುವ ಮಾಹಿತಿ ಹಾಕಲಾಗಿದೆ.
ಉಪಮುಖ್ಯಮಂತ್ರಿಗಳಿಗೆ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದ ನಿಯೋಗದಲ್ಲಿ ಸುಧಿರ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ ಪಿ ವರ್ಗೀಸ್, ಸರ್ವೋತ್ತಮ ಗೌಡ, ಅಶ್ರಪ್ ಶೇಡಿಗುಂಡಿ,ಅಭಿಲಾಷ್ ಪಿ ಕೆ, ಶರೀಫ್ ಎ ಎಸ್, ಪ್ರದೀಪ್ ಕಳಿಗೆ, ಹರೀಶ್ ಇಂಜಾಡಿ, ಪವನ್ ಸುಬ್ರಹ್ಮಣ್ಯ, ಶಿಮರಾಮ ರೈ, ವಿಮಲಾ ರಂಗಯ್ಯ ರವರು ಉಪಸ್ಥಿತಿ ಇದ್ದರು.