ಸಮಗ್ರ ನ್ಯೂಸ್: ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಸಲಿಂಗ ಕಾಮ ದೌರ್ಜನ್ಯದ ದೂರು ದಾಖಲಾಗಿದೆ. ಈ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
4 ದಿನಗಳ ಹಿಂದೆಯಷ್ಟೇ ಸೂರಜ್ ಪರವಾಗಿ ದೂರು ನೀಡಿದ್ದ ಶಿವಕುಮಾರ್ ಉಲ್ಟಾ ಹೊಡೆದಿದ್ದು, ಮೂರು ವರ್ಷದ ಹಿಂದೆ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆನರಸೀಪುರ ಠಾಣೆಗೆ ದೂರು ನೀಡಿದ್ದಾರೆ.
ಜೂನ್ 21ರಂದು ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ್ದ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದರು. ಇದೀಗ ಉಲ್ಟಾ ಹೊಡೆದಿದ್ದು ಮೂರು ವರ್ಷಗಳ ಹಿಂದೆ ತನ್ನ ಮೇಲೆಯೂ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಮೂಲಕ ಸೂರಜ್ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ.
‘ಸೀರೆ ಉಡ್ತಾರೆ, ಬಳೆ ತೊಡ್ತಾರೆ!’:
ಈ ನಡುವೆ ಮಾಧ್ಯಮವೊಂದಕ್ಕೆ ಹಾಸನದ ಸಂತ್ರಸ್ತ ಯುವಕರುಮಾತನಾಡಿದ್ದು, ‘ಅಮಾವಾಸ್ಯೆಗೆ ಬಳೆ ತೊಟ್ಟು,ಸೀರೆ ಉಡ್ತಾರೆ ಅಂತ ಇದೆ’ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. 2019 ರ ಚುನಾವಣೆ ಸಂದರ್ಭದಲ್ಲಿ ನಾನು ಅವರನ್ನ ಭೇಟಿ ಮಾಡಿದ್ದೆ. ಅರಕಲಗೂಡಿನಲ್ಲಿ ಜೆಡಿಎಸ್ ಕಾರ್ಯಕ್ರಮ ಜೋರಾಗಿ ಮಾಡಿದ್ದೇ. ಈ ವೇಳೆ ಕಾರ್ಯಕ್ರಮ ಚೆನ್ನಾಗಿ ಮಾಡಿದಿಯಾ ಅಂತ ನನ್ನ ಹೋಗಳಿ ನನ್ನ ನಂಬರ್ ಅವನ್ನ ಅವರೇ ತೆಗೆದಿಕೊಳ್ಳುತ್ತಾರೆ. ನಂತರ ಅವರ ವಿಸಿಟಿಂಗ್ ಕಾರ್ಡ್ ಕೊಡ್ತಾರೆ,ನಂತರ ಅವರು ನನ್ನ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದರು.
ಇನ್ನೂ ಸೂರಜ್ ರೇವಣ್ಣ ಎರಡು ತರ. ಅವರು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ , ಸೂರಜ್ ರೇವಣ್ಣ ಕಾಮುಕ, ಹೊರಗೆ ಒಂದು ಮುಖ, ಒಳಗೆ ಇನ್ನೊಂದು ಮುಖ. ನಾಲ್ಕು ವರ್ಷದಿಂದ ಎಲ್ಲೂ ಹೇಳಿಕೊಳ್ಳೋಕೆ ನನಗೆ ಆಗಿರಲಿಲ್ಲ, ಮನಸ್ಸಿನಲ್ಲಿ ಕಾಡುತ್ತಿತ್ತು.
ಒಂದು ದಿನ ನನ್ನ ಜೊತೆಗೆ ಸೂರಜ್ ರೇವಣ್ಣ ಬಂದು ನನ್ನ ಜೊತೆಗೆ ಮಾತ್ನಾಡುತ್ತಾ ನನ್ನ ಜೀವನ ಹೇಗೆ ಏನು ಅಂತ ಎಲ್ಲಾ ಕೇಳಿದ್ರು, ನಾನು ನನ್ನ ಕೆಲಸ, ಕುಟುಂಬದ ಬಗ್ಗೆ ಹೇಳಿದೆ. ಯಾವುದಕ್ಕೂ ಯೋಚನೆ ಮಾಡಬೇಡ ನಾನು ಇದ್ದೇನೆ ಎಂದು ಹೇಳಿ. ರೂಮ್ ಒಳಗೆ ಕರೆದುಕೊಂಡು ಹೋದ್ರು. ನಂತರ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನ್ ಆಯ್ತು ಅಂತ ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ವಿವರಿಸಿದ್ದಾರೆ.