Ad Widget .

ಮೊದಲ‌ ಮಳೆಯಲ್ಲೇ ತೋಯ್ದ ಬಾಲರಾಮ| ಸೋರುತ್ತಿದೆ ರಾಮಮಂದಿರ ಗರ್ಭಗುಡಿ!!

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ. ಆದ್ರೆ ಅದಾಗಲೇ ದೇವಸ್ಥಾನ ಮೇಲ್ಛಾವಣಿ ಸೋರುತ್ತಿದೆಯಂತೆ! ಹೀಗಂತ ದೇಗುಲದ ಅರ್ಚಕ ಸತ್ಯೇಂದ್ರ ದಾಸ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸದ್ಯ ಅಯೋಧ್ಯೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ರಾಮಮಂದಿರದ ಛಾವಣಿ ಸೋರುತ್ತಿದೆ ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿಕೆ ನೀಡಿದ್ದಾರೆ. ಗರ್ಭಗುಡಿಯ ಛಾವಣಿ ಮೂಲಕ ನೀರು ಒಳಗೆ ಬಂದಿದೆ. ಸುಸಜ್ಜಿತವಾಗಿಯೇ ದೇಗುಲ ಕಟ್ಟಿದ್ದರೂ ನೀರು ಸೋರುತ್ತಿದೆ ಎಂದು ಅರ್ಚಕರು ಹೇಳಿದ್ದಾರೆ..

Ad Widget . Ad Widget . Ad Widget .

ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ದೇಗುಲ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ, ಇನ್ನೂ ಮಂದಿರದ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ನಡೆಯುತ್ತಿರುವಾಗ ಸೋರುವುದು ಸಹಜ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ರಾಮಲಲ್ಲಾ ವಿಗ್ರಹದ ಮುಂಭಾಗದಲ್ಲಿ ಅರ್ಚಕರು ಕುಳಿತುಕೊಳ್ಳುವ ಸ್ಥಳದಲ್ಲಿ ಮಳೆ ನೀರು ಸೋರುತ್ತಿದೆ ಎಂದು ತಿಳಿದುಬಂದಿದೆ. ಎಂಜಿನಿಯರ್‌ಗಳು ಇದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *