ಪಟ್ಲಬೆಟ್ಟಕ್ಕೆ ತೆರಳಿದ್ದ ತಂಡದ ಮೇಲೆ ಸ್ಥಳೀಯರಿಂದ ಹಲ್ಲೆ; ದೂರು ದಾಖಲು

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಬಿಸಿಲೇ ಘಾಟ್‌ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟಕ್ಕೆ ತೆರಳಿದ್ದ ಮಂಗಳೂರಿನ ತಂಡದ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Ad Widget ... ..

ಹಲ್ಲೆಗೊಳಗಾದವರಲ್ಲಿ ಮಂಗಳೂರಿನ ಕೊಟ್ಟಾರದ ಯುವಕ ಈ ಬಗ್ಗೆ ಸಕಲೇಶಪುರ ತಾಲೂಕಿನ ಯಸಲೂರು ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

ಬೈಕ್‌ನಲ್ಲಿ ಬಂದಿರುವ ತಂಡದ ಜತೆ ಅಲ್ಲಿದ್ದ ವ್ಯಕ್ತಿಗಳು ಬೈಕ್‌ನಲ್ಲಿ ಹೋಗಬೇಡಿ ಎಂಬಿತ್ಯಾದಿ ವಾಗ್ವಾದನಡೆಸಿ ಹಲ್ಲೆ ನಡೆಸುತ್ತಿರುವುದು ವೀಡಿಯೋದ ಲ್ಲಿದೆ. ಘಟನೆ ಯಾವಾಗ ನಡೆದಿದೆ, ಯಾವ ಕಾರಣಕ್ಕೆ ನಡೆದಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Leave a Comment

Your email address will not be published. Required fields are marked *