Ad Widget .

ಸಂಸತ್ತಿನಲ್ಲಿ ಅನುರಣಿಸಿದ ತುಳು| ದೈವದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಚೌಟ

ಸಮಗ್ರ ನ್ಯೂಸ್: ದ.ಕ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿವ ಬ್ರಿಜೇಶ್ ಚೌಟರವರು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭೆಯಲ್ಲಿ ಸದಸ್ಯರಾಗಿ ಅವರು ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Ad Widget . Ad Widget .

18ನೇ ಸಂಸತ್ನಲ್ಲಿ ಮೊದಲ ಲೋಕಸಭೆ ಅಧಿವೇಶನ ಆರಂಭವಾಯಿತು. ಪದ್ದತಿಯಂತೆ ಎಲ್ಲಾ ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು. ಈ ವೇಳೆ ದಕ್ಷಿಣ ಕನ್ನಡ ಲೋಕಸಭೆ ಸದಸ್ಯರಾಗಿ ನೂತನವಾಗಿ ಆಯ್ಕೆಯಾಗಿರುವ ಬ್ರಿಜೇಶ್ ಚೌಟರವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Ad Widget . Ad Widget .

ಚೌಟರವರು ತುಳುನಾಡಿನ ಎಲ್ಲ ದೈವ ದೇವರುಗಳ ಹೆಸರಿನಲ್ಲಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣ ವಚನದದ ಕೊನೆಯಲ್ಲಿ “ಮಾತೆರೆಗ್ಲಾ ಸೋಲ್ಮೆಲು” (ಎಲ್ಲರಿಗೂ ಧನ್ಯವಾದಗಳು) ಎಂದು ತುಳುವಿನಲ್ಲಿ ಹೇಳುವ ಮೂಲಕ ತುಳು ಭಾಷೆಯ ಬಗೆಗಿನ ತನ್ನ ಪ್ರೇಮವನ್ನು ಪ್ರಕಟಪಡಿಸಿದರು. ಅವರು ಚುನಾವಣೆಯ ಸಂದರ್ಭ ನಾಮಪತ್ರ ಸಲ್ಲಿಕೆ ವೇಳೆ ನಡೆಸಿದ ಮೆರವಣಿಗೆಯಲ್ಲೂ ತುಳು ಧ್ವಜ, ತುಳು ಭಾಷೆಗೆ ಮಹತ್ವ ನೀಡಿದ್ದರು. ಇದೀಗ ಸಂಸತ್ತಿನಲ್ಲೂ ತುಳುವಲ್ಲಿ ಗುನುಗುನಿಸಿದ ಸಂಸದರ ತುಳು ಹೊಸ‌ ಭಾಷ್ಯ ಬರೆಯಿತು.

Leave a Comment

Your email address will not be published. Required fields are marked *