Ad Widget .

ಕಲ್ಲಿಕೋಟೆಯನ್ನು ‘ಸಾಹಿತ್ಯ ನಗರ’ ಎಂದು ಘೋಷಿಸಿದ ಯುನೆಸ್ಕೋ

ಸಮಗ್ರ ನ್ಯೂಸ್: ಯುನೆಸ್ಕೋದ ಸೃಜನಶೀಲ ನಗರಗಳ ಸಾಹಿತ್ಯ ವಿಭಾಗದಲ್ಲಿ, ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿರುವ ಕೇರಳದ ಉತ್ತರ ಭಾಗದಲ್ಲಿರುವ ಕಲ್ಲಿಕೋಟೆಯನ್ನು ‘ಸಾಹಿತ್ಯ ನಗರ’ ಎಂದು ಯುನೆಸ್ಕೋ ಅಧಿಕೃತವಾಗಿ ಘೋಷಿಸಿದೆ.

Ad Widget . Ad Widget .

ಇದರೊಂದಿಗೆ ಬರುವ ವರ್ಷದಿಂದ ಜ.23ರನ್ನು ಸಾಹಿತ್ಯ ನಗರದ ದಿನ ಎಂದು ಆಚರಿಸಲು ರಾಜ್ಯ ಸರ್ಕಾರ ಘೋಷಿಸಿದೆ.

Ad Widget . Ad Widget .

ಸಂಖ್ಯೆ, ಗುಣಮಟ್ಟ ಮತ್ತು ವೈವಿಧ್ಯಮಯ ಪುಸ್ತಕಗಳು ನಗರದಲ್ಲಿ ಪ್ರಕಟವಾಗುತ್ತಿರಬೇಕು. ಸ್ಥಳೀಯ ಮತ್ತು ವಿದೇಶಿ ಸಾಹಿತ್ಯಗಳ ಕುರಿತು ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮ ನಡೆಯುತ್ತಿರಬೇಕು. ಸಾಹಿತ್ಯ, ನಾಟಕ, ಕಾವ್ಯ ಮೊದಲಾದ ವಿಷಯಗಳಿಗೆ ನಗರದಲ್ಲಿ ಮನ್ನಣೆ ಸಿಗುತ್ತಿರಬೇಕು. ಸಾಹಿತ್ಯ ಬೆಳವಣಿಗೆಗೆ ಅನುಗುಣವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರಬೇಕು. ಇಂಥ ಬೆಳವಣಿಗೆಯಲ್ಲಿ ಪ್ರಕಾಶಕ ವಲಯ ಸಕ್ರಿಯವಾಗಿರಬೇಕು. ವಿದೇಶಿ ಸಾಹಿತ್ಯವನ್ನು ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕೆಲಸ ನಡೆಯುತ್ತಿರಬೇಕು. ಇಂಥ ಚಟುವಟಿಕೆಗೆ ಸಾಂಪ್ರದಾಯಿಕ ಮತ್ತು ಹೊಸ ಮಾಧ್ಯಮಗಳಲ್ಲಿ ಪ್ರೋತ್ಸಾಹ ಸಿಗುತ್ತಿರಬೇಕು. ಇಂಥ ಮಾನದಂಡ ಪೂರೈಸಿದ ನಗರಗಳಲ್ಲಿ ಯುನೆಸ್ಕೋ ಸಾಹಿತ್ಯ ನಗರ ಎಂದು ಘೋಷಿಸಲಾಗುತ್ತದೆ.

2004ರಲ್ಲಿ ಯುನೆಸ್ಕೋ ಇಂಥದ್ದೊಂದು ಯೋಜನೆ ಆರಂಭಿಸಿದ್ದು ಇದುವರೆಗೆ ವಿಶ್ವದ 6 ಖಂಡಗಳ, 39 ದೇಶಗಳ 55 ನಗರಗಳು ಈ ಸ್ಥಾನ ಪಡೆದಿವೆ. ಈವರೆಗೆ ಏಷ್ಯಾಖಂಡದಲ್ಲಿ ಕಲ್ಲಿಕೋಟೆ ಸೇರಿ ಕೇವಲ 8 ನಗರಗಳು ಈ ಮಾನ್ಯತೆ ಪಡೆದುಕೊಂಡಿವೆ.

Leave a Comment

Your email address will not be published. Required fields are marked *