Ad Widget .

ದರ್ಶನ್ ಪ್ರಕರಣದ ಬೆನ್ನಲ್ಲೇ ಮತ್ತೆ ಮುನ್ನಲೆಗೆ ಬಂದ ಸೌಜನ್ಯ ಕೊಲೆ ಪ್ರಕರಣ| ಮರುತನಿಖೆಗಾಗಿ ಮುಖ್ಯಮಂತ್ರಿಗಳಿಗೆ ಪತ್ರ

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಪರಪ್ಪನ ಜೈಲು ಸೇರಿದ ಬೆನ್ನಲ್ಲೇ ರಾಜ್ಯದಲ್ಲಿ ಸೌಜನ್ಯ ಪ್ರಕರಣ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಈ ಕುರಿತು ಕೆಲವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

Ad Widget . Ad Widget .

ಪತ್ರದಲ್ಲೇನಿದೆ?
“ನಮ್ಮ ರಾಜ್ಯದ ಮುಖ್ಯಮಂತ್ರಿ ಅದಾ ಸಿದ್ದರಾಮಯ್ಯ ಸರ್ ರವರಿಗೆ ಒಂದು ಮನವಿ. ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿಗಳು ನಟ ದರ್ಶನ್ ಅವರ ಕೇಸ್ ನಲ್ಲಿ ಯಾರೋ ಒತ್ತಡಕ್ಕೂ ಮಣಿಯದೆ ಒಳ್ಳೆ ರೀತಿಯ ತನಿಖೆಯನ್ನು ಮಾಡಿದ್ದಾರೆ. ಅದಕ್ಕೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು ಹಾಗೆ ನಮ್ಮದೊಂದು ಸಣ್ಣ ಮನವಿ. ನಮ್ಮ ಸೌಜನ್ಯ ಹೆಣ್ಣು ಮಗಳ ಕೇಸನ್ನು ಇದೇ ತಂಡಕ್ಕೆ ನೀಡಿ ನಮಗೆ ಅಧಿಕಾರಿಗಳ ಮೇಲೆ ನಂಬಿಕೆ ಇದೆ ಅವರಿಗೆ ನ್ಯಾಯ ಒದಗಿಸುತ್ತಾರೆ”

Ad Widget . Ad Widget .

ಮುಂದುವರೆದು, “ಇದೇ ತನಿಖಾ ತಂಡ ಕಾರ್ಯನಿರ್ವಹಿಸಿದರೆ ಸೌಜನ್ಯ ಸಾವಿಗೆ ನ್ಯಾಯ ಸಿಗುವಂತಾಗಲಿದೆ. ಹೀಗಾಗಿ ದಯವಿಟ್ಟು ಆ ಪ್ರಕರಣದ ತನಿಖೆಯನ್ನು ಈ ಅಧಿಕಾರಿಗಳಿಗೆ ವಹಿಸಿ” ಎಂದು ಹಲವು ನೆಟ್ಟಿಗರು ಸಿಎಂ ರನ್ನ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ?
12 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ಎಂಬಲ್ಲಿ ಉಜಿರೆ ಎಸ್ ಡಿಎಂ‌ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಎಂಬವಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿ, ನ್ಯಾಯಾಲಯವು ಆತನನ್ನು 2023ರಲ್ಲಿ‌ ದೋಷಮುಕ್ತಗೊಳಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಕುಟುಂಬದ ಕುರಿತೂ ಹೋರಾಟಗಾರರು ಆರೋಪ ವ್ಯಕ್ತಪಡಿಸಿದ್ದರು. ಮರುತನಿಖೆ ನಡೆದರೆ ಘಟನೆಯ ಸತ್ಯಾಸತ್ಯತೆ ಬಯಲಾಗಲಿದೆ ಎಂಬುದು ಸೌಜನ್ಯಾ ಕುಟುಂಬ ಹಾಗೂ ಹೋರಾಟಗಾರರ ಅಭಿಪ್ರಾಯ.

Leave a Comment

Your email address will not be published. Required fields are marked *